
ಅವ್ಯವಸ್ಥೆಗಳ ಆಗರವಾಗಿರುವ ಕೊಪ್ಪಳ ಜಿಲ್ಲಾಸ್ಪತ್ರೆ: ಕಣ್ಣಿದ್ದು ಕುರುಡಾಗಿದ್ದಾರಾ ಕಿಮ್ಸ್ ನಿರ್ದೇಶಕರು?
ಕೊಪ್ಪಳ ಜಿಲ್ಲಾ ಆಸ್ಪತ್ರೆ ಇಡೀ ಜಿಲ್ಲೆಗೆ ಅತ್ಯಂತ ದೊಡ್ಡ ಆಸ್ಪತ್ರೆ ಅನ್ನೋ ಹೆಗ್ಗಳಿಕೆ ಪಡೆದುಕೊಂಡಿದೆ. ಆದರೆ ಆ ಆಸ್ಪತ್ರೆಗೆ ಹೋಗಿ ದಾಖಲಾಗಲು ರೋಗಿಗಳು ಪರದಾಡಬೇಕಾಗಿದೆ. ನಡೆದುಕೊಂಡು ಹೋಗಲು ಆಗದೇ ಇರೋ ರೋಗಿಗಳು ವೈದ್ಯರ ಬಳಿ ಹೋಗಲು ವೀಲ್ ಚೇರ್, ಸ್ಟ್ರೆಚರ್ಗಾಗಿ ಗಂಟೆಗಟ್ಟಲೆ ಕಾಯಬೇಕಾಗಿದೆ.
ಕೊಪ್ಪಳ (ನ.29): ಕೊಪ್ಪಳ ಜಿಲ್ಲಾ ಆಸ್ಪತ್ರೆ ಇಡೀ ಜಿಲ್ಲೆಗೆ ಅತ್ಯಂತ ದೊಡ್ಡ ಆಸ್ಪತ್ರೆ ಅನ್ನೋ ಹೆಗ್ಗಳಿಕೆ ಪಡೆದುಕೊಂಡಿದೆ. ಆದರೆ ಆ ಆಸ್ಪತ್ರೆಗೆ ಹೋಗಿ ದಾಖಲಾಗಲು ರೋಗಿಗಳು ಪರದಾಡಬೇಕಾಗಿದೆ. ನಡೆದುಕೊಂಡು ಹೋಗಲು ಆಗದೇ ಇರೋ ರೋಗಿಗಳು ವೈದ್ಯರ ಬಳಿ ಹೋಗಲು ವೀಲ್ ಚೇರ್, ಸ್ಟ್ರೆಚರ್ಗಾಗಿ ಗಂಟೆಗಟ್ಟಲೆ ಕಾಯಬೇಕಾಗಿದೆ. ವೀಲ್ ಚೇರ್ ಬೇಕಾದ್ರೆ ಕಾಯಬೇಕು. ಇಲ್ಲವೇ ನಾಲ್ಕೈದು ಜನ ಹೊತ್ತುಕೊಂಡು ಹೋಗಬೇಕಾಗಿದೆ. ಇನ್ನೊಂದಡೆ ಆಸ್ಪತ್ರೆ ಹೊರಗಡೆ ರೋಗಿಗಳು ನರಳಾಡುತ್ತಿದ್ದರೂ ಕೂಡಾ ಆಸ್ಪತ್ರೆಯ ಸಿಬ್ಬಂದಿ ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿರುವದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.
Add Asianetnews Kannada as a Preferred Source
