Asianet Suvarna News Asianet Suvarna News

ಕೆರೆಗಳ ಒಡಲಿಗೆ ಕನ್ನಹಾಕಿದ ಮಾಫಿಯಾ ಗ್ಯಾಂಗ್..! ಧನದಾಹಿಗಳಿಂದ ರೈತರ ಜೀವನಾಡಿ ಕಗ್ಗೊಲೆ !

ಅದು ಕೆರೆಗಳ ನಾಡು ಅಂತಾನೆ ಪ್ರಖ್ಯಾತಿ ಪಡೆದಿರುವ ಜಿಲ್ಲೆ. ಮಳೆ ಇಲ್ಲದೇ ಬತ್ತಿ ಹೋಗುತ್ತಿರುವ ಆ ಕೆರೆಗಳ ಮಣ್ಣಿಗೆ ಹೊರ ರಾಜ್ಯಗಳಲ್ಲೂ ಡಿಮ್ಯಾಂಡ್‌ ಹೆಚ್ಚಿಗೆ.ಇದನ್ನೇ ಬಂಡವಾಳ ಮಾಡಿಕೊಂಡಿರುವ ಕಿಡಿಗೇಡಿಗಳು ಕೆರೆಗಳ ಕೊಲೆ ಮಾಡ್ತಿದ್ದಾರೆ. ಸಕಾ೯ರಕ್ಕೆ ರಾಜಧನವನ್ನು ಪಾವತಿಸದೇ ತಿಂಗಳಿಗೆ ಲಕ್ಷ ಲಕ್ಷ ಸಂಪಾದನೆ ಮಾಡ್ತಿದ್ದಾರೆ.
 

First Published Nov 28, 2023, 10:26 AM IST | Last Updated Nov 28, 2023, 10:26 AM IST

