
ಬಾದಾಮಿಯ ಮಹೇಶ್ ಎಸ್. ಹೊಸಗೌಡ್ರುಗೆ ಒಲಿದ ಸುವರ್ಣ ಸಾಧಕರು ಪ್ರಶಸ್ತಿ
ಸಮಾಜಕ್ಕೆ ಕೊಡುಗೆ ನೀಡಿದ ಹಲವಾರು ಸೇವಕರನ್ನು ಗುರುತಿಸುವ ಕಾರ್ಯಕ್ಕೆ ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಮುಂದಾಗಿದೆ.
ಪ್ರತಿವರ್ಷ ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ವತಿಯಿಂದ ಸಾಮಾಜಕ್ಕೆ ಕೊಡುಗೆ ನೀಡಿದ ಹಲವು ಸಾಧಕರನ್ನು ಗೌರವಿಸಲಾಗುತ್ತದೆ. ಅದರಂತೆ ಈ ಬಾರಿಯೂ ಸಮಾಜಕ್ಕೆ ಕೊಡುಗೆ ನೀಡಿದ ಹಲವರನ್ನು ಗುರುತಿಸುವ ಕಾರ್ಯ ನಡೆದಿದ್ದು, ಈ ಬಾರೀ ಬಾದಾಮಿಯ ಶ್ರೀ ಮೈಲಾರ ಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಹೇಶ್ ಎಸ್. ಹೊಸಗೌಡ್ರು(Mahesh S Hosgaudru) ಅವರ ಶಿಕ್ಷಣ(Education) ಕ್ಷೇತ್ರದ ಸಾಧನೆಯನ್ನು ಗುರುತಿಸಲಾಗಿದೆ. ಹಾಗಾಗಿ ಅವರಿಗೆ ಸುವರ್ಣ ಸಾಧಕರು ಪ್ರಶಸ್ತಿಯನ್ನು(Suvarna Sadhakaru Award) ನೀಡಲಾಗಿದೆ. ಗ್ರಾಮೀಣ ಮಟ್ಟದ ಮಕ್ಕಳಿಗೆ ಶಿಕ್ಷಣ ಕೊಡುವುದು ಈ ಸಂಸ್ಥೆಯ ಉದ್ದೇಶವಾಗಿದೆ ಎಂದು ಮಹೇಶ್ ಅವರು ಹೇಳಿದರು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇದನ್ನೂ ವೀಕ್ಷಿಸಿ: ಸುವರ್ಣ ಸಾಧಕರು ಪ್ರಶಸ್ತಿಗೆ ಭಾಜನರಾದ ಬಾಗಲಕೋಟೆಯ ಡಾ. ವಿಠಲ್ ಶ್ಯಾವಿ