ಕೆ.ಆರ್.ಎಸ್‌ನಲ್ಲಿ ಚಿರತೆಯ ಕಣ್ಣಾಮುಚ್ಚಾಲೆ: ಬೃಂದಾವನ ಬಂದ್
ಕೆ.ಆರ್.ಎಸ್'ನಲ್ಲಿ ಚಿರತೆ ಕಣ್ಣಾಮುಚ್ಚಾಲೆ ಮುಂದುವರೆದಿದ್ದು, 23 ದಿನಗಳು ಕಳೆದರೂ ಚಿರತೆ ಬೋನಿಗೆ ಬಿದ್ದಿಲ್ಲ.
ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್.ಎಸ್ ಬೃಂದಾವನ ಬಳಿ ಪ್ರತ್ಯಕ್ಷವಾಗಿದ್ದ ಚಿರತೆಯು ಇನ್ನೂ ಪತ್ತೆಯಾಗಿಲ್ಲ. ಪ್ರವಾಸಿಗರ ಸುರಕ್ಷತೆಯಿಂದ ಬೃಂದಾವನ ಬಂದ್ ಮಾಡಲಾಗಿದ್ದು, ಚಿರತೆಯ ಸೆರೆಗೆ ಅರಣ್ಯ ಇಲಾಖೆಯು ಹರಸಾಹಸ ಪಡುತ್ತಿದೆ. ಡ್ಯಾಂ ಸುತ್ತಲೂ ಕ್ಯಾಮೆರಾ ಅಳವಡಿಕೆ ಮಾಡಲಾಗಿದ್ದು, ಚಿರತೆ ಸೆರೆಗೆ 4 ಬೋನ್‌ಅನ್ನು ಇರಿಸಲಾಗಿದೆ. ಕಳೆದ ಒಂದು ವಾರದಿಂದ ಬೃಂದಾವನ ಬಂದ್ ಆಗಿದ್ದು, ಅಕ್ಟೊಬರ್ 22ರಂದು ಮೊದಲ ಬಾರಿಗೆ ಚಿರತೆ ಕಾಣಿಸಿಕೊಂಡಿತ್ತು.
Chikkaballapura: ಗುಡಿಬಂಡೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಡಿಪೋಗೆ ಆಗ್ರಹಿಸಿ ನ.14ರಿಂದ ಧರಣಿ