ಕೆಲವು ತಿಂಗಳ ಹಿಂದೆಯಷ್ಟೆ ಗುಡಿಬಂಡೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಡಿಪೋ ನಿರ್ಮಾಣ ಮಾಡುವಂತೆ ಒತ್ತಾಯಿಸಿ ಗುಡಿಬಂಡೆ ಸಾರಿಗೆ ಘಟಕ ಸ್ಥಾಪನಾ ಹೋರಾಟ ವೇದಿಕೆ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು, ಬೇಡಿಕೆ ಇನ್ನೂ ಈಡೇರದ ಕಾರಣ ನ.14 ಸೋಮವಾರದಿಂದ ಮತ್ತೆ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿದೆ. 

ಚಿಕ್ಕಬಳ್ಳಾಪುರ (ನ.13): ಕೆಲವು ತಿಂಗಳ ಹಿಂದೆಯಷ್ಟೆ ಗುಡಿಬಂಡೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಡಿಪೋ ನಿರ್ಮಾಣ ಮಾಡುವಂತೆ ಒತ್ತಾಯಿಸಿ ಗುಡಿಬಂಡೆ ಸಾರಿಗೆ ಘಟಕ ಸ್ಥಾಪನಾ ಹೋರಾಟ ವೇದಿಕೆ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು, ಬೇಡಿಕೆ ಇನ್ನೂ ಈಡೇರದ ಕಾರಣ ನ.14 ಸೋಮವಾರದಿಂದ ಮತ್ತೆ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿದೆ. ಈ ಕುರಿತು ಹೋರಾಟ ವೇದಿಕೆಯ ಗಂಗಪ್ಪ ಮಾತನಾಡಿ, ತಾಲ್ಲೂಕಿಗೆ ಕೆಂಪು ಬಸ್‌ ಸೇವೆ ಸಲ್ಲಿಸುವಲ್ಲಿ ಕೆ.ಎಸ್‌.ಆರ್‌.ಟಿ.ಸಿ ಸಂಪೂರ್ಣವಾಗಿ ವಿಫಲವಾಗಿದೆ. ರಾಜ್ಯದಲ್ಲಿ ಯಾವುದಾದರು ದೊಡ್ಡ ಕಾರ್ಯಕ್ರಮಗಳು ನಡೆದರೆ, ರಾಜಕೀಯ ಸಮಾವೇಶಗಳಿಗೆ, ಮದುವೆ ಸಮಾರಂಭಗಳಿಗೆ, ಜಾತ್ರೆಗಳಿಗೆ ಸಿಸಿ ಹೆಸರಿನಲ್ಲಿ ಸಾರ್ವಜನಿಕ ಸೇವೆಗೆಂದು ಗ್ರಾಮೀಣ ಪ್ರದೇಶದ ಬಸ್‌ ಗಳು ಸಂಪೂರ್ಣವಾಗಿ ಬಂದ್‌ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಕಳೆದ 6 ತಿಂಗಳಿಂದ ಸುಮಾರು 18 ಬಾರಿ ಈ ರೀತಿ ಬಸ್‌ ಸೇವೆ ಇಲ್ಲದಂದಾಗಿದೆ. ಗುಡಿಬಂಡೆಯಿಂದ ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಗೌರಿಬಿದನೂರು ಸೇರಿದಂತೆ ಇತರೆ ಸ್ಥಳಗಳಿಗೆ ಹೋಗಿಬರುವ ಶಾಲಾ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ, ಪ್ರಯಾಣಿಕರಿಗೆ, ರೋಗಿಗಳಿಗೆಬಹಳ ಸಮಸ್ಯೆಯಾಗಿದೆ. ಇವರೆಲ್ಲರೂ ಖಾಸಗಿ ಸಾರಿಗೆ ಸಂಪರ್ಕವನ್ನು ಅವಲಂಬಿಸುವಂತಾಗಿದೆ.

ಪ್ರತಿಭಟನೆ ನಡೆಸಿದರೂ ಸ್ಪಂದಿಸುತ್ತಿಲ್ಲ: ಈಗಾಗಲೇ ಗುಡಿಬಂಡೆ ಬಸ್‌ ಡಿಪೋಗಾಗಿ ಸಾಕಷ್ಟುಹೋರಾಟಗಳನ್ನು ನಡಸಿದ್ದೇವೆ. ಜೂನ್‌ 29 ರಂದು ಗುಡಿಬಂಡೆ ಬಂದ್‌ ಸಹ ಮಾಡಲಾಗಿತ್ತು. ಸ್ಥಳಕ್ಕೆ ಬಂದಿದ್ದ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಸಾರಿಗೆ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿರುವ ಆದರೆ ಇತ್ತೀಚೆಗೆ ಒಂದು ಹಬ್ಬ ಬಂದರೆ, ಮದುವೆಗಳು, ಅಯ್ಯಪ್ಪ ಸೀಜನ್‌, ರಾಜಕೀಯ ಪಕ್ಷಗಳ ಕಾರ್ಯಕ್ರಮಗಳಿಗೆ ಬಸ್‌ಗಳನ್ನು ಕಳುಹಿಸಿದಾಗಲೆಲ್ಲಾ ಇದೇ ಸಮಸ್ಯೆಯಾಗಿದೆ. ಕೆಂಪೇಗೌಡರ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೂ ಸಹ ಅನೇಕ ಬಸ್‌ಗಳನ್ನು ನಿಯೋಜಿಸಲಾಗಿತ್ತು. ಆದರೆ ಜನರಿಲ್ಲದೆ 15ಕ್ಕೂ ಹೆಚ್ಚು ಬಸ್‌ಗಳು ಪಟ್ಟಣದಲ್ಲೇ ಉಳಿದಿದ್ದವು. ಈ ನಷ್ಟವನ್ನು ಸಹ ಸಾರ್ವಜನಿಕರ ಮೇಲೆ ಹೊರಿಸುತ್ತಾರೆ ಎಂದು ಆರೋಪಿಸಿದರು.

