ಮಲಪ್ರಭಾ, ಘಟಪ್ರಭಾ ನದಿಗಳಿಂದಲೇ ಅಕ್ರಮ ಒತ್ತುವರಿ: ಸರ್ವೇ ಕಾರ್ಯದಲ್ಲಿ ಬಯಲಾಯ್ತು ಅಚ್ಚರಿ ಸತ್ಯ !
ಮಲಪ್ರಭಾ, ಘಟಪ್ರಭಾ ಒಡಲಲ್ಲಿ ಅಕ್ರಮ ಮರಳು ದಂಧೆ ಅನ್ನೋದು ಹಳೇ ಸುದ್ದಿ. ಆದ್ರೆ ಈ ಖತರ್ನಾಕ್ ಕಳ್ಳರು ನದಿಯನ್ನೇ ಕದಿಯುತ್ತಿದ್ದಾರೆ ಅಂದ್ರೆ ನಂಬ್ತೀರಾ. ನದಿಯನ್ನ ಕದಿಯೋದೇಗೆ ಅನ್ನೋ ಅನುಮಾನ ಬಂತಾ.. ಈ ಸ್ಟೋರಿ ನೋಡಿ..
ನನ್ನದು ಅಂತ ಆಸ್ತಿ ಇರಬೇಕು ಅನ್ನೋರೇ ಹೆಚ್ಚು.. ಕಷ್ಟ ಪಟ್ಟು ಕೆಲವರು ಆಸ್ತಿ ಸಂಪಾದನೆ ಮಾಡಿದ್ರೆ, ಮತ್ತೆ ಕೆಲವರು ಭೂಮಿ ಆಸೆಗೆ ಅಕ್ರಮವಾಗಿ ಒತ್ತುವರಿ ಮಾಡಿಕೊಳ್ತಾರೆ. ಇಂಥ ಎಷ್ಟೋ ಕೇಸ್‌ಗಳನ್ನ ನೋಡಿದ್ದೇವೆ. ಆದ್ರೆ, ಬಾಗಲಕೋಟೆಯಲ್ಲಿ(Bagalkot) ನದಿಗಳೇ ಭೂಮಿ ಒತ್ತುವರಿ(Land encrochment) ಮಾಡ್ಕೊಂಡಿವೆ. ಮಲಪ್ರಭಾ ಹಾಗೂ ಘಟಪ್ರಭಾ ನದಿಗಳ ಸರ್ವೇ ಕಾರ್ಯದ ವೇಳೆ ಈ ಒತ್ತುವರಿ ರಹಸ್ಯ ಬಯಲಾಗಿದೆ. ಬಾಗಲಕೋಟೆ ಜಿಲ್ಲೆಯ ಜನರ ಜೀವನಾಡಿಯಾದ ನದಿಗಳೆಂದರೆ(Rivers) ಮಲಪ್ರಭಾ ಹಾಗೂ ಘಟಪ್ರಭಾ. ಘಟಪ್ರಭಾ ನದಿ ಬಾಗಲಕೋಟೆಯ ಮುಧೋಳ ಮತ್ತು ರಬಕವಿ ಬನಹಟ್ಟಿ ತಾಲೂಕಿನಲ್ಲಿ ಹರಿಯುತ್ತೆ. ಬಾದಾಮಿ, ಗುಳೇದಗುಡ್ಡ, ಹುನಗುಂದ, ಇಳಕಲ್ ತಾಲೂಕಿನಲ್ಲಿ ಮಲಪ್ರಭಾ ನದಿ ಹರಿಯುತ್ತೆ. ಆದ್ರೆ ನದಿ ತೀರದ 487 ಎಕರೆ ಜಾಗವನ್ನು ರೈತರು ಒತ್ತುವರಿ ಮಾಡಿ ಸಾಗುವಳಿ ಮಾಡುತ್ತಿದ್ದಾರೆ. ಹೀಗಾಗಿ ನದಿಗಳು ತಾವು ಹರಿಯುವ ದಿಕ್ಕನ್ನೇ ಬದಲಿಸಿ, 665 ಎಕರೆ ಜಮೀನು ಒತ್ತುವರಿ ಮಾಡಿಕೊಂಡಿವೆ.2009 & 2019ರಲ್ಲಿ ಪ್ರವಾಹ(Flood) ಉಂಟಾದಾಗ 71 ಗ್ರಾಮಗಳಿಗೆ ಮಲಪ್ರಭಾ ನದಿ ನೀರು ನುಗ್ಗಿತ್ತು. ಘಟಪ್ರಭಾ ನದಿ ನೀರು ನುಗ್ಗಿ 70 ಗ್ರಾಮಗಳಿಗೆ ಅಪಾರ ಹಾನಿಯಾಗಿತ್ತು. ಹೀಗಾಗಿ ನದಿಗಳ ಸರ್ವೇ ಕಾರ್ಯ ಮಾಡುವಂತೆ ಒತ್ತಾಯ ಕೇಳಿಬಂದಿತ್ತು. ಈಗ ಭೂದಾಖಲೆಗಳ ಇಲಾಖೆ ಸರ್ವೇ ಕಾರ್ಯ ನಡೆಸಿದ್ದು, ಈ ವೇಳೆ ನದಿಗಳು ದಿಕ್ಕು ಬದಲಿಸಿ ಜಮೀನು ಒತ್ತುವರಿಮಾಡಿಕೊಂಡಿದ್ದಾಗಿ ಬೆಳಗಾವಿ ಪ್ರಾದೇಶಿಕ ಆಯುಕ್ತರ ಕಚೇರಿಗೆ ವರದಿ ಸಲ್ಲಿಸಲಾಗಿದೆ.
ಇದನ್ನೂ ವೀಕ್ಷಿಸಿ: ಯುಐ ಟೀಸರ್ ನೋಡಿ ವಿದೇಶಿಗರು ಫಿದಾ ! ಬಾಪ್ ರೇ ಬಾಪ್ ಎಂದ ಪಾಕಿಸ್ತಾನಿ ಯೂಟುಬರ್..!