ಕೈಕೊಟ್ಟ ಮುಂಗಾರು..ಮದಗದ ಕೆರೆ ಖಾಲಿ..ಖಾಲಿ : ಕುಡಿಯುವ ನೀರಿಗೂ ಸಮಸ್ಯೆ ಎದುರಾಗುವ ಆತಂಕ
ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಮದಗದ ಕೆರೆ ನೀರಿಲ್ಲದೇ ಖಾಲಿಯಾಗಿದ್ದು, ರೈತಾಪಿ ವರ್ಗ ಮತ್ತು ಜನತೆ ಆತಂಕದಲ್ಲಿದ್ದಾರೆ.
ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನ ಎಂಎ ದೊಡ್ಡಿ ಗ್ರಾಮದ ಮದಗದ ಕೆರೆ ನೀರಿಲ್ಲದೆ ಖಾಲಿಯಾಗಿದ್ದು, ಸುತ್ತಮುತ್ತಲಿನ ಜನ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಮುಳ್ಳಯ್ಯನ ಗಿರಿ, ದತ್ತಪೀಠದಲ್ಲಿ ಸುರಿಯುವ ಮಳೆಯಿಂದ ಈ ಕೆರೆ ತುಂಬುತ್ತಿತ್ತು. ಈ ಕೆರೆಯಿಂದ ಇಡೀ ಕಡೂರು ತಾಲೂಕಿಗೆ ಕುಡಿಯುವ ನೀರನ್ನು ಒದಗಿಸಲಾಗುತ್ತಿತ್ತು. ಚಿತ್ರದುರ್ಗದವರೆಗೂ ಕೆರೆಯ ನೀರು ಹೋಗುತ್ತದೆ. ಇದೀಗ ಕೆರೆ ಖಾಲಿಯಾಗಿರುವುದರಿಂದ 36 ಹಳ್ಳಿಗಳ ಜನರಿಗೆ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಲಿದೆ. ಕೆರೆ 67 ಅಡಿ ಆಳವಿದ್ದು, ನೀರಿಲ್ಲದಿರುವುದರಿಂದ ರೈತಾಪಿ ವರ್ಗದಲ್ಲಿ ಆತಂಕ ಶುರುವಾಗಿದೆ.
ಇದನ್ನೂ ವೀಕ್ಷಿಸಿ: ಅನ್ನಭಾಗ್ಯ ಯೋಜನೆ ಜಾರಿ: ಸರ್ಕಾರದ ನೆರವಿಗೆ ಮುಂದಾದ ಅಕ್ಕಿ ಗಿರಣಿ ಮಾಲೀಕರು!