KBJNL ಶಿಫ್ಟ್‌ಗೆ ಆದೇಶವಿದ್ರೂ ಎಂಡಿ ಕಳ್ಳಾಟ: ಬೆಂಗಳೂರಿನ ಕಚೇರಿಗೆ ವಿಜಯಪುರ ರೈತರ ಅಲೆದಾಟ

ದೇವರು ವರ ಕೊಟ್ರೂ ಪೂಜಾರಿ ಕೊಡಲ್ಲ ಅಂದಹಾಗೆ ಅಧಿಕಾರಿಗಳ ಕಳ್ಳಾಟ ಮುಂದುವರೆದಿದೆ. ಕೆಬಿಜೆಎನ್ಎಲ್ ಎಂಡಿ ಮೊಂಡುತನದಿಂದ ವಿಜಯಪುರದ ಅನ್ನದಾತರು ನಿತ್ಯ ಪರಿತಪರಿಸುವಂತಾಗಿದೆ.

Share this Video
  • FB
  • Linkdin
  • Whatsapp

ವಿಜಯಪುರದ ರೈತರ ಜೀವನಾಡಿ ಆಲಮಟ್ಟಿ ಡ್ಯಾಂ. ಈ ಡ್ಯಾಂ ನಿರ್ಮಾಣಕ್ಕೆ ರೈತರು ತಮ್ಮ ಮನೆ-ಮಠ ಜಮೀನುಗಳನ್ನು ಬಿಟ್ಟುಕೊಟ್ಟಿದ್ರು.. ಡ್ಯಾಂ ನಿರ್ಮಾಣದ ಬಳಿಕ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ಸ್ಥಾಪನೆಯಾಯ್ತು.. ಆದರೆ ಕೆಬಿಜೆಎನ್ಎಲ್(KBJNEL) ಕಚೇರಿ ಮಾತ್ರ ಬೆಂಗಳೂರಿನಲ್ಲೇ ಬೇರೂರಿದೆ.. ರೈತರ(Farmer) ಅಲೆದಾಟ ಮುಂದುವರೆದಿದೆ. ಆಡಳಿತಾತ್ಮಕ ದೃಷ್ಟಿಯಿಂದ ಹಿಂದಿನ ಸರ್ಕಾರ, ಕೆಬಿಜೆಎನೆಲ್ ಕಚೇರಿಯನ್ನು ಆಲಮಟ್ಟಿ ಡ್ಯಾಂಗೆ(Alamatta Dam) ಸ್ಥಳಾಂತರಿಸಲು ಆದೇಶಿಸಿತ್ತು. ಆದರೆ ಬೆಂಗಳೂರಿನಲ್ಲಿ(Bengaluru) ಕಾರ್ಯ ನಿರ್ವಹಿಸುತ್ತಿರುವ ಎಂಡಿ ಮಾತ್ರ ಬೆಂಗಳೂರು ಬಿಟ್ಟು ಕದಲುತ್ತಿಲ್ಲ. ಇನ್ನು ರೈತರು ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಿದ್ರು. ಹೀಗಾಗಿ ಜಲ ಸಂಪನ್ಮೂಲ ಇಲಾಖೆಯ ಸರ್ಕಾರ ಅಧೀನ ಕಾರ್ಯದರ್ಶಿ ಎಚ್.ಎಂ ಮಂಜುನಾಥ್, 2022 ರಂದು ಬೆಂಗಳೂರಿನ KBJNL ಕಚೇರಿಗಳನ್ನು ಸಿಬ್ಬಂದಿ ಸಮೇತವಾಗಿ ಸ್ಥಳಾಂತರ ಮಾಡುವಂತೆ ವ್ಯವಸ್ಥಾಪಕ ನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಿದ್ರು. ಅಂದು ತುರ್ತು ನೊಟೀಸ್ ನೀಡಿದ್ದರೂ ಸಹ ಎಂಡಿ ಆಲಮಟ್ಟಿಯತ್ತ ತಲೆ ಹಾಕಿಲ್ಲ. ಕೆಬಿಜೆಎನ್ಎಲ್ ಕಚೇರಿಯ ಕೆಲಸ ಕಾರ್ಯಗಳಿಗೆ ವಿಜಯಪುರದಿಂದ ರೈತರು ಬೆಂಗಳೂರಿಗೆ ಅಲೆದಾಡುವಂತಾಗಿದೆ. ಬೆಂಗಳೂರು ಬಿಟ್ಟು ಬರದ ಅಧಿಕಾರಿಗಳ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ಹೊರಹಾಕಿದ್ದು, ವಿಧಾನಸಭೆ ಅಧಿವೇಶನ ವೇಳೆ ಈ ವಿಚಾರ ಪ್ರಸ್ತಾಪಿಸೋದಾಗಿ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ: ಹಾವೇರಿಯಲ್ಲಿ ಬರದ ಪರಿಸ್ಥಿತಿ: ಹನಿ ನೀರಿಗೂ ಸಂಕಷ್ಟ..ಬೆಳೆದ ಬೆಳೆಯೂ ನಾಶ..!

Related Video