KMF Jobs:  460 ವಿವಿಧ ಹುದ್ದೆ ಭರ್ತಿಗೆ ಮುಂದಾದ ಕೆಎಂಎಫ್‌, ಹೆಚ್ಚಿನ ಮಾಹಿತಿ ಏನು?

* ಮಾರ್ಚ್ ಅಂತ್ಯದ ಒಳಗೆ 460 ಕೆಎಂಎಫ್‌ ಹುದ್ದೆ ಭರ್ತಿ
* ಬಾಲಚಂದ್ರ ಜಾರಕಿಹೊಳಿ ಮಾಹಿತಿ
* ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

KMF recruitment 460 Posts Balachandra Jarkiholi Mah

ಬೆಳಗಾವಿ(ಜ.12) ಕೆಎಂಎಫ್‌ನಿಂದ (KMF) ವಿದ್ಯಾವಂತ ಯುವಕರಿಗೆ ಉದ್ಯೋಗಾವಕಾಶ ಸೃಷ್ಟಿಸಲು ಮಾರ್ಚ್ ತಿಂಗಳೊಳಗೆ 460 ವಿವಿಧ ಹುದ್ದೆ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ(Balachandra Jarkiholi) ಹೇಳಿದ್ದಾರೆ.

ಬೆಳಗಾವಿ (Belagavi0 ಜಿಲ್ಲೆಯ ಮೂಡಲಗಿ ತಾಲೂಕಿನ ನಾಗನೂರು ಹಾಲು ಉತ್ಪಾದಕರ ಸಹಕಾರ ಸಂಘದ ಹಾಲು ಶೀತಲೀಕರಣ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಈ ಮೂಲಕ ಉತ್ತರ ಕರ್ನಾಟಕದ ಪ್ರತಿಭಾನ್ವಿತ ಯುವಕರು ಈ ಸುವರ್ಣ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಇದರಿಂದ ಉದ್ಯೋಗದಿಂದ ವಂಚಿತರಾದ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡಲು ನಮ್ಮ ಕೆಎಂಎಫ್‌ ನಿರ್ಧರಿಸಿದೆ ಎಂದರು.

ನನಗೆ ಸಚಿವ ಸ್ಥಾನಕ್ಕಿಂತ ರೈತರ ದೊಡ್ಡ ಸಂಸ್ಥೆಯಾಗಿರುವ ಕೆಎಂಎಫ್‌ ಚುಕ್ಕಾಣಿ ಹಿಡಿದಿರುವುದು ಮನಸಿಗೆ ತೃಪ್ತಿಯನ್ನುಂಟು ಮಾಡಿದೆ. ಈ ಅವಕಾಶವನ್ನು ಮಾಡಿಕೊಟ್ಟಆಗಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಕೃತಜ್ಞತೆ ಅರ್ಪಿಸುತ್ತೇನೆ ಎಂದು ಹೇಳಿದರು.

ರಾಜ್ಯದ 14 ಜಿಲ್ಲಾ ಹಾಲು ಒಕ್ಕೂಟಗಳಿಂದ ಕೂಡಿರುವ ಕೆಎಂಎಫ್‌ ವಾರ್ಷಿಕವಾಗಿ ಸುಮಾರು .17 ಸಾವಿರ ಕೋಟಿ ವ್ಯವಹಾರ ಮಾಡುತ್ತಿರುವ ರಾಜ್ಯದ ಅಗ್ರಗಣ್ಯ ಸಹಕಾರ ಸಂಸ್ಥೆಯಾಗಿದೆ. ಈ ಮೂಲಕ ಹೈನೋದ್ಯಮಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವ ಮೂಲಕ ರೈತರ ಸೇವೆ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಪುಣ್ಯ ಎಂದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರೈತರಿಗಾಗಿಯೇ ಸಾಕಷ್ಟುರೈತಪರ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಅವುಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ರೈತ ಸಮುದಾಯಕ್ಕೆ ಮನವಿ ಮಾಡಿದರು.

