ದೇವರನ್ನು ಪೂಜಿಸುವಾಗ ಅನುಸರಿಸಲೇಬೇಕಾದ 15 ನಿಯಮಗಳು..

ಎಲ್ಲರ ಮನೆಯಲ್ಲೂ ಪ್ರತಿ ನಿತ್ಯ ಪೂಜೆ ನಡೆಯುತ್ತದೆ. ಆದರೆ, ಹೀಗೆ ದೇವರನ್ನು ಪೂಜಿಸುವಾಗ ದೇವರ ಕೋಣೆಯಲ್ಲಿ, ಪೂಜೆಯಲ್ಲಿ ಅನುಸರಿಸಬೇಕಾದ 15 ನಿಯಮಗಳ ಬಗ್ಗೆ ನಿಮಗೆ ಗೊತ್ತೇ?

14 Golden puja Rules that every Hindu should follow skr

ನಾವು ನಂಬಿರುವ ದೇವರು ನಮ್ಮ ಜೀವನದಲ್ಲಿನ ಎಲ್ಲಾ ಅಡೆತಡೆಗಳನ್ನು ನಿವಾರಿಸಿ ಜೀವನದಲ್ಲಿ ಸಂತೋಷ, ಸಂಪತ್ತು ಮತ್ತು ಸಮೃದ್ಧಿಯನ್ನು ಕರುಣಿಸುತ್ತಾನೆ.  ಆತ ಮರಣದ ನಂತರ ಮೋಕ್ಷವನ್ನು ಪಡೆಯಲು ಸಹಾಯ ಮಾಡುತ್ತಾನೆ. ಹಿಂದೂ ದೇವರುಗಳನ್ನು ಪೂಜಿಸುವಾಗ ಅನುಸರಿಸಬೇಕಾದ 15 ಸುವರ್ಣ ನಿಯಮಗಳನ್ನು ಇಲ್ಲಿ ನೀಡಲಾಗಿದೆ.

  • ಇದೇ ದೇವರನ್ನು ಪೂಜಿಸಬೇಕೆಂಬ ನಿಯಮವಿಲ್ಲ. ನಿಮ್ಮ ಆಯ್ಕೆಯ ದೇವರುಗಳನ್ನು, ಇಷ್ಟದೇವರನ್ನೇ ಪೂಜಿಸಿ. ಆದರೆ, ಪ್ರತಿದಿನ ಪೂಜೆ ಮಾಡಬೇಕು. ಬೆಳಗ್ಗೆ ಸ್ನಾನವಾದ ಕೂಡಲೇ ಪೂಜೆ ಮಾಡುವುದು ಒಳಿತು. ಅಲ್ಲದೆ, ಪೂಜೆಯನ್ನು ದಿನಕ್ಕೆ ಎರಡು ಬಾರಿ ಮಾಡುವುದು ಕೂಡಾ ಉತ್ತಮವೇ..
  • ನಿಮ್ಮ ಮನೆಯ ಪೂಜಾ ಸ್ಥಳದಲ್ಲಿ 15 ಇಂಚುಗಳಿಗಿಂತ ದೊಡ್ಡದಾದ ದೇವರ ವಿಗ್ರಹಗಳು ಇರಬಾರದು. ಗಣೇಶ, ಸರಸ್ವತಿ ಮತ್ತು ಲಕ್ಷ್ಮಿ ದೇವತೆಗಳ ನಿಂತಿರುವ ಮೂರ್ತಿಗಳನ್ನು ಪೂಜಾಸ್ಥಳದಲ್ಲಿ ಇಡಬಾರದು.
  • ದೇವರ ಕೋಣೆಯಲ್ಲಿ ಒಂದೇ ದೇವರ ಅಥವಾ ಯಾವುದೇ ದೇವಿಯ ಮೂರು ವಿಗ್ರಹಗಳನ್ನು ಇಡಬೇಡಿ. ಅದೇ ರೀತಿ ಎರಡು ಶಿವಲಿಂಗಗಳು, ಎರಡು ಸಾಲಿಗ್ರಾಮಗಳು, ಎರಡು ಸೂರ್ಯದೇವರ ವಿಗ್ರಹಗಳು ಮತ್ತು ಎರಡು ಗೋಮತಿ ಚಕ್ರಗಳನ್ನು ಒಂದು ಪೂಜಾಸ್ಥಳದಲ್ಲಿ ಇಡಬಾರದು.

