KMF Price Hike: ಕೊರೋನಾ ನಡುವೆ ಜನರಿಗೆ ಮಿಲ್ಕ್ ಶಾಕ್,  ಲೀಟರ್‌ಗೆ 3 ರೂ.  ಏರಿಕೆ ಫಿಕ್ಸ್?

* ಕೊರೋನಾ ನಡುವೆ ಜನತೆಗೆ ಮತ್ತೊಂದು ಶಾಕ್
* ನಂದಿನಿ ಹಾಲಿನ ದರ ಹೆಚ್ಚಳಕ್ಕೆ ಪ್ರಸ್ತಾವನೆ
* ಉಳಿದ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಕಡಿಮೆ ಇದೆ
* ಸರ್ಕಾರದ ಮುಂದೆ ಪ್ರಸ್ತಾವನೆ ಇಟ್ಟ ಒಕ್ಕೂಟ

First Published Jan 16, 2022, 6:20 PM IST | Last Updated Jan 16, 2022, 6:20 PM IST

ಬೆಂಗಳೂರು(ಜ. 16)  ಕೊರೋನಾ (Coronavirus) ನಡುವೆ ಕರ್ನಾಟಕ ಜನತೆಗೆ (Karnataka)  ಮತ್ತೊಂದು ಶಾಕ್ ಸಿಗುವುದು ಬಹುತೇಕ ಖಚಿತವಾಗಿದೆ.  ಕರ್ನಾಟಕ ಹಾಲು ಮಹಾಮಂಡಳಿ
(Karnataka Milk Fedaration) ದರ ಏರಿಕೆಯ ಪ್ರಸ್ತಾವನೆಯನ್ನು ಸರ್ಕಾರದ ಮುಂದೆ ಇಟ್ಟಿದೆ.

KMF Jobs:  460 ವಿವಿಧ ಹುದ್ದೆ ಭರ್ತಿಗೆ ಮುಂದಾದ ಕೆಎಂಎಫ್‌, ಹೆಚ್ಚಿನ ಮಾಹಿತಿ ಏನು?

ಕಳೆದ ಆರು ತಿಂಗಳಿನಿಂದ ನಷ್ಟ ಅನುಭವಿಸುತ್ತಿದ್ದು ದರ ಏರಿಕೆ ಅನಿವಾರ್ಯ ಎಂದು ಕೆಎಂಎಫ್ (KMF)ಹೇಳಿದೆ.  ಇತರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ನಂದಿನಿ ಹಾಲಿನ ದರ ಕಡಿಮೆ ಇದೆ. ಪ್ರಸ್ತುತ ಪ್ರತಿ
ಲೀಟರ್ ಹಾಲಿಗೆ 37 ರೂಪಾಯಿ ಇದೆ. ಹಾಲಿನ ದರದಲ್ಲಿ ಪ್ರತಿ ಲೀಟರ್ ಹಾಲಿಗೆ 3ರೂ ಹೆಚ್ಚಳಕ್ಕೆ ಒಕ್ಕೂಟಗಳು ಮನವಿ ಮಾಡಿಕೊಂಡಿವೆ. ವಿಚಾರವನ್ನು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
(Balachandra Jarkiholi) ಪ್ರಸ್ತಾಪಿಸಿದ್ದಾರೆ.