Asianet Suvarna News Asianet Suvarna News

ಬೀದಿ ಬದಿ ವ್ಯಾಪಾರಿಗಳಿಗೆ ಬಿಬಿಎಂಪಿ ಶಾಕ್: ಪಾಲಿಕೆ ವಿರುದ್ಧವೇ ಹೋರಾಟ

ದೀಪಾವಳಿಗೆ ಭರ್ಜರಿ ವ್ಯಾಪಾರದ ನಿರೀಕ್ಷೆಯಲ್ಲಿದ್ದ ಬೀದಿಬದಿ ವ್ಯಾಪಾರಿಗಳಿಗೆ ಬಿಬಿಎಂಪಿ ಶಾಕ್ ಕೊಟ್ಟಿದೆ. ಬಿಬಿಎಂಪಿ ನಿರ್ಧಾರದ ವಿರುದ್ದ ಬೀದಿಬದಿ ವ್ಯಾಪಾರಿಗಳು ತೊಡೆತಟ್ಟಿದ್ದಾರೆ. 
 

ಒಂದು ಕಡೆ ಬೀದಿ ಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸುತ್ತಿರುವ ಬಿಬಿಎಂಪಿ. ಇನ್ನೊಂದು ಕಡೆ ಬಿಬಿಎಂಪಿ(BBMP) ಕಮಿಷನರ್ ವಿರುದ್ದ ರೊಚ್ಚಿಗೆದ್ದಿರುವ ಬೀದಿಬದಿ ವ್ಯಾಪಾರಿಗಳು. ಈ ದೃಶ್ಯ ಕಂಡು ಬಂದಿದ್ದು ಸಿಲಿಕಾನ್ ಸಿಟಿ ಬೆಂಗಳೂರಲ್ಲಿ(Bengaluru). ದೀಪಾವಳಿ ಹಬ್ಬಕ್ಕೆ ಭರ್ಜರಿ ವ್ಯಾಪಾರದ ಖುಷಿಯಲ್ಲಿದ್ದ ಬೀದಿ ಬದಿ ವ್ಯಾಪಾರಿಗಳಿಗೆ ಬಿಬಿಎಂಪಿ ಶಾಕ್ ಕೊಟ್ಟಿದೆ. ದೀಪಾವಳಿ ಹೊತ್ತಲ್ಲೇ ಅನಧಿಕೃತ ಬೀದಿ ಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಲು ಹೊರಟಿದೆ. ಮಲ್ಲೇಶ್ವರಂ, ಜಯನಗರದಲ್ಲಿ ಈಗಾಗಲೇ ಬೀದಿಬದಿ ವ್ಯಾಪಾರಿಗಳನ್ನು(street vendors) ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದೆ. .ಚಿಕ್ಕಪೇಟೆ, ಗಾಂಧಿನಗರ, ಶಿವಾಜಿನಗರ, ಯಶವಂತಪುರ ಸೇರಿ ಇತರ ಕಡೆಗಳಲ್ಲೂ ಫುಟ್ಪಾತ್ ವ್ಯಾಪಾರಿಗಳಿಗೆ ನೋಟಿಸ್ ಕೊಡುತ್ತಿದೆ. ನಮಗೆ ಮೊದಲೇ ಹಿಂದಿಲ್ಲ, ಮುಂದಿಲ್ಲ. ಬೀದಿ ಬದಿ ವ್ಯಾಪಾರ ಮಾಡಿ ಜೀವನ ಮಾಡ್ಕೋತ್ತಿದ್ದೀವಿ. ದೀಪಾವಳಿ ಹಬ್ಬದ ವ್ಯಾಪಾರಕ್ಕೆ ಸಾವಿರಾರು ರೂಪಾಯಿ ಬಂಡವಾಳ ಹಾಕಿ ವಸ್ತುಗಳನ್ನ ತಂದಿದ್ದೇವೆ. ಇದಕ್ಕೂ ಅಡ್ಡಿ ಮಾಡಿದ್ರೆ ಹೇಗೆ ಎಂದು ವ್ಯಾಪಾರಿಗಳು ಕಣ್ಣೀರಿಡ್ತಿದ್ದಾರೆ. ಇನ್ನು ತೆರೆವು ಕಾರ್ಯಚರಣೆಗೆ ಇಳಿದ ಬಿಬಿಎಂಪಿ ವಿರುದ್ಧ ಬೀದಿಬದಿ ವ್ಯಾಪಾರಿಗಳು ಹೋರಾಟಕ್ಕೆ ಮುಂದಾಗಿದ್ದಾರೆ. ಜಯನಗರದಲ್ಲಿ ತೆರವು ಕಾರ್ಯಾಚರಣೆ ಖಂಡಿಸಿ ಇಂದು ಬೃಹತ್ ಪ್ರತಿಭಟನೆಯನ್ನೂ ಹಮ್ಮಿಕೊಂಡಿದೆ. ಕೇಂದ್ರದಿಂದ ಬೀದಿ ಬದಿ ವ್ಯಾಪಾರಕ್ಕೆ ಅವಕಾಶ ಇದ್ದರೂ, ನಮ್ಮನ್ನು ಬೀದಿಯಲ್ಲಿ ನಿಲ್ಲಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

ಇದನ್ನೂ ವೀಕ್ಷಿಸಿ:  ಕಿಯೋನಿಕ್ಸ್‌ ಎಂಡಿ ಮೇಲಿದ್ಯಾ ಸರ್ಕಾರದ ಕೃಪಾ ಕಟಾಕ್ಷ? ರಜೆಯಲ್ಲಿದ್ರೂ ಗುತ್ತಿಗೆದಾರರ ಫೈಲ್‌ ತರಿಸಿಕೊಂಡಾ ಸಂಗಪ್ಪ ?

Video Top Stories