    Blowing a Conch: ಶಂಖ ಊದೋದ್ರಿಂದ ಸಿಗೋ 6 ಆರೋಗ್ಯ ಲಾಭಗಳು
     
  • ಮನೆಯ ದೇವಾಲಯದಲ್ಲಿ ಯಾವುದೇ ಉಡುಗೊರೆ ಬಂದ, ಮರದ ಅಥವಾ ಫೈಬರ್ ವಿಗ್ರಹಗಳು ಇರಬಾರದು. ನೀವು ಪ್ರತಿನಿತ್ಯ ಪೂಜಿಸುತ್ತಿರುವ ಹಿಂದೂ ದೇವರ ವಿಗ್ರಹವನ್ನು ಮಾತ್ರ ಇಡಬೇಕು. ಯಾವುದೇ ಒಡೆದ ವಿಗ್ರಹವನ್ನು ತಕ್ಷಣವೇ ಪೂಜಾ ಸ್ಥಳದಿಂದ ತೆಗೆದುಹಾಕಬೇಕು ಮತ್ತು ಹರಿಯುವ ನೀರಿನಲ್ಲಿ (ನದಿ/ಕೆರೆ) ಗೌರವಯುತವಾಗಿ ವಿಸರ್ಜಿಸಬೇಕು.
  • ನಿಮ್ಮ ಪೂಜಾ ಮಂದಿರದ ಮೇಲೆ ದೇವರ ಬಟ್ಟೆ, ಪರಿಕರಗಳು, ಪುಸ್ತಕಗಳು ಮತ್ತು ಇತರ ಪೂಜಾ ಸಾಮಗ್ರಿಗಳನ್ನು ಇಡುವುದು ಒಳ್ಳೆಯದಲ್ಲ. ಮನೆಯಲ್ಲಿ ಪೂಜಾ ದೇವಾಲಯದ ಮುಂಭಾಗದಲ್ಲಿ ಪರದೆ/ಬಾಗಿಲು ಇರಬೇಕು. ಪೂಜಾ ಕೋಣೆಯಲ್ಲಿ ಮೃತ ಪೋಷಕರ, ಬಂಧುಬಾಂಧವರ ಫೋಟೋಗಳನ್ನು ಇಡಬೇಡಿ.
  • ಹಿಂದೂ ಸಂತರು ನಿಮ್ಮ ದೈನಂದಿನ ಪ್ರಾರ್ಥನೆಗಳನ್ನು ಕನಿಷ್ಠ ಐದು ಹಿಂದೂ ದೇವರುಗಳಿಗೆ ಸಲ್ಲಿಸಿದಾಗ ಪೂಜೆ ಪೂರ್ಣಗೊಳ್ಳುತ್ತದೆ ಎಂದು ಉಲ್ಲೇಖಿಸಿದ್ದಾರೆ. ಇದನ್ನು ಪಂಚದೇವ ಎಂದೂ ಕರೆಯುತ್ತಾರೆ. ಅದರಲ್ಲಿ ಒಬ್ಬರು ನಿಮ್ಮ ಇಷ್ಟದೇವರಾಗಿರಬೇಕು. ಪ್ರಾರ್ಥಿಸಬೇಕಾದ ಐದು ಪ್ರಮುಖ ದೇವರುಗಳೆಂದರೆ ಭಗವಾನ್ ಸೂರ್ಯ, ಗಣೇಶ, ದುರ್ಗಾ, ಶಿವ ಮತ್ತು ವಿಷ್ಣು.
  • ಪೂಜೆಯನ್ನು ಯಾವಾಗಲೂ ಪೂರ್ವ ಅಥವಾ ಉತ್ತರಕ್ಕೆ ಮುಖ ಮಾಡಿ ಮಾಡಬೇಕು. ಯಾವುದೇ ಸಂದರ್ಭದಲ್ಲಿ, ಹಿಂದೂ ದೇವರುಗಳ ಪೂಜೆಯನ್ನು ದಕ್ಷಿಣಕ್ಕೆ ಅಭಿಮುಖವಾಗಿ ಮಾಡಬಾರದು. ಅಲ್ಲದೆ, ಹಿಂದೂ ದೇವರ ಮೂರ್ತಿಯ ಕಡೆಗೆ ನಿಮ್ಮ ಬೆನ್ನನ್ನು ಹಾಕಿ ಕುಳಿತುಕೊಳ್ಳಬಾರದು.
  • ಬೆಳಿಗ್ಗೆ ಪೂಜೆ ಮಾಡುವಾಗ ತುಪ್ಪದಿಂದ ದೀಪವನ್ನು ಹಚ್ಚಬೇಕು, ಸಂಜೆ ಎಣ್ಣೆಯಿಂದ ದೀಪವನ್ನು ಬೆಳಗಿಸಬೇಕು. ನೀವು ಎಂದಿಗೂ ಒಂದು ದೀಪದಿಂದ ಮತ್ತೊಂದು ದೀಪವನ್ನು ಹಚ್ಚಬಾರದು. ಇದು ಮನೆಯಲ್ಲಿ ಅನಾರೋಗ್ಯವನ್ನು ಆಕರ್ಷಿಸುತ್ತದೆ.

    ಪಾದಗಳನ್ನು ತೊಳೆಯುವುದು ಮುಖ್ಯ…. ಸಮುದ್ರಿಕ ಶಾಸ್ತ್ರ ಏನು ಹೇಳುತ್ತೆ?
     
  • ನೆಲದ ಮೇಲೆ ಕುಳಿತು ಪ್ರಾರ್ಥನೆಗಳನ್ನು ಮಾಡಬಾರದು. ಚಾಪೆ, ಅಥವಾ ಮಣೆ ಮೇಲೆ ಕುಳಿತುಕೊಳ್ಳಬೇಕು.
  • ಪೂಜೆಯಲ್ಲಿ ಬಳಸುವ ಗಂಗಾಜಲವನ್ನು ಯಾವುದೇ ಪ್ಲಾಸ್ಟಿಕ್, ಅಲ್ಯೂಮಿನಿಯಂ ಅಥವಾ ಕಬ್ಬಿಣದ ಪಾತ್ರೆಗಳಲ್ಲಿ ಇಡಬಾರದು. ಇದಕ್ಕಾಗಿ ತಾಮ್ರದ ಪಾತ್ರೆ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಅದೇ ರೀತಿ, ತಿಲಕಕ್ಕೆ ಬಳಸುವ ಚಂದನವನ್ನು ತಾಮ್ರದ ಪಾತ್ರೆಗಳಲ್ಲಿ ಸಂಗ್ರಹಿಸಬಾರದು.
  • ಯಾವುದೇ ದೇವರನ್ನು ಪೂಜಿಸುವಾಗ, ನೀವು ಯಾವಾಗಲೂ ದಾನ ಮಾಡಬೇಕು. ದಾನ ಮಾಡುವಾಗ, ನಿಮ್ಮ ಯಾವುದೇ ಕೆಟ್ಟ ಅಭ್ಯಾಸಗಳನ್ನು ನಿಲ್ಲಿಸಲು ನಿರ್ಣಯವನ್ನು ತೆಗೆದುಕೊಳ್ಳಿ. ನಿಮ್ಮ ಋಣಾತ್ಮಕತೆಯನ್ನು ನೀವು ಎಷ್ಟು ವೇಗವಾಗಿ ತೊಡೆದುಹಾಕುತ್ತೀರೋ ಅಷ್ಟು ಬೇಗ ನಿಮ್ಮ ಆಸೆ ಈಡೇರಿಸಲಾಗುತ್ತದೆ.
  • ದೇವರಿಗೆ ಪೂಜೆ ಸಲ್ಲಿಸಿದ ನಂತರ, ಒಂದೇ ಸ್ಥಳದಲ್ಲಿ ನಿಂತು ಮೂರು ಪರಿಕ್ರಮಗಳನ್ನು ಮಾಡಬೇಕು.
  • ಆರತಿಯ ಕೊನೆಯಲ್ಲಿ, ಕೈ ಜೋಡಿಸಿ, ದೇವರು/ದೇವತೆ ತಮ್ಮ ಪ್ರಾರ್ಥನೆಯನ್ನು ಸ್ವೀಕರಿಸುವಂತೆ ವಿನಂತಿಸಬಹುದು ಮತ್ತು ಪೂಜೆಯ ಸಮಯದಲ್ಲಿ ಮಾಡಿದ ಯಾವುದೇ ತಪ್ಪುಗಳನ್ನು ಕ್ಷಮಿಸಲು ಕೇಳಿಕೊಳ್ಳಿ.

