ಒಕ್ಕಲಿಗ ಯುವ ಬ್ರಿಗೇಡ್‌ ವತಿಯಿಂದ ಸನ್ಮಾನ: ನ್ಯಾ. ಚಂದ್ರಶೇಖರಯ್ಯಗೆ ಜೀವಮಾನ ಸಾಧನೆಗೆ ಪ್ರಶಸ್ತಿ

ನ್ಯಾಯಮೂರ್ತಿ ಚಂದ್ರಶೇಖರಯ್ಯ ಜೀವಮಾನ ಸಾಧನೆ ಅಭಿನಂದನೆ ಸ್ವೀಕರಿಸಿ, ಈ ಸನ್ಮಾನಕ್ಕೆ ನಾನು ಅರ್ಹನೋ ಅಲ್ವೋ ಅನ್ನೋದು ಗೊತ್ತಿಲ್ಲ ಎಂದರು.

First Published Jun 30, 2024, 11:47 AM IST | Last Updated Jun 30, 2024, 11:48 AM IST

ಒಕ್ಕಲಿಗ ಯುವಬ್ರಿಗೇಡ್ ವತಿಯಿಂದ ನ್ಯಾಯಮೂರ್ತಿ ಚಂದ್ರಶೇಖರಯ್ಯನವರಿಗೆ(Justice Chandrashekharaiah)ಜೀವಮಾನ ಸಾಧನೆಯ ಅಭಿನಂದನಾ (Lifetime Achievement Award) ಸಮಾರಂಭ ಮತ್ತು ಮಣ್ಣಿನ ಮಕ್ಕಳ ಹೆಮ್ಮೆಯ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಅರಮನೆ ರಸ್ತೆಯಲ್ಲಿರುವ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ನ ಕೇಂದ್ರ ಕಚೇರಿಯ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬಾಲಗಂಗಾಧರನಾಥ ಸ್ವಾಮೀಜಿಗಳ (Balagangadharanatha Swamiji) ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ  ಆದಿಚುಂಚನಗಿರಿ ಮಹಾಸಂಸ್ಥಾನದ(Adichunchanagiri Mutt) ಡಾ. ನಿರ್ಮಲಾನಂದ ಮಹಾಸ್ವಾಮೀಜಿ ಭಾಗವಹಿಸಿ ಆಶಿರ್ವಾಚನ ನೀಡಿದರು. ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಡಿವಿ ಸದಾನಂದಗೌಡ, ಪರಿಷತ್ ಸದಸ್ಯ ಸಿಟಿ‌ರವಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಜೀವಮಾನ ಸಾಧನೆ ಅಭಿನಂದನೆ ಸ್ವೀಕರಿಸಿದ ನ್ಯಾಯಮೂರ್ತಿ ಚಂದ್ರಶೇಖರಯ್ಯ ಈ ಸನ್ಮಾನಕ್ಕೆ ನಾನು ಅರ್ಹನೋ ಅಲ್ವೋ ಅನ್ನೋದು ಗೊತ್ತಿಲ್ಲ. ಅಧಿಕಾರದಲ್ಲಿದ್ದಾಗ ಬಡವರು, ದಲಿತರ ಪರವಾಗಿ ನಾನು ಕೆಲಸ ಮಾಡಿದ್ದೇನೆ. ಬಹುಶಃ ಈ ಕೆಲಸವನ್ನು ಗುರುತಿಸಿ ನನಗೆ ಈ ಸನ್ಮಾನ ಆಯೋಜಿಸಿದ್ದಾರೆ. ಹಾಗಾಗಿ ಸಂತೋಷವಾಗ್ತಿದೆ ಎಂದರು.

ಇದನ್ನೂ ವೀಕ್ಷಿಸಿ:  ಭಾವರಾಮಾಯಣ ರಾಮಾವತರಣ ಪುಸ್ತಕ ಲೋಕಾರ್ಪಣೆ: ಹೊಸಕರೆಹಳ್ಳಿಯ ಪಿಇಎಸ್‌ ವಿಶ್ವವಿದ್ಯಾಲಯದಲ್ಲಿ ಕಾರ್ಯಕ್ರಮ