Asianet Suvarna News Asianet Suvarna News

ಹಾಲಿ, ಮಾಜಿ ಶಾಸಕರ ನಡುವೆ ಮದ್ಯಸಾರ ಫೈಟ್: ಲಿಕ್ಕರ್ ಪ್ರಕರಣದ ಹಿಂದಿರುವ ಕೈ ಯಾರದ್ದು..?

ಅಬಕಾರಿ ಇಲಾಖೆ ಅಧಿಕಾರಿಗಳು ಬೃಹತ್ ಬೇಟೆಯಾಡಿದ್ದು, ಕೋಟಿ ಕೋಟಿ ಮೌಲ್ಯದ ಮದ್ಯ ಉತ್ಪಾದಿಸಬಹುದಾದ ಮದ್ಯಸಾರವನ್ನು ವಶಕ್ಕೆ ಪಡೆದಿದ್ದಾರೆ. ಮದ್ಯ ಸಾರ ಹಿಡಿದ ವಿಚಾರದಲ್ಲಿ ಶಾಸಕ ಸತೀಶ್ ಸೈಲ್ ವಿರುದ್ಧ ಮಾಜಿ ಶಾಸಕಿ ರೂಪಾಲಿ ನಾಯ್ಕ್ ಭ್ರಷ್ಟಾಚಾರದ ಆರೋಪ ಮಾಡಿದ್ರೆ, ರೂಪಾಲಿ ನಾಯ್ಕ್ ಮೇಲೆಯೇ ಸತೀಶ್ ಸೈಲ್ ಕೌಂಟರ್ ಅಟ್ಯಾಕ್ ಮಾಡಿದ್ದಾರೆ. 
 

