ಸಾಂಸ್ಕೃತಿಕ ನಗರಿಯಲ್ಲಿ ಮಹಿಷ ದಸರಾ ಸಂಘರ್ಷ: ಕರಾವಳಿಗೂ ಹಬ್ಬಿದ ಮಹಿಷ ದಸರಾ ನಂಟು..!

ಮೈಸೂರು ದಸರಾ ಎಷ್ಟೊಂದು ಸುಂದರ.. ಅದರಲ್ಲೂ ವಿಶ್ವವಿಖ್ಯಾತ ಜಂಬೂ ಸವಾರಿ ನೋಡೋಕೆ ಜನಸಾಗರವೆ ಹರಿದು ಬರುತ್ತೆ. ದಸರಾ ಸಂಭ್ರಮಕ್ಕೆ ಅರಮನೆ ನಗರಿ ಸಜ್ಜಾಗುತ್ತಿದೆ. ಇದರ ಮಧ್ಯೆ ಮೈಸೂರು ದಸರಾ ಸಿದ್ಧತೆಗಿಂತಲೂ ಮಹಿಷ ದಸರಾ ಸದ್ದು ಮಾಡುತ್ತಿದೆ. ಪ್ರಗತಿಪರರ ಮೈಸೂರು ಮಹಿಷಾ ದಸರಾ ವಿರೋಧಿಸಿ ಬಿಜೆಪಿ ಚಾಮುಂಡಿ ಚಲೋಗೆ ಕರೆ ಕೊಟ್ಟಿದೆ. ಇದರ ಬೆನ್ನಲ್ಲೇ ಈಗ ಉಡುಪಿಯಲ್ಲೂ ಮಹಿಷ ದಸರಾ ದಂಗಲ್ ಶುರುವಾಗಿದೆ.

First Published Oct 6, 2023, 10:48 AM IST | Last Updated Oct 6, 2023, 10:48 AM IST

ಮೈಸೂರಿನ ಮಹಿಷ ದಸರಾ ಗದ್ದಲ ಈಗ ಕೃಷ್ಣನಗರಿ ಉಡುಪಿಯಲ್ಲಿಯೂ(Udupi) ಸದ್ದು ಮಾಡುತ್ತಿದೆ. ಉಡುಪಿಯ ಅಂಬೇಡ್ಕರ್ ಯುವಸೇನೆ ಉಡುಪಿಯಲ್ಲಿ ಮಹಿಷ ದಸರಾ(Mahisha dasara) ಆಯೋಜನೆಗೆ ಮುಂದಾಗಿದೆ. ಅಕ್ಟೋಬರ್ 15ಕ್ಕೆ ಉಡುಪಿಯಲ್ಲಿ ಮಹಿಷ ದಸರಾಗೆ ಯುವಸೇನೆ ಸಿದ್ಧತೆ ನಡೆಸಿದ್ದು, ಪ್ರಮುಖ ರಸ್ತೆಯಲ್ಲಿ ಟ್ಯಾಬ್ಲೋ(Tableau) ಮೂಲಕ ಮೆರವಣಿಗೆ ನಡೆಸಿ, ಬಳಿಕ  ವಿಚಾರ ಸಂಕಿರಣ ನಡೆಸಲು ಪ್ಲಾನ್ ಮಾಡಿದ್ದಾರೆ. ಪುರಾಣ ಮತ್ತು ಹಿಂದುತ್ವವನ್ನು ಮತ್ತು ಈಗ ನಡೆಯುವ ಆಚರಣೆಯನ್ನು ನಾವು ವಿರೋಧ ಮಾಡಲ್ಲ. ಆದ್ರೆ, ಇತಿಹಾಸಕಾರರು ಪಠ್ಯದಲ್ಲೂ ಕಥೆಯನ್ನು ತಿರುಚಿದ್ದಾರೆ. ಮಹಿಷ ಮಂಡಲದ ಪ್ರತಿಷ್ಠಿತ ದೊರೆಯನ್ನು ಖಳನಾಯಕನ ರೀತಿ ಚಿತ್ರಿಸಲಾಗಿದೆ ಅನ್ನೋದು ಮಹಿಷ ದಸರಾ ಪರ ನಿಂತವರ ವಾದ. ಅಕ್ಟೋಬರ್ 24ರಂದು ವಿಶ್ವ ವಿಖ್ಯಾತ ಮೈಸೂರು ದಸರಾ ಆಚರಿಸಲು ಅರಮನೆ ನಗರಿ ಸಜ್ಜಾಗುತ್ತಿದೆ. ಇದಕ್ಕೂ ಮುನ್ನ ಪ್ರಗತಿಪರರ ಗುಂಪು ಮಹಿಷ ದಸರಾಕ್ಕೆ ಸಜ್ಜಾಗಿದ್ದು ಮೈಸೂರು ಮತ್ತು ಉಡುಪಿಯಲ್ಲಿ ಮತ್ತೊಂದು ಸಂಘರ್ಷಕ್ಕೆ ಮುನ್ನುಡಿ ಬರೆದಿದೆ. 

ಇದನ್ನೂ ವೀಕ್ಷಿಸಿ:  ಹಿಂದಿ ಘೋಸ್ಟ್‌ ಟ್ರೈಲರ್‌ಗೆ ಕನ್ನಡಕ್ಕಿಂತ ಡಬಲ್, ತ್ರಿಬಲ್ ವೀಕ್ಷಣೆ! ಕನ್ಫ್ಯೂಸ್ ಆದ ಕನ್ನಡ ಪ್ರೇಕ್ಷಕ!