ನಾಗೇಂದ್ರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಲಾಬಿ: ವಾಲ್ಮೀಕಿ ಸಮುದಾಯದ ನಾಯಕರಿಗೆ ನೀಡುವಂತೆ ಆಗ್ರಹ!

ಪ್ರಾದೇಶಿಕವಾರು ಬಳ್ಳಾರಿಗೇ ಸಚಿವ ಸ್ಥಾನ ನೀಡಬೇಕೆಂದು ಹಲವರ ಒತ್ತಾಯ 
ಕಲ್ಯಾಣ ಕರ್ನಾಟಕ ಭಾಗಕ್ಕೆ ನೀಡಿದರೆ ಉತ್ತಮ ಎಂಬ ಅಭಿಪ್ರಾಯ ಕೆಲವರದ್ದು 
ಸಚಿವ ಶಿವರಾಜ ತಂಗಡಗಿಯಿಂದಲೂ ಪರಿಶಿಷ್ಟ ಪಂಗಡಗಳ ಖಾತೆಗೆ  ಲಾಬಿ 

First Published Jun 17, 2024, 1:02 PM IST | Last Updated Jun 17, 2024, 1:03 PM IST

ಸಚಿವ ನಾಗೇಂದ್ರ (Minister Nagendra) ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಲಾಬಿ ನಡೆಸಲಾಗುತ್ತಿದೆ. ಪರಿಶಿಷ್ಟ ಪಂಗಡಗಳ ಇಲಾಖೆ ಪಡೆಯಲು ಹಲವರಿಂದ ಪ್ರಯತ್ನ ಮಾಡಲಾಗುತ್ತಿದೆ. ಸದ್ಯ ಯಾರಿಗೂ ಸಿಎಂ ಸಿದ್ದರಾಮಯ್ಯ(Siddaramaiah) ಖಾತೆಯನ್ನು ಹಂಚಿಲ್ಲ. ತಮ್ಮ ಬಳಿಯೇ ಖಾತೆಯನ್ನು ಸಿಎಂ ಇರಿಸಿಕೊಂಡಿದ್ದಾರೆ. ಹಲವರಿಂದ ಪರಿಶಿಷ್ಟ ಪಂಗಡಗಳ ಖಾತೆಗೆ ಪಡೆಯಲು ಲಾಬಿ ನಡೆದಿದ್ದು, ಪರಿಶಿಷ್ಟ ಪಂಗಡಗಳ ಸಮುದಾಯಕ್ಕೆ ಅದೇ ಖಾತೆ ನೀಡಿ ಎಂದು ಸಿಎಂ ಸಿದ್ದರಾಮಯ್ಯಗೆ ವಾಲ್ಮೀಕಿ ಸಮುದಾಯದ(Valmiki community) ಸಚಿವರು ಒತ್ತಾಯ ಮಾಡುತ್ತಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ ಹಾಗೂ ಸಚಿವ ರಾಜಣ್ಣರಿಂದ ಆಗ್ರಹ ಕೇಳಿಬಂದಿದೆಯಂತೆ. ವಾಲ್ಮೀಕಿ ಸಮುದಾಯದ ನಾಯಕರಿಗೆ ನೀಡೆಬೆಂಕೆಂದಿರುವ ಇಬ್ಬರು ಸಚಿವರು. ಕೊಪ್ಪಳ ಬಳ್ಳಾರಿ ಭಾಗದಲ್ಲಿ ಹೆಚ್ಚು ವಾಲ್ಮೀಕಿ ಸಮುದಾಯವಿದೆ. ನನಗೆ ಅವಕಾಶ ಮಾಡಿಕೊಡಿ ಎಂದು ಶಿವರಾಜ್ ತಂಗಡಗಿ(Shivaraj Thandagi) ಕೇಳಿದ್ದಾರಂತೆ. ಆದರೆ ಸಿಎಂ ಮನಸ್ಸಿನಲ್ಲಿರೋದೆ ಮತ್ತೊಂದು ಆಲೋಚನೆ. ತನಿಖೆ ನಡೆದು ವರದಿ ಬರುವ ತನಕ  ಖಾತೆ ನೀಡದಿರಲು ನಿರ್ಧಾರ ಮಾಡಿದ್ದಾರಂತೆ. ತಮ್ಮ ಬಳಿಯೇ ಖಾತೆ ಉಳಿಸಿಕೊಳ್ಳಲು ಸಿಎಂ ತೀರ್ಮಾನಿಸಿದ್ದಾರೆ ಎನ್ನಲಾಗ್ತಿದೆ.

ಇದನ್ನೂ ವೀಕ್ಷಿಸಿ:  ಐವರ ಜಾಲಕ್ಕೆ ಸಿಲುಕಿದ ಡಿ-ಗ್ಯಾಂಗ್..ತಪ್ಪಿಸಿಕೊಳ್ಳೋದು ಡೌಟ್? ಕೊಲೆ ಕೇಸ್‌ಗೆ ಶಕ್ತಿ ತುಂಬಿದ ಸಿಎಂ..!