Rain in Karnataka: ರೌದ್ರರೂಪ ತಾಳಿದ ಸಮುದ್ರದ ಅಲೆಗಳು..! ಮಳೆಯ ಅವಾಂತರಕ್ಕೆ ಜನ ಸುಸ್ತೋ ಸುಸ್ತು..!
ಅಬ್ಬರದ ಮಳೆಯ ನಡುವೆ ಕಿರಿದಾದ ರಸ್ತೆಯಲ್ಲಿ ‘ಹೆಣ’ಗಾಟ..!
ಮಳೆಯ ಘರ್ಜನೆಗೆ ಕರಾವಳಿ ತೀರದ ಬಳಿ ಗ್ರಾಮಗಳೆಲ್ಲ ತತ್ತರ..!
ರೌದ್ರರಮಣೀಯವಾಗಿ ಕಂಗೊಳಿಸ್ತಿರೋ ಗೋಕಾಕ್ ಜಲಪಾತ..!
ಮುಂಗಾರು ಮಳೆ ಆರಂಭ ಆಗಿದ್ದೇ ಆಗಿದ್ದು. ಮಳೆಯ (Rain)ಅಬ್ಬರ ಔಟ್ ಆಫ್ ಕಂಟ್ರೋಲ್ ಆಗಿದೆ. ಒಂದೇ ಸಮನೆ ಸುರಿಯುತ್ತಿರುವ ಧಾರಾಕಾರದ ಆದ್ರಾ ಮಳೆಗೆ ಹಾಹಾಕಾರವೇ ಸೃಷ್ಟಿ ಆಗಿಬಿಟ್ಟಿದೆ. ಈ ವರುಷ ಮಳೆರಾಯ ಸರಿಯದ ಸಮಯಕ್ಕೆ ದರ್ಶನ ಕೊಟ್ಟಿದ್ದಾನೆ. ಮಳೆಯೇ ಇಲ್ಲದ ಕಂಗಾಲಾಗಿದ್ದ ಇಳೆ, ಮಳೆರಾಯನ ಸ್ಪರ್ಶದಿಂದ ಪುನೀತವಾಗಿದೆ. ಇಷ್ಟೇ ಆಗಿದ್ದರೆ ಒಂದು ಮಾತಿತ್ತು. ಆದರೆ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿನ ಜನರ ಜೀವನವೇ ನೀರು(water) ಪಾಲಾಗಿ ಹೋದಂತಿದೆ. ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ. ಎಲ್ಲೆಲ್ಲೂ ನೀರು ತುಂಬಿಕೊಂಡಿದೆ. ನೂರಾರು ಗ್ರಾಮಗಳೇ ಜಲಸಮಾಧಿ ಆಗಿ ಬಿಟ್ಟಿದೆ. ವರುಣನ ಪ್ರಳಯಾರ್ಭಟಕ್ಕೆ ಈಗಾಗಲೇ ನೂರಾರು ಕುಟುಂಬಗಳ ಬದುಕು ಬೀದಿಗೆ ಬಿದ್ದಿದೆ. ಕಳೆದ ಕೆಲ ದಿನಗಳಿಂದ ನಿರಂತರವಾಗಿ ಮಳೆ ಸುರಿತಾನೇ ಇಲ್ಲ. ಸುರಿಯುತ್ತಿರೋ ಮಳೆ ನಿಲ್ಲೋ ಲಕ್ಷಣಗಳೇ ಇಲ್ಲ. ಈ ಮಳೆಯಿಂದಾಗಿ ಉಂಟಾಗುತ್ತಿರುವ ಅವಾಂತರ ಊಹೆಗೂ ಮೀರಿದ್ದು.
ಇದನ್ನೂ ವೀಕ್ಷಿಸಿ: ದರ್ಶನ್ ಭೇಟಿ ಮಾಡಿದ ಕುಟುಂಬಸ್ಥರು, ಸ್ನೇಹಿತರು..!ಪೊಲೀಸ್ ಆಯುಕ್ತರಿಗೆ ವಿಜಯಲಕ್ಷ್ಮಿ ಬರೆದ ಪತ್ರದಲ್ಲೇನಿದೆ..?