ಐವರ ಜಾಲಕ್ಕೆ ಸಿಲುಕಿದ ಡಿ-ಗ್ಯಾಂಗ್..ತಪ್ಪಿಸಿಕೊಳ್ಳೋದು ಡೌಟ್? ಕೊಲೆ ಕೇಸ್‌ಗೆ ಶಕ್ತಿ ತುಂಬಿದ ಸಿಎಂ..!

ರೀಲ್ ಹೀರೋ ದರ್ಶನ್ನನ್ನು ಬಂಧಿಸಿದ ರಿಯಲ್ ಹೀರೋಸ್..!
ದರ್ಶನ್ ಬಂಧನಕ್ಕೆ ಪಕ್ಕಾ ಪ್ಲಾನ್ ಮಾಡಿದ್ದ ದಕ್ಷ ಅಧಿಕಾರಿಗಳು
ಡಿಸಿಪಿ ಗಿರೀಶ್, ಎಸಿಪಿ ಚಂದನ್ ಕುಮಾರ್ ಕಾರ್ಯಕ್ಕೆ ಶ್ಲಾಘನೆ

Share this Video
  • FB
  • Linkdin
  • Whatsapp

ನಟ ದರ್ಶನ್‌(Actor Darshan) ಮತ್ತು ಗ್ಯಾಂಗ್‌ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ(Renukaswamy murder case) ಬಂಧನವಾಗಿದ್ದು, ಈಗಾಗಲೇ 19 ಆರೋಪಿಗಳನ್ನು ಬಂಧಿಸಲಾಗಿದೆ. ಇವರ ಬಂಧನಕ್ಕೆ 21 ಸಾಕ್ಷಿಗಳನ್ನು ಕಲೆ ಹಾಕಲಾಗಿದೆ. ಇವರ ಬಂಧನಕ್ಕೆ ಮುಂದಾಗಿದ್ದವರು ಐವರು ಸೂಪರ್‌ ಪೊಲೀಸ್‌ ಅಧಿಕಾರಿಗಳು. ಅಲ್ಲದೇ ಈ ಪ್ರಕರಣದಲ್ಲಿ ಯಾರೂ ಒತ್ತಡ ಹೇರಬಾರದು ಎಂದು ಸಿಎಂ ಸಿದ್ದರಾಮಯ್ಯ(Siddaramaiah) ವಾರ್ನ್‌ ಸಹ ಮಾಡಿದ್ದಾರೆ. ಇನ್ನೂ ಈ ಪ್ರಕರಣವನ್ನು ಮುಚ್ಚಿಹಾಕಲು ಹಲವರು ಪ್ರಭಾವಿ ನಾಯಕರು ಒತ್ತಡವನ್ನು ಹೇರುತ್ತಿದ್ದಾರೆ ಎಂದು ತಿಳಿದುಬಂದಿದೆ. ನಟ ದರ್ಶನ್‌ನನ್ನು ಮೈಸೂರಿನಲ್ಲಿ ಬಂಧಿಸಿದ್ದು ಎಸಿಪಿ ಚಂದನ್ ಕುಮಾರ್. ಮೃತ ಕುಟುಂಬಕ್ಕೆ ನ್ಯಾಯ ಕೊಡಿಸಲು SSP ನೇಮಕ ಮಾಡಲಾಗಿದೆ. ಅಲ್ಲದೇ ಪ್ರಸನ್ನ ಕುಮಾರ್ ಹೆಸರು ಕೇಳಿ ಡಿ ಬಾಸ್‌-ಗ್ಯಾಂಗ್ ಶಾಕ್‌ ಕೂಡ ಆಗಿದೆ. 

ಇದನ್ನೂ ವೀಕ್ಷಿಸಿ:  ರೇಣುಕಾಸ್ವಾಮಿ ಹತ್ಯೆ ಪ್ರಕರಣ ತನಿಖೆ ಬಳಿಕ ವರದಿ ಬರುತ್ತೆ, ಕಾನೂನು ಕ್ರಮ ಆಗುತ್ತೆ: ಗೃಹ ಸಚಿವ ಜಿ. ಪರಮೇಶ್ವರ್​

Related Video