ಪೂಜೆಯ ಸಮಯದಲ್ಲಿ ಈ ವಿಷಯ ನೆನಪಿಡಿ:

  • ದುರ್ಗಾ ದೇವಿಗೆ ದುರ್ವೆ ಹುಲ್ಲನ್ನು ಅರ್ಪಿಸುವುದಿಲ್ಲ. ಇದು ಗಣೇಶನಿಗೆ ಮಾತ್ರ. ಆದರೆ, ದೂರ್ವೆಯನ್ನು ಭಾನುವಾರದಂದು ಗಣೇಶನಿಗೆ ಅರ್ಪಿಸಬಾರದು.
  • ಸೂರ್ಯ ದೇವನಿಗೆ ಅರ್ಘ್ಯ ಅರ್ಪಿಸುವಾಗ ದೈವಿಕ ಶಂಖದಿಂದ ನೀರನ್ನು ಸುರಿಯಬಾರದು.
  • ಪೂಜೆಯ ಸಮಯದಲ್ಲಿ ಮಾತ್ರ ದೈವಿಕ ಶಂಖವನ್ನು ಊದಬೇಕು.

    ಪ್ರೀತಿ ಬೇಕು, Commitment ಬೇಡ ಅನ್ನೋ ರಾಶಿಗಳಿವು!
     
  • ಸ್ನಾನ ಮಾಡದೆ ತುಳಸಿ ಎಲೆಗಳನ್ನು ಕೀಳಬಾರದು.
  • ಕಮಲದ ಹೂವನ್ನು ಲಕ್ಷ್ಮಿ ದೇವಿಗೆ ಅರ್ಪಿಸಲಾಗುತ್ತದೆ.
  • ಅಶ್ವತ್ಥ ಮರಗಳಿಗೆ ಬುಧವಾರ ಮತ್ತು ಭಾನುವಾರ ನೀರು ಹಾಕಬಾರದು.
  • ಕೇತಕಿ ಹೂಗಳನ್ನು ಶಿವನಿಗೆ ಅರ್ಪಿಸಬಾರದು.
  • ದೇವರಿಗೆ ಅರ್ಪಿಸುವ ಹೂವುಗಳನ್ನು ತಾಮ್ರದ ತಟ್ಟೆಯ ಮೇಲೆ ಇಟ್ಟು ನೈವೇದ್ಯ ಮಾಡಬೇಕು.
Latest Videos
Follow Us:
Download App:
  • android
  • ios