ಖಾಸಗಿ ಸಾರಿಗೆ ವ್ಯವಸ್ಥೆ ಅನಿವಾರ್ಯ: ಗುಡಿಬಂಡೆಗೆ ಸಾರಿಗೆ ಬಸ್‌ ಡಿಪೋ ನೀಡಿ ಇಲ್ಲ ಕೆಂಪುರಹಿತ ಬಸ್‌ ಸೇವೆ ಕಲ್ಪಿಸಲು ನಾವು ಸಿದ್ದವಾಗಿದ್ದೇವೆ. ನಾವು ಮುಂದೆ ಖಾಸಗಿ ಸಾರಿಗೆ ವ್ಯವಸ್ಥೆಗೆ ಮೊರೆಹೋಗಬೇಕಾದ ಪರಿಸ್ಥಿತಿ ಗುಡಿಬಂಡೆಗೆ ನಿರ್ಮಾಣ ಮಾಡಿದ್ದಾರೆ. ಈ ಎಲ್ಲಾ ಕಾರಣಗಳಿಂದ ಮತ್ತೆ ಗುಡಿಬಂಡೆ ಪಟ್ಟಣದ ಡಾ.ಬಿ.ಆರ್‌. ಅಂಬೇಡ್ಕರ್‌ ಪುತ್ಥಳಿ ಮುಂದೆ ಪ್ರತಿಭಟನೆ ಮುಂದುವರೆಸುತ್ತೇವೆ ಎಂದರು.

ಬಿಎಂಟಿಸಿಗೆ ವರದಾನವಾಯ್ತಾ ಎಲೆಕ್ಟ್ರಿಕ್ ಬಸ್, 2030 ರೊಳಗೆ ಬೆಂಗಳೂರಾಗುತ್ತಾ ಎಲೆಕ್ಟ್ರಿಕ್ ಮಯ!

ವಿದ್ಯಾರ್ಥಿ ಬಸ್‌ ಪಾಸ್‌ಗೆ, 24 ಗಂಟೆಯೂ ಮಾನ್ಯ
ಬೆಂಗಳೂರು: ವಿದ್ಯಾರ್ಥಿಗಳು ತಮಗೆ ನೀಡಿರುವ ಬಸ್‌ ಪಾಸ್‌ ಬಳಸಿ ದಿನದ 24 ಗಂಟೆಯೂ ಪ್ರಯಾಣಿಸಬಹುದು ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಸ್ಪಷ್ಟಪಡಿಸಿದೆ.

ಮೆಟ್ರೋ ಮಾದರಿಯಲ್ಲಿ ಬಿಎಂಟಿಸಿ ಬಸ್‌ ಪ್ರಯಾಣಕ್ಕೆ ಸ್ಮಾರ್ಟ್ ಟಿಕೆಟ್‌.!

‘ವಿದ್ಯಾರ್ಥಿ ಪಾಸ್‌’ಗಳಿಗೆ ಸಂಜೆ 7.30 ನಂತರ ಮಾನ್ಯವಿಲ್ಲ ಎಂದು ಕೆಲ ಬಸ್‌ಗಳಲ್ಲಿ ನಿರ್ವಾಹಕರು ವಿದ್ಯಾರ್ಥಿಗಳಿಗೆ ಟಿಕೆಟ್‌ ನೀಡುತ್ತಿದ್ದರು. ಈ ಬಗ್ಗೆ ಬಿಎಂಟಿಸಿ ಕಚೇರಿಗೆ ವಿದ್ಯಾರ್ಥಿಗಳು ದೂರು ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಅಧಿಕಾರಿಗಳು, ಪಾಸ್‌ ಹೊಂದಿರುವ ವಿದ್ಯಾರ್ಥಿಗಳ ಬಳಿ ನಿರ್ವಾಹಕರು ಟಿಕೆಟ್‌ ಪಡೆಯುವಂತಿಲ್ಲ. ವಿದ್ಯಾರ್ಥಿಗಳು ಪಾಸ್‌ ಬಳಸಿ ದಿನದ ಯಾವುದೇ ಸಮಯದಲ್ಲೂ ಸಂಸ್ಥೆಯ ಬಸ್‌ಗಳಲ್ಲಿ ಪ್ರಯಾಣಿಸಬಹುದು ಎಂದು ತಿಳಿಸಿದ್ದಾರೆ.