ಭಾವರಾಮಾಯಣ ರಾಮಾವತರಣ ಪುಸ್ತಕ ಲೋಕಾರ್ಪಣೆ: ಹೊಸಕರೆಹಳ್ಳಿಯ ಪಿಇಎಸ್‌ ವಿಶ್ವವಿದ್ಯಾಲಯದಲ್ಲಿ ಕಾರ್ಯಕ್ರಮ

ಬೆಂಗಳೂರಿನ PES ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಭಾವರಾಮಾಯಣ ರಾಮಾವತರಣ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಂಭಾಗಣದ ತುಂಬಾ ಈ ಒಂದು ಕ್ಷಣಕ್ಕಾಗಿ ಜನ ಕಾದು ಕುಳಿತಿದ್ರು.

Share this Video
  • FB
  • Linkdin
  • Whatsapp

ಎಲ್ಲೆಡೆ ಹಬ್ಬದ ವಾತಾವಣ, ಅತಿಥಿ ಗಣ್ಯರನ್ನು ನಗುಮುಖದಿಂದ ಸ್ವಾಗತಿಸುತ್ತಿದ್ದ ಮಹಿಳೆಯರು, ಅತ್ತಿತ್ತ ಓಡಾಡುತ್ತಿದ್ದ ಮಕ್ಕಳು, ಕ್ಯೂ ನಿಂತು ಪುಸ್ತಕ ಖರೀದಿಸುತ್ತಿದ್ದ ಪುಸ್ತಕ ಪ್ರಿಯರು. ರಾಮಯಣದ ಕಥೆ ಸಾರುವ ಭರತನಾಟ್ಯ. ಹೊಸಕರೆಹಳ್ಳಿಯ ಪಿಇಎಸ್ ವಿಶ್ವವಿದ್ಯಾಲಯ ಆವರಣದಲ್ಲಿ ಕಂಡುಬಂದ ದೃಶ್ಯವಿದು. ರಾಮಚಂದ್ರಾಪುರ ಮಠದ (Ramachandrapur Math) ರಾಘವೇಶ್ವರ ಭಾರತೀ ಶ್ರೀಗಳು(Raghaveshwar Bharti Shri) ರಚಿಸಿರುವ ಭಾವರಾಮಾಯಣ ರಾಮಾವತರಣ ಪುಸ್ತಕ (Bhava Ramayana Ramavataram book) ಲೋಕಾರ್ಪಣೆ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು. PES ವಿಶ್ವವಿದ್ಯಾಲಯ ಆವರಣದಲ್ಲಿ ಹಬ್ಬದ ವಾತಾವರಣವೇ ಮನೆ ಮಾಡಿತ್ತು. ಮಂತ್ರಾಲಯದ ಸುಬುಧೇಂದ್ರ ತೀರ್ಥ ಶ್ರೀ, ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ವಿ ಪಾಟೀಲ್ ಉಪಸ್ಥಿರಿದ್ದರು. ನೂರಾರು ಗಣ್ಯರು, ಸಾವಿರಾರು ಸಂಖ್ಯೆಯಲ್ಲಿ ಶ್ರೀರಾಮಚಂದ್ರಪುರ ಮಠದ ಭಕ್ತರು, ಸಾರ್ವಜನಿಕರು ಭಾಗಿಯಾಗಿದ್ದರು. ಭಾವರಾಮಯಣ ರಾಮಾವತರಣ ಕೃತಿಯು ಸಾವಣ್ಣ ಬುಕ್ಸ್ ಪ್ರಕಟಿಸಿದೆ. ಕೇವಲ ಒಂದೇ ತಿಂಗಳಲ್ಲೇ ಐದು ಮುದ್ರಣಗಳನ್ನು ಪೂರ್ಣಗೊಳಿಸಿ ಆರನೇ ಮುದ್ರಣಕ್ಕೆ ಸಿದ್ದವಾಗುತ್ತಿದೆ. ಮೂಲ ರಾಮಾಯಣ ಅರಿಯಲೂ ಹಾಗೂ ಮಹತ್ವ ತಿಳಿಸುವಲ್ಲಿ‌ ಈ ಕೃತಿ ಯಶಸ್ವಿಯಾಗಿದೆ.

ಇದನ್ನೂ ವೀಕ್ಷಿಸಿ: Weekly-Horoscope: ಈ ರಾಶಿಯವರಿಗೆ ವಾರ ಪೂರ್ತಿ ಸಾಲಬಾಧೆ ಕಾಡಲಿದ್ದು, ಸಂಗಾತಿಗಾಗಿ ಹೆಚ್ಚಿನ ಖರ್ಚು ಮಾಡಲಿದ್ದೀರಿ..

Related Video