ಕೋಲಾರ ಜಿಲ್ಲೆ ಕೆರೆಗಳ ನಾಡು ಅಂತಾನೆ ಪ್ರಖ್ಯಾತಿ. ಮಳೆ ಬಂದಾಗಲೆಲ್ಲ ತುಬಿಕೊಳ್ಲುವ ಕೆರೆಗಳು(Ponds) ಬೇಸಿಗೆಯಲ್ಲಿ ನೀರಿನ ದಾಹ ತಣಿಸುತ್ತವೆ. ರೈತರ(Farmers) ಜೀವನಾಡಿ ಈ ಕೆರೆಗಳು. ಆದ್ರೆ, ಇತ್ತಿಚಿನ ವರ್ಷಗಳಲ್ಲಿ ಸರಿಯಾದ ಪ್ರಮಾಣದಲ್ಲಿ ಮಳೆಯಿಲ್ಲದೇ ಕೆರೆಗಳು ತುಂಬಿಕೊಳ್ತಿಲ್ಲ. ಬತ್ತಿಹೋಗಿರೋ ಈ ಕೆರೆಗಳು ಈಗ ಮಣ್ಣು ಮಾರಾಟ(Soil Sale) ದಂಧೆಕೋರರ ಖಜಾನೆ ತುಂಬಿಸುತ್ತಿವೆ. ಇಲ್ನೋಡಿ ಕೆರೆಯ ಆಕಾರವನ್ನೇ ಕೆಡಿಸಿಬಿಟ್ಟಿದ್ದಾರೆ. ಕೋಲಾರ(Kolar) ತಾಲೂಕಿನ ತೊಟ್ಲಿ ಗ್ರಾಮದ ಶೆಟ್ಟಿ ಕೆರೆ ಇದು. ಕೆರೆಗಳ್ಳರು ಹಗಲು,ರಾತ್ರಿ ಅಂತ ಲೆಕ್ಕಿಸದೇ ಜೆಸಿಬಿ, ಟ್ರಾಕ್ಟರ್‌ ಬಳಸಿಕೊಂಡು ಮಣ್ಣನ್ನು ಅಕ್ರಮವಾಗಿ ಅಗೆದು ಮಾರಾಟ ಮಾಡುತ್ತಿದ್ದಾರೆ. ಸುಮಾರು 30 ಅಡಿ ಆಳದವರೆಗೂ ಕೆರೆಯ ಮಣ್ಣು ತೆಗೆದು ಮಾರಾಟ ಮಾಡಿದ್ದಾರೆ. ಇಷ್ಟಾದರೂ ಯಾರೊಬ್ಬರು ಹೇಳೋರಿಲ್ಲ ಕೇಳೋರಿಲ್ಲ.ಕೆರೆ ಮಣ್ಣು ತೆಗೆಯಬೇಕಾದ್ರೆ ಸ್ಥಳೀಯ ಗ್ರಾಮ ಪಂಚಾಯ್ತಿ ಹಾಗೂ ಗಣಿ ಇಲಾಖೆ ಅನುಮತಿ ಕಡ್ಡಾಯ. ಆದ್ರೆ, ತೊಟ್ಟಿ ಕೆರೆಯಲ್ಲಿ ಯಾರ ಅನುಮತಿಯನ್ನು ಪಡೆಯದೇ ಎಗ್ಗಿಲ್ಲದೇ ಬೇರೆ ಬೇರೆ ರಾಜ್ಯಗಳಿಗೆ ಮಣ್ಣು ಸಾಗಿಸುತ್ತಿದ್ದಾರೆ. ಸಕಾ೯ರಕ್ಕೂ ರಾಜಧಾನವನ್ನು ಪಾವತಿಸದೇ ರಾಜಾರೋಷವಾಗಿ ಕೆರೆ ಒಡಲಿಗೆ ಕನ್ನಹಾಕುತ್ತಿದ್ದಾರೆ. ಇನ್ನು ತೊಟ್ಲಿ ಗ್ರಾಮ ಪಂಚಾಯ್ತಿಯ ಕೆಲ ಸದಸ್ಯರು ಹಾಗೂ ಜಲಗಾರರೇ ಮಣ್ಣು ಸಾಗಾಣೆಯಲ್ಲಿ ತೊಡಗಿರುವ ಆರೋಪ ಕೇಳಿ ಬಂದಿದೆ.ಕೆರೆ ಮಣ್ಣು ತೆಗೆಯಲು ಅನುಮತಿ ಪಡೆದರು ಕೂಡ ಅದಕ್ಕೊಂದು ನಿಧಿ೯ಷ್ಟ ಸಮಯ ನಿಡಲಾಗುತ್ತೆ.. ಎಷ್ಟು ಆಳ ಹಾಗೂ ಅಗಲ ಅಗೆಯಬೇಕು ಅನ್ನೋ ಸೂಚನೆ ನೀಡಲಾಗುತ್ತೆ.. ಹೀಗೆ ತೆಗೆದ ಕೆರೆ ಮಣ್ಣುನ್ನು ಕೇವಲ ಕೃಷಿ ಚಟುವಟಿಕೆಗಳಿಗೆ ಮಾತ್ರ ಬಳಸಬೇಕು ಅಂತ ಸಕಾ೯ರದ ಆದೇಶವಿದೆ. ಆದ್ರಿಲ್ಲಿ ಎಲ್ಲಾ ನಿಯಮ ಗಾಳಿಗೆ ತೂರಿ ಮನೆಗಳ ಪಾಯದ ಕೆಲಸಕ್ಕೆ, ಇಟ್ಟಿಗೆ ಕಾಖಾ೯ನೆ ಹಾಗೂ ಇನ್ನಿತರ ಖಾಸಗಿ ಕೆಲಸಗಳಿಗೆ ಕೆರೆ ಮಣ್ಣು ಮಾರಾಟಮಾಡಿ ಹಣ ಮಾಡುತ್ತಿದ್ದಾರೆ. ಆಂಧ್ರ, ತಮಿಳುನಾಡು ಹಾಗೂ ಕೇರಳ ರಾಜ್ಯಗಳಿಂದ ವಿವಿಧ ಕೆಲಸಗಳಿಗೆ ಈ ಮಣ್ಣಿಗೆ ಭಾರೀ ಬೇಡಿಕೆ ಇದೆ.

ಇದನ್ನೂ ವೀಕ್ಷಿಸಿ:  ಸರ್ಕಾರಿ ಶಾಲೆ ಮೇಲೆ ಬಿತ್ತು ಭೂ ಬಕಾಸುರರ ಕಣ್ಣು..? ಶಾಲೆ ಭೂಮಿ ಕಬಳಿಸಿ ಬಡಾವಣೆ ನಿರ್ಮಾಣಕ್ಕೆ ಪ್ಲಾನ್!

Video Top Stories