Madhu Bangarappa Vs SN Channabasappa |ಪರಸ್ಪರ ಹಸ್ತಲಾಘವ ಮಾಡುತ್ತಿದ್ದ ವೇಳೆ ನಡೆದ ತಿಕ್ಕಾಟ | Suvarna News
ಸಚಿವ ಮಧು ಬಂಗಾರಪ್ಪ ವರ್ಸಸ್ ಶಾಸಕ ಚನ್ನಬಸಪ್ಪ .ಪರಸ್ಪರ ಮುನಿಸು ಪ್ರದರ್ಶಿಸಿದ ಸಚಿವ ಮತ್ತು ಶಾಸಕರು. ಶಿವಮೊಗ್ಗದ ಅಲ್ಲಮಪ್ರಭು ಫ್ರೀಡಂ ಪಾರ್ಕ್ ಮೈದಾನದಲ್ಲಿ ನಡೆದ ಸಮಾರಂಭದ ವೇಳೆ ಮುನಿಸು ಬಹಿರಂಗ . ಅಲ್ಲಮಪ್ರಭು ಫ್ರೀಡಂ ಪಾರ್ಕ್ ನ ಸರ್ವಾಂಗೀಣ ಅಭಿವೃದ್ಧಿಗಾಗಿ ನಡೆದ ಶಂಕುಸ್ಥಾಪನೆ ಸಮಾರಂಭದ ವೇಳೆ ಮುನಿಸು. ಪರಸ್ಪರ ಹಸ್ತಲಾಘವ ಮಾಡುತ್ತಿದ್ದ ವೇಳೆ ನಡೆದ ತಿಕ್ಕಾಟ. ಮಧು ಬಂಗಾರಪ್ಪನವರು ಹಸ್ತಲಾಘವಕ್ಕೆ ಮುಂದಾದಾಗ ಸಚಿವರಿಗೆ ಹಸ್ತ ಲಾಘವ ಮಾಡದೆ ಕೈಮುಗಿದ ಶಾಸಕ ಚನ್ನಬಸಪ್ಪ .ಕಾಂಗ್ರೆಸ್ ಮುಖಂಡ ಅಯನೂರು ಮಂಜುನಾಥ್ ರಿಗೆ ಹಸ್ತ ಲಾಘವ ಮಾಡಿದ ಶಾಸಕರು ನಿಮಗೆ ಮಾಡಲ್ಲ ಎಂದಿದ್ದರು. ಸಚಿವ ಮಧು ಬಂಗಾರಪ್ಪ ಹಸ್ತಲಾಘವಕ್ಕೆ ಮುಂದಾದಾಗ ನೀವು ದೊಡ್ಡವರು ಬಿಡ್ರಿ ನಿಮಗ್ಯಾಕೆ ಅಂತ ಹೇಳಿದ್ದಲ್ಲದೆ ಕೈ ಮುಗಿದು ಬಿಟ್ಟರು. ನಂತರ ಅಕ್ಕ ಪಕ್ಕದಲ್ಲಿರುವ ಆಯನೂರು ಮಂಜುನಾಥ್ ಚೆನ್ನಿ ಹಂಗ್ಯಾಕ್ ಮಾಡುತ್ತೀರಿ ಕೊಡ್ರಿ ಎಂದ್ರು. ಎಲ್ಲರ ಒತ್ತಡದ ಮೇರೆಗೆ ಕೈ ಮುಗಿದಿದ್ದ ಚನ್ನಬಸಪ್ಪ ನಂತರ ಸಚಿವರೊಂದಿಗೆ ಹಸ್ತಲಾಘವ ಮಾಡಿದರಾದರೂ ಮುನಿಸು ದೂರವಾಗಲಿಲ್ಲ. ಇವರಿಬ್ಬರ ಮುನಿಸಿಗೆ ಕಾರಣವಾಗಿದ್ದು ಶಿವಮೊಗ್ಗ ತಾಲೂಕಿನ ಗೋವಿಂದಾಪುರದ ಆಶ್ರಯ ಮನೆಗಳ ಹಂಚಿಕೆ ವಿಚಾರ ಎಂಬುವುದು. ವಸತಿ ಸಚಿವ ಜಮೀರ್ ಅಹ್ಮದ್ ಜೊತೆ ಆಶ್ರಯ ಮನೆಗಳ ಹಂಚಿಕೆಗಾಗಿ ಎರಡೆರಡು ಬಾರಿ ದಿನಾಂಕ ನಿಗದಿ ಪಡಿಸಿಕೊಂಡು ಬಂದಿದ್ದ ಶಾಸಕ ಚನ್ನಬಸಪ್ಪ . ಆದರೆ ಜಿಲ್ಲಾ ಉಸ್ತುವಾರಿ ಸಚಿವ ಅದನ್ನು ಪದೇಪದೇ ಮುಂದೂಡಿಕೆ ಮಾಡಿದ್ದು ಚನ್ನಬಸಪ್ಪನವರ ಆಕ್ರೋಶಕ್ಕೆ ಸಿಟ್ಟಿಗೆ ಕಾರಣವಾಗಿತ್ತು. ಬಡವರ ವಿಷಯದಲ್ಲಿ ಸಚಿವರು ರಾಜಕೀಯ ಮಾಡುತ್ತಾರೆ ಎಂಬುವುದು ಆಕ್ರೋಶಕ್ಕೆ ಕಾರಣವಾಗಿತ್ತು . ಈ ಹಿನ್ನೆಲೆಯಲ್ಲಿ ನಗುನಗುತ್ತಲೆ ಸಚಿವರಿಗೆ ಮಾತಿನ ಚಾಟಿಯ ಬಿಸಿ ಮುಟ್ಟಿಸಿದ ಶಾಸಕ ಚೆನ್ನಬಸಪ್ಪ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared