ಪಿಎಫ್ಐ ಕರ್ಮಕಾಂಡ: ವಿಧ್ವಂಸಕ ಕೃತ್ಯಕ್ಕೆ 45 ಸಾವಿರ ಯುವಕರಿಗೆ ತರಬೇತಿ?
ಪಿಎಫ್ಐ ಮುಖಂಡರ ವಿಚಾರಣೆ ವೇಳೆ ಸ್ಪೋಟಕ ಸತ್ಯ ಬಯಲಾಗಿದ್ದು, ಅದನ್ನು ತಿಳಿದು ಒಂದು ಕ್ಷಣ ಪೊಲೀಸರು ಹೌಹಾರಿದ್ದಾರೆ.
ಕೆ.ಜಿ ಹಳ್ಳಿ ಪೊಲೀಸರಿಂದ ಪಿಎಫ್ಐ ಮುಖಂಡರ ವಿಚಾರಣೆ ನಡೆದಿದ್ದು,ಬಗೆದಷ್ಟು ಪಿಎಫ್ಐ ಸಂಘಟನೆ ಕರ್ಮಕಾಂಡ ಬಯಲಾಗುತ್ತಿದೆ. ಪಿಎಫ್ಐ ಸಂಘಟನೆಯ ಪಡೆ ತಯಾರು ಮಾಡಲು ಪ್ಲಾನ್ ನಡೆದಿತ್ತು, ಸೈನಿಕರ ರೀತಿಯಲ್ಲಿ ತಮ್ಮ ಕಾರ್ಯಕರ್ತರನ್ನು ಆರೋಪಿಗಳು ಸಜ್ಜುಗೊಳಿಸುತ್ತಿದ್ದರು. ಸುಮಾರು 45 ಸಾವಿರ ಸದಸ್ಯರಿಗೆ ವಿಧ್ವಂಸಕ ಕೃತ್ಯಕ್ಕೆ ತರಬೇತಿ ನೀಡಿರೋ ಬಗ್ಗೆ ಮಾಹಿತಿ ಸಿಕ್ಕಿದೆ.