ಸೋಮವಾರಪೇಟೆ ಮೂವತ್ತೊಕ್ಲು ಗ್ರಾಮದಲ್ಲಿದೆ ಮೀನುಕೊಲ್ಲಿ, ಆದ್ರೆ ಹಿಡಿಯುವಂತಿಲ್ಲ.!

ಸಣ್ಣ ತೊರೆಯಲ್ಲಿ ರಾಶಿ ರಾಶಿ ಮೀನುಗಳು,  ಇದು ಅಂತಿಂತ ಮತ್ಸ್ಯ ಸಮೂಹವಲ್ಲ... ದೇವರ ಮೀನುಗಳು! ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಮೂವತ್ತೊಕ್ಲು ಗ್ರಾಮದಲ್ಲಿ ಇಂಥ ಅಪರೂಪದ ಮೀನುಗಳು ಕಾಣೋದಕ್ಕೆ ಸಿಗುತ್ತವೆ. 
 

First Published Sep 10, 2021, 3:39 PM IST | Last Updated Sep 10, 2021, 4:22 PM IST

ಕೊಡಗು (ಸೆ. 10): ಸಣ್ಣ ತೊರೆಯಲ್ಲಿ ರಾಶಿ ರಾಶಿ ಮೀನುಗಳು,  ಇದು ಅಂತಿಂತ ಮತ್ಸ್ಯ ಸಮೂಹವಲ್ಲ... ದೇವರ ಮೀನುಗಳು! ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಮೂವತ್ತೊಕ್ಲು ಗ್ರಾಮದಲ್ಲಿ ಇಂಥ ಅಪರೂಪದ ಮೀನುಗಳು ಕಾಣೋದಕ್ಕೆ ಸಿಗುತ್ತವೆ. 

ಈ ಮೀನನ್ನು ಯಾರು ಕೂಡಾ ಹಿಡಿಯೋದಿಲ್ಲ. ಈ ಪುಟ್ಟ ತೊರೆಯ ಪಕ್ಕದಲ್ಲಿ ಭದ್ರಕಾಳಿ ದೇವಾಲಯವಿದ್ದು, ದೇವರಿಗೆ ಸೇರಿದ ಮತ್ಸ್ಯ ರಾಶಿ ಅನ್ನುವ ನಂಬಿಕೆ ಈ ಭಾಗದ ಜನರದ್ದು. ಹೀಗಾಗಿ ಇಂದಿಗೂ ಸಾವಿರಾರು ಮೀನುಗಳು ಈ ಪುಟ್ಟ ತೊರೆಯಲ್ಲಿ ಜೀವಿಸುತ್ತಿವೆ. ಮೀನುಗಳು ಹೆಚ್ಚಿರುವ ಕಾರಣಕ್ಕೆ ಈ ತೊರೆಯನ್ನ ಮೀನುಕೊಲ್ಲಿ ಅಂತ ಕರೆಯಲಾಗುತ್ತದೆ. 

ಕೃಷಿ ಚಟುವಟಿಕೆ ಮುಗಿಸಿ 'ಕೈಲ್' ಹಬ್ಬದ ಸಂಭ್ರಮದಲ್ಲಿ ರೈತಾಪಿ ವರ್ಗ; ಏನೀ ಹಬ್ಬದ ವಿಶೇಷತೆ.?

ಈ ಮೀನುಗಳನ್ನ ಹಿಡಿದರೆ ಅವರ ಜೀವನದಲ್ಲಿ ಸಂಕಷ್ಟ ಎದುರಾಗುತ್ತೆ, ಅನಾಹುತ ಸಂಭವಿಸುತ್ತೆ ಅನ್ನುವ ನಂಬಿಕೆ ಬಹಳ ಹಿಂದಿನಿಂದಲೂ ಇದೆ.  ಹೀಗಾಗಿ ಅದರ ಪಾಡಿಗೆ ಬಿಟ್ಟಿದ್ದಾರೆ. ಅವುಗಳನ್ನ ಮುಟ್ಟೋದಕ್ಕೂ ಈ ಭಾಗದ ಜನ ಭಯಪಡ್ತಾರೆ. ನೀರು ಹೆಚ್ಚಾದಾಗ ಹರಿದು ಹೋಗುವ ಮೀನುಗಳು ಬಳಿಕ ನೀರು ಕಡಿಮೆಯಾಗುತ್ತಿದ್ದಂತೆ ಮರಳಿ ಈ ಸ್ಥಳಕ್ಕೆ ಬಂದು ಸೇರುತ್ತವೆ. ಕೊಡಗಿನ ಮೂವತ್ತೊಕ್ಲು ಮೀನುಕೊಲ್ಲಿಯ ಮೀನುಗಳನ್ನ ಉಳಿಸೋದಕ್ಕಾಗಿ ಗ್ರಾಮಸ್ಥರು ಟೊಂಕ ಕಟ್ಟಿದ್ದಾರೆ.