Asianet Suvarna News Asianet Suvarna News

ಬೆಂಗಳೂರು ಪಿಜಿ‌ ಮಾಲೀಕರಿಗೆ ಬಿಬಿಎಂಪಿ‌ ಶಾ‌ಕ್..! ಅನಧಿಕೃತ, ನಿಯಮ ಬಾಹಿರ ಪಿಜಿಗಳ ವಿರುದ್ಧ ಸಮರ

ಬೆಂಗಳೂರಿನ ಪಿಜಿ ಮಾಲೀಕರಿಗೆ ಬಿಬಿಎಂಪಿ ಶಾಕ್ ನೀಡಿದೆ. ಅನಧಿಕೃತ ಹಾಗೂ ಸುರಕ್ಷಿತವಲ್ಲದ ಪಿಜಿಗಳಿಗೆ ಬಿಬಿಎಂಪಿ ನೋಟಿಸ್ ‌ನೀಡಿದೆ. ಇನ್ನೂ ‌ಕೆಲ ಪಿಜಿ‌ ಮಾಲೀಕರು ಸರ್ಕಾರಕ್ಕೆ ತೆರಿಗೆ ವಂಚಿಸ್ತಿದ್ದಾರಂತೆ. ಅಂತಹ ಮಾಲೀಕರಿಗೂ ಬಿಸಿ ಮುಟ್ಟಿಸಲು ಬಿಬಿಎಂಪಿ ‌ಮುಂದಾಗಿದೆ.
 

ಬೆಂಗಳೂರು ಐಟಿ ಸಿಟಿ ಎಲ್ಲೆಲ್ಲಿಂದಲೂ ಬಂದು ಇಲ್ಲಿ ಉದ್ಯೋಗ ಮಾಡಿಕೊಂಡು ಬದುಕು ಕಟ್ಟಿ ಕೊಳ್ಳುತ್ತಿರೋರ ಸಂಖ್ಯೆ ದೊಡ್ಡ ಮಟ್ಟದಲ್ಲೇ ಇದೆ.ಹೀಗೆ ಉದ್ಯೋಗ ಮಾಡುತ್ತಿರುವ ಬಹುತೇಕರು ಪಿಜಿಗಳಲ್ಲಿ(PGs) ಆಶ್ರಯ ಪಡೆಯುತ್ತಾರೆ. ಪಿಜಿಗಳಿಗೂ ಪಾಲಿಕೆ ಪರ್ಮಿಷನ್(BBMP) ಪಡೆಯಬೇಕು. ಮಾನದಂಡಗಳನ್ನ ಪಾಲಿಸಿಬೇಕು. ಆದ್ರೆ ನಗರದಲ್ಲಿನ ಕೆಲ ಪಿಜಿಗಳು ಕಾನೂನು‌ ಬಾಹಿರವಾಗಿ ಹಾಗೂ ಸುರಕ್ಷಿತ ಮಾನದಂಡ ಉಲ್ಲಂಘಿಸುತ್ತಿವೆ ಅನ್ನೋ ಆರೋಪವಿದೆ. ಇಂಥ ಕಾನೂನು ಬಾಹಿರ ಪಿಜಿಗಳ(Illegal PGs) ವಿರುದ್ಧ ಈಗ ಪಾಲಿಕೆ ಕ್ರಮಕ್ಕೆ ಮುಂದಾಗಿದೆ. ಹೊಸ ವರ್ಷಕ್ಕೂ ಮುಂಚಿತವಾಗಿ ವಲಯವಾರು ಇರುವ ಪಿಜಿಗಳ ಮಾಹಿತಿ ಪಡೆದು ಅಗತ್ಯ ಕ್ರಮ ಜರುಗಿಸಲು ಪಾಲಿಕೆ ನಿರ್ಧರಿಸಿದೆ. ಪಿಜಿ ನಡೆಸಲು ಪಾಲಿಕೆಯಿಂದ ವಾಣಿಜ್ಯ ಪರವಾನಿಗೆ ಪಡೆಯುವ ಜೊತೆಗೆ ಸುಕರಕ್ಷತೆಯ ಅಧಿಕೃತ ಪತ್ರವೂ ಪಡೆದುಕೊಳ್ಳಬೇಕು. ಇದು ತೆರಿಗೆ ಸಂಗ್ರಹದ ವೇಳೆ ಪಾಲಿಕೆಗೆ ಅನುಕೂಲವಾಗಲಿದೆ. ಆದರೆ ನಗರದ ಬಹುತೇಕ ಪಿಜಿಗಳು ವಾಣಿಜ್ಯ ತೆರಿಗೆ ಕಟ್ಟಲು ಮೀನಾಮೇಷ ಎಣಿಸುತ್ತಿವಿಯಂತೆ. ಇನ್ನು ಪಿಜಿ ಅಸೋಸಿಯೇಷನ್ ಪ್ರಕಾರ ನಗರದಲ್ಲಿ ಒಟ್ಟು 25 ಸಾವಿರಕ್ಕೂ ಅಧಿಕ ಪಿಜಿಗಳು ಕಾರ್ಯಾಚರಣೆಯಲ್ಲಿವೆ. ಆದರೆ ಪಾಲಿಕೆ‌ ಅಧಿಕಾರಿಗಳು, ಬೆಸ್ಕಾಂ ಹಾಗೂ ಜಲಮಂಡಳಿಯ ದಾಖಲೆ ಪ್ರಕಾರ ನಗರದಲ್ಲಿ ಒಟ್ಟು 50 ಸಾವಿರಕ್ಕೂ ಅಧಿಕ ಪಿಜಿಗಳಿವೆಯಂತೆ. ಹೀಗಾಗಿ ಪಾಲಿಕೆ ಕಣ್ತಪ್ಪಿಸಿ ಪಿಜಿ ನಡೆಸುತ್ತಿರುವವರ ವಿರುದ್ಧ ಪಾಲಿಕೆ ಕ್ರಮಕ್ಕೆ ಮುಂದಾಗಿದೆ. ಬಿಬಿಎಂಪಿಯ ವಾಣಿಜ್ಯ ಪರವಾನಗಿ ಹಾಗೂ ಸುರಕ್ಷತೆಯ ನಿಯಮ ಉಲ್ಲಂಘಿಸಿ ಹಲವು ಪಿಜಿಗಳು ನಡೆಯುತ್ತಿವೆ. ಇದನ್ನು ಪರಿಶೀಲಿಸಲು ಹಾಗೂ ವಾಣಿಜ್ಯ ತೆರಿಗೆ ಸಂಗ್ರಹಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಕ್ರಮಕ್ಕೆ ಸೂಚಿಸಲಾಗಿದೆ.. ಅಲ್ಲದೇ ಅಕ್ರಮ ಹಾಗೂ ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿರುವ ಪಿಜಿಗಳ ನಿಯಂತ್ರಣಕ್ಕೆ ಪಾಲಿಕೆ ಹೊಸ ಗೈಡ್ ಲೈನ್ಸ್ ಜಾರಿಗೆ ನಿರ್ಧರಿಸಿದೆ. 

ಇದನ್ನೂ ವೀಕ್ಷಿಸಿ:  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಭ್ರಷ್ಟಾಚಾರ? ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ದಾಖಲಾಯ್ತು ದೂರು

Video Top Stories