HAL Recruitment 2022: BE, B Tech ಆದವರಿಗೆ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಆಹ್ವಾನ

ಪುನೀತ್ ಭಾವಚಿತ್ರ:  ನಟ ಪುನೀತ್‌ ರಾಜ್‌ಕುಮಾರ್‌ (Puneeth Rajkumar) ಅವರಿಗೆ ಕೆಎಂಎಫ್‌ (KMF)ವಿಶೇಷವಾಗಿ ಗೌರವ ಸಲ್ಲಿಸಿದೆ. ತನ್ನ ಜನಪ್ರಿಯ ನಂದಿನಿ ಹಾಲಿನ ಪ್ಯಾಕೆಟ್‌ಗಳ ಮೇಲೆ ಪುನೀತ್‌ ರಾಜಕುಮಾರ್‌ ಅವರ ಭಾವಚಿತ್ರವನ್ನು (Photo) ಮುದ್ರಿಸುವ ಮೂಲಕ ಗೌವರ ಸಲ್ಲಿಸಿದೆ ಎಂಬ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. 

ಈ ಫೋಟೋ ನೋಡಿ ಅಭಿಮಾನಿಗಳು, ಕನ್ನಡಿಗರು ಅತೀವ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಜಾಲತಾಣಗಳಲ್ಲಿ ಹಂಚಿಕೊಂಡು ಕೆಎಂಎಫ್‌ಗೆ ಧನ್ಯವಾದ ಸಲ್ಲಿಸುತ್ತಿದ್ದಾರೆ. ಆದರೆ ನಿಜಕ್ಕೂ ಕೆಎಂಎಫ್‌ ಹಾಲಿನ ಪ್ಯಾಕೆಟ್‌ ಮೇಲೆ ಅಪ್ಪು ಫೋಟೋ ಮುದ್ರಿಸಿದೆಯೇ ಎಂದು ಪರಿಶೀಲಿಸಿದಾಗ ಇದು ಸುಳ್ಳು ಸುದ್ದಿ ಎಂಬುದು ಖಚಿತವಾಗಿದೆ. ಹಾಲಿನ ಪ್ಯಾಕೆಟ್‌ಗಳ ಮೇಲೆ ಪುನೀತ್‌ ರಾಜ್‌ಕುಮಾರ್‌ ಭಾವಚಿತ್ರ ಮುದ್ರಿಸಿಲ್ಲ. ಈ ನಿರ್ಧಾರವನ್ನು ನಾವು ತೆಗೆದುಕೊಂಡಿಲ್ಲ ಎಂದು ಕೆಎಂಎಫ್‌ ಅ​ಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ರೈತರಿಗೆ ಅನುಕೂಲ ಆಗಲಿ ಎಂಬ ನಿಟ್ಟಿನಲ್ಲಿ ಕೆಎಂಎಫ್‌ ಉತ್ಪನ್ನಗಳಿಗೆ ನಟ ಪುನೀತ್‌ ಸುಮಾರು 10 ವರ್ಷಗಳಿಂದ ಪ್ರಚಾರ ರಾಯಭಾರಿಯಾಗಿದ್ದರು. ಇದಕ್ಕಾಗಿ ಅವರು ಕೆಎಂಎಫ್‌ನಿಂದ ಯಾವುದೇ ಸಂಭಾವನೆ ಪಡೆಯುತ್ತಿರಲಿಲ್ಲ ಆದರೆ ಹೃದಯಾಘಾತದಿಂದ ಪುನೀತ್‌ ಕಳೆದ 2 ತಿಂಗಳ ಹಿಂದೆ ನಿಧನರಾಗಿದ್ದು, ಅಭಿಮಾನಿಗಳು ಅಪ್ಪು ಅಗಲಿಕೆಗೆ ಇನ್ನೂ ಕಂಬಿನಿ ಮಿಡಿಯುತ್ತಿದ್ದಾರೆ.

 

 

Latest Videos
Follow Us:
Download App:
  • android
  • ios