ಬೀದರ್‌ನಿಂದ ಗೋವಾದ ಕಾಣಕೋಣದತ್ತ ನವೆಂಬರ್ 4ರಂದು ಬೆಳಗ್ಗೆ 7ಕ್ಕೆ 18 ಲಕ್ಷ ರೂ. ಮೌಲ್ಯದ 30,000 ಲೀಟರ್ ENA ಮದ್ಯಸಾರವನ್ನು ಹೊತ್ತೊಯ್ಯಲಾಗ್ತಿತ್ತು. ಖಚಿತ ಮಾಹಿತಿ ಮೇರೆಗೆ  ಕಾರವಾರದ(Karwar) ಮಾಜಾಳಿ ಚೆಕ್‌ಪೋಸ್ಟ್‌ನಲ್ಲಿ ಆ ಟ್ಯಾಂಕರ್ನ್ನು ವಶಕ್ಕೆ ಪಡೆಯಲಾಗಿದೆ. ಹುಬ್ಬಳ್ಳಿಯಿಂದ ಯಲ್ಲಾಪುರ ಮಾರ್ಗವಾಗಿ ಕಾರವಾರಕ್ಕೆ ಬಂದಿದ್ದ ಮದ್ಯಸಾರದ ವಾಹನವನ್ನು ಅಬಕಾರಿ ಅಧಿಕಾರಿಗಳು(Excise Department) ವಶಕ್ಕೆ ಪಡೆದಿದ್ದಾರೆ.ಮದ್ಯಸಾರದ ಅಸಲೀಯತ್ತಿ‌ನ ಪರೀಕ್ಷೆಗೆ ಕಳುಹಿಸಲಾಗಿತ್ತು. ಧಾರವಾಡ, ಹಳಿಯಾಳದಿಂದ ದೊರೆತ ವರದಿಯಲ್ಲಿ ಹೈಗ್ರೇಡ್ ENA ಎಂದು ಫಲಿತಾಂಶ ಬಂದಿದೆ. ಈ ಹಿನ್ನೆಲೆ 18 ಲಕ್ಷದ 24 ಸಾವಿರದ 923 ರೂ. ಮೌಲ್ಯದ 30,000 ಲೀಟರ್ ಮದ್ಯಸಾರದ ಜತೆ, 35 ಲಕ್ಷ ರೂ. ಮೌಲ್ಯದ ಎಂಪಿ ನೋಂದಣಿಯ ಟ್ಯಾಂಕರ್ ಅನ್ನು ವಶಪಡಿಸಿಕೊಂಡಿದ್ದಾರೆ. ಈ ಮದ್ಯಸಾರವನ್ನು ಬಳಸಿ ನ್ಯೂಟ್ರಲ್ ಸ್ಪಿರಿಟ್‌ನೊಂದಿಗೆ 90,000ಲೀ. ಮದ್ಯ(Liquor) ತಯಾರಿಕೆ ಮಾಡಬಹುದಾಗಿದೆ. ಕಡಿಮೆಯೆಂದರೂ 3.66 ಕೋಟಿ ರೂ. ಮೌಲ್ಯದ ಅಕ್ರಮ ಮದ್ಯಗಳನ್ನು ತಯಾರಿಸಬಹುದಾಗಿದೆ. ಈ ಪ್ರಕರಣ ಸಂಬಂಧ ಮಧ್ಯಪ್ರದೇಶ ಇಂದೋರದ ಮಗ್ಗರ್ ಸಿಂಗ್ ಎಂಬಾತನನ್ನು ಬಂಧಿಸಿದ್ದು, ಬೀದರ್‌ ಮಿರ್ಜಾಪುರದ ರವೀಂದ್ರ ಆ್ಯಂಡ್ ಕಂಪೆನಿ ಲಿಮಿಟೆಡ್ ಹಾಗೂ ಗೋವಾದ ಗ್ಲೋಬಲ್ ಕೆಮಿಕಲ್ಸ್ ಮಾರ್‌ಗಾವ್ ಕಂಪೆನಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಾಜಾಳಿ ಚೆಕ್ಪೋಸ್ಟ್ನಲ್ಲಿ ಪತ್ತೆಯಾದ ಮದ್ಯಸಾರ ಕೇಸ್ ಈಗ ಕಾರವಾರ ಹಾಲಿ, ಮಾಜಿ  ಶಾಸಕರ ವಾಗ್ಯುದ್ಧಕ್ಕೆ ಕಾರಣವಾಗಿದೆ. ಅಬಕಾರಿ ಅಧಿಕಾರಿಗಳನ್ನು ಪ್ರಶ್ನಿಸಿದ್ದ ಶಾಸಕ ಸತೀಶ್ ಸೈಲ್ ವಿರುದ್ಧ ಬಿಜೆಪಿಗರು ಭ್ರಷ್ಟಾಚಾರದ ಆರೋಪ ಮಾಡಿದ್ದರು. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಮಾಜಿ ಶಾಸಕಿ ರೂಪಾಲಿ ನಾಯ್ಕ್ ಲಿಕ್ಕರ್ ಹಗರಣದಲ್ಲಿ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಹಾಗೂ ಆಪ್ತರು ಭಾಗಿಯಾಗಿದ್ದಾರೆ. ಶಾಸಕ ಸತೀಶ್ ಸೈಲ್ ತಮ್ಮ ಸ್ಥಾನಕ್ಕೆ‌ ರಾಜೀನಾಮೆ‌ ನೀಡಬೇಕೆಂದು ಒತ್ತಾಯಿಸಿದ್ದಾರೆ. ಇದಕ್ಕೆ ತಿರುಗೇಟು ಕೊಟ್ಟ ಸತೀಶ್ ಸೈಲ್, ಗೋವಾದಲ್ಲಿ ಇರೋದು ಬಿಜೆಪಿ ಸರ್ಕಾರ. ಮಾಜಿ ಶಾಸಕರ ಸಹಾಯದಿಂದಲೇ ಈ ಮದ್ಯಸಾರ ಗೋವಾಕ್ಕೆ ಸಾಗಾಟವಾಗುತ್ತಿತ್ತು ಎಂದಿದ್ದಾರೆ.

ಇದನ್ನೂ ವೀಕ್ಷಿಸಿ:  ಬೀದಿ ಬದಿ ವ್ಯಾಪಾರಿಗಳಿಗೆ ಬಿಬಿಎಂಪಿ ಶಾಕ್: ಪಾಲಿಕೆ ವಿರುದ್ಧವೇ ಹೋರಾಟಕ್ಕಿಳಿದ ವ್ಯಾಪಾರಿಗಳು

Video Top Stories