ರಾಜಧಾನಿ ಬೆಂಗಳೂರಿಗೆ ಶುರುವಾಯ್ತು ಚಿರತೆ ಕಾಟ! ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮತ್ತೊಂದು ಪ್ರತ್ಯಕ್ಷ

ಸಿಲಿಕಾನ್ ಸಿಟಿಗೂ ಚಿರತೆಗೂ ನಂಟು ಸದ್ಯಕ್ಕೆ ಕೊನೆಯಾಗುವ ಲಕ್ಷಣಗಳೇ ಕಾಣ್ತಿಲ್ಲ. ಇದೀಗ ಮತ್ತೊಂದು ಚಿರತೆ ರಾಜಧಾನಿಗೆ ಪಾದಾರ್ಪಣೆ ಮಾಡಿದೆ
 

Share this Video
  • FB
  • Linkdin
  • Whatsapp

ಅರಣ್ಯ ಗಡಿಭಾಗದ ಗ್ರಾಮಗಳಿಗೆ ಲಗ್ಗೆ ಇಡ್ತಿದ್ದ ಚಿರತೆಗಳು, ಐಟಿ ಸಿಟಿ ಬೆಂಗಳೂರಿನಲ್ಲೂ(Bengaluru) ಪ್ರತ್ಯಕ್ಷವಾಗ್ತಿವೆ. ಕಳೆದ ವಾರವಷ್ಟೇ ಕೂಡ್ಲುಗೇಟ್ನಲ್ಲಿ ಚಿರತೆ(Leopard) ಕಾಣಿಸಿಕೊಂಡಿತ್ತು. ಅಪಾರ್ಟ್ಮೆಂಟ್ಗಳಲ್ಲಿ ಓಡಾಡಿ ಜನರನ್ನು ಬೆಚ್ಚಿ ಬೀಳಿಸಿತ್ತು. ಕೊನೆಗೆ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ವೈಫಲ್ಯದಿಂದ ಚಿರತೆ ಮೃತಪಟ್ಟಿತ್ತು. ಇದೀಗ ಮತ್ತೆ ಎಲೆಕ್ಟ್ರಾನಿಕ್ ಸಿಟಿ(Electronic City) ವ್ಯಾಪ್ತಿಯಲ್ಲಿ ಪ್ರತ್ಯಕ್ಷವಾಗಿದೆ. ಕೂಡ್ಲುಗೇಟ್ನಿಂದ ಕೇವಲ ಐದಾರು ಕಿಲೋಮೀಟರ್ ದೂರದಲ್ಲಿರೋ ಎಲೆಕ್ಟ್ರಾನಿಕ್ ಸಿಟಿಯ ಕೂಗಳತೆಯ ಚಿಕ್ಕತೋಗೂರು ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಿದೆ.. ಚಿರತೆ ಓಡಾಟದ ಹೆಜ್ಜೆ ಗುರುತುಗಳು ಪತ್ತೆಯಾಗಿವೆ. ಸ್ಥಳಕ್ಕೆ ದೌಡಾಯಿಸಿದ ಅರಣ್ಯಾಧಿಕಾರಿಗಳು ಚಿರತೆ ಹೆಜ್ಜೆ ಗುರುತನ್ನು ಪರಿಶೀಲಿಸಿದ್ರು. ಚಿರತೆಯನ್ನು ಕಣ್ಣಾರೆ ಕಂಡ ಸ್ಥಳೀಯರಿಂದ ಮಾಹಿತಿ ಪಡೆದ್ರು. ನಿನ್ನೆ ಸಂಜೆ 6 ಗಂಟೆಯಲ್ಲಿ ಜನರು ಚಿರತೆಯನ್ನು ನೋಡಿ ಭಯಭೀತರಾಗಿದ್ದಾರೆ.. ಚಿಕ್ಕತೋಗೂರು ಗ್ರಾಮದ ಮನೆಯೊಂದರ ಕಾಂಪೌಂಡ್ ಒಳಗಿದ್ದ ನಾಯಿಯ ಮೇಲೆ ಆಟ್ಯಾಕ್ ಮಾಡಲು ಚಿರತೆ ಬಂದಿದ್ದನ್ನ ಮನೆಯಲ್ಲಿದ್ದ ಬಾಲಕ ನೋಡಿ ಗಾಬರಿಗೊಂಡಿದ್ದಾನೆ. ಇನ್ನೂ ಇದೇ ಗ್ರಾಮದ ಸಾಕಷ್ಟು ಭಾಗದಲ್ಲಿ ತೋಟ, ಹೊಲಗಳಿವೆ.. ಹೀಗಾಗಿ ಜನರು ಭಯದಲ್ಲೇ ಕಾಲ ಕಳೆಯುವಂತಾಗಿದೆ. ಅರಣ್ಯ ಸಿಬ್ಬಂದಿಗಳು ಜನರಿಗೆ ಎಚ್ಚರಿಕೆ ನೀಡಿದ್ದಾರೆ.. ಒಬ್ಬಂಟಿಯಾಗಿ ಯಾರು ಓಡಾಟ ಮಾಡಬೇಡಿ, ರಾತ್ರಿ ವೇಳೆ ಎಚ್ಚರಿಕೆಯಿಂದ ಇರಿ ಎಂದು ಅನೌನ್ಸ್ ಮಾಡಿದ್ರು..‌ ಇಂದು ರಾತ್ರಿಯೂ ಅರಣ್ಯ ಸಿಬ್ಬಂದಿ ಗಸ್ತು ತಿರುಗಿ ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಇದನ್ನೂ ವೀಕ್ಷಿಸಿ:  ಉಗ್ರರಿಗೆ ಸಾವಿನ ಭಯ ಹುಟ್ಟಿಸಿದ ‘ಟೆಡ್ಡಿಬೇರ್’..! ಇಸ್ರೇಲ್‌ಗೆ ಆಪತ್ತು ಬಂದಾಗೆಲ್ಲ ರಕ್ಷಕನಾಗೋ ಡಿ9ಆರ್ !

Related Video