ವಿಶ್ವ ಪ್ರಸಿದ್ಧ ಮಾರುಕಟ್ಟೆಯಲ್ಲಿ ಮೂಲಸೌಲಭ್ಯ ಕೊರತೆ: ಗುಂಡಿ ಬಿದ್ದ ರಸ್ತೆ, ಧೂಳಿನಿಂದ ತುಂಬಿದ ಮಾರುಕಟ್ಟೆ!
ಅದು ಏಷ್ಯಾದಲ್ಲೇ 2ನೇ ಅತೀ ದೊಡ್ಡ ಟೋಮೊಟೋ ಮಾರುಕಟ್ಟೆ, ಅಲ್ಲಿಂದ ದೇಶ-ವಿದೇಶಗಳಿಗೆ ಈ ಕೆಂಪು ಸೇಬು ರಫ್ತು ಮಾಡಲಾಗುತ್ತೆ. ಆದ್ರೆ ಅಲ್ಲಿರುವ ವ್ಯವಸ್ಥೆ ಮಾತ್ರ ಹೇಳ ತೀರದಾಗಿದೆ.
ಕಣ್ಣು ಹಾಯಿಸಿದಷ್ಟು ಕಾಣುತ್ತಿರುವ ಟೊಮ್ಯಾಟೋ(Tomato) ಮಂಡಿಗಳು, ದೇಶದ ಬೇರೆ ಬೇರೆ ರಾಜ್ಯಗಳಿಂದ ಬಂದಿರುವ ಟೋಮೊಟೋ ಲಾರಿಗಳು, ಕಿತ್ತು ಹೋಗಿರುವ ರಸ್ತೆಗಳಲ್ಲಿ ಲಾರಿ ಚಾಲಕರು, ರೈತರು(Farmers) ಪರದಾಟ. ಈ ದೃಶ್ಯ ಕಂಡುಬಂದಿದ್ದು ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ. ಏಷ್ಯಾದಲ್ಲೇ 2ನೇ ಅತೀ ದೊಡ್ಡ ಟೊಮ್ಯಾಟೋ ಮಾರುಕಟ್ಟೆ ಅಂತಾನೆ ಪ್ರಸಿದ್ಧಿ ಆಗಿರುವ ಕೋಲಾರ (Kolar) ಎಪಿಎಂಸಿ ಮಾರುಕಟ್ಟೆ(APMC market) ಇಡೀ ದೇಶ ಹಾಗೂ ವಿದೇಶದಲ್ಲಿ ಫೇಮಸ್. ಇಲ್ಲಿಂದ ದೇಶದ ಮೂಲೆ ಮೂಲೆಗಳಲ್ಲದೇ ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ಸೇರಿದಂತೆ ಹಲವು ದೇಶಗಳಿಗೂ ಟೊಮ್ಯಾಟೋ ರಫ್ತು ಮಾಡಲಾಗುತ್ತೆ. ಇಂಥ ಪ್ರತಿಷ್ಠಿತ ಮಾರುಕಟ್ಟೆಗೆ ಮೂಲಭೂತ ಸೌಲಭ್ಯವೂ ಸರಿಯಾಗಿಲ್ಲ ಎಂದು ರೈತರ ಆಕ್ರೋಶ ಹೊರಹಾಕಿದ್ರು. ರಸ್ತೆಯಲ್ಲಿನ ಮಾರುದ್ದ ಗುಂಡಿಗಳನ್ನ ನೋಡ್ತಿದ್ರೆನೇ ಭಯವಾಗುತ್ತೆ.. ಇಂಥ ಗುಂಡಿಗಳಲ್ಲೇ ನಿತ್ಯವೂ ಟೊಮ್ಯಾಟೋ ಕ್ರೇಟ್ಗಳನ್ನು ತುಂಬಿದ ಲಾರಿಯನ್ನು ಚಲಾಯಿಸಬೇಕು.. ಲಾರಿ ಚಾಲರ ಪರದಾಟ ನೋಡೋಕೆ ಆಗ್ತಿಲ್ಲ. ಅಂತಿದ್ದಾರೆ ಮಂಡಿ ಮಾಲೀಕರು ಕೋಲಾರದ ಎಪಿಎಂಸಿ ಮಾರುಕಟ್ಟೆ ಹೇಳಿಕೊಳ್ಳೋಕೆ ಮಾತ್ರ ಏಷ್ಯಾದಲ್ಲೇ 2ನೇ ಅತೀ ದೊಡ್ಡ ಮಾರುಕಟ್ಟೆ.. ಕನಿಷ್ಠ ಮೂಲಭೂತ ಸೌಕರ್ಯ ಹಾಗೂ ಸರಿಯಾದ ರಸ್ತೆ ಇಲ್ಲದೆ ರೈತರು, ಲಾರಿ ಚಾಲಕರು ಪರದಾಡುವಂತಾಗಿದೆ. ಇನ್ನಾದ್ರೂ ಇಲ್ಲಿನ ಅವ್ಯವಸ್ಥೆ ಸರಿಪಡಿಸಬೇಕಿದೆ.
ಇದನ್ನೂ ವೀಕ್ಷಿಸಿ: ಬೆಂಗಳೂರು ಪಿಜಿ ಮಾಲೀಕರಿಗೆ ಬಿಬಿಎಂಪಿ ಶಾಕ್..! ಅನಧಿಕೃತ, ನಿಯಮ ಬಾಹಿರ ಪಿಜಿಗಳ ವಿರುದ್ಧ ಸಮರ