Asianet Suvarna News Asianet Suvarna News

ಹಾವೇರಿಯಲ್ಲಿ ಬರದ ಪರಿಸ್ಥಿತಿ: ಹನಿ ನೀರಿಗೂ ಸಂಕಷ್ಟ..ಬೆಳೆದ ಬೆಳೆಯೂ ನಾಶ..!

ಅದು ಮಾಜಿ ಸಿಎಂ ತವರು ಜಿಲ್ಲೆ. ಅಲ್ಲಿ ವ್ಯವಸಾಯವೇ ಅನ್ನದಾತರ ಉಸಿರು. ಆದ್ರೆ ಅದೇ ಜಿಲ್ಲೆಯ 8 ತಾಲೂಕಿಗಳಿಗೆ ಬರದ ಛಾಯೇ ಆವರಿಸಿದೆ. ಬೆಳೆದ ಬೆಳೆಯನ್ನೇ ರೈತರು ನಾಶ ಮಾಡ್ತಿದ್ರೆ. ಇತ್ತ ಹನಿ ನೀರಿಗೂ ಸಂಕಷ್ಟ ಎದುರಾಗಿದೆ.
 

ಹಾವೇರಿ ಅಂದ್ರೆ ಕೃಷಿ ಪ್ರಧಾನ ಜಿಲ್ಲೆಯಾಗಿದೆ. ವ್ಯವಸಾಯವೇ ಇಲ್ಲಿನ ಅನ್ನದಾತರ ಉಸಿರು. ಆದ್ರೆ ಮಳೆಗಾಲದಲ್ಲಿ ರೈತರು(Farmer) ಆಕಾಶದತ್ತ ಮುಖ ಮಾಡುವ ಪರಿಸ್ಥಿತಿ ಎದುರಾಗಿದೆ. ಯಾವಾಗ ವರುಣ ಕೃಪೆ ತೋರಿಸುತ್ತಾನೆ ಅಂತಾ ಕಾದು ಕುಳಿತ್ತಿದ್ದಾರೆ. ಕಳೆದು ಎರಡು ವರ್ಷದಿಂದ ವಿಪರೀತ ಮಳೆ(Rain) ಸುರಿಯುತ್ತಿದ್ದ ಹಾವೇರಿಯಲ್ಲಿ(Haveri) ಈ ಬಾರಿ ಬರದ ಪರಿಸ್ಥಿತಿ ಎದುರಾಗಿದೆ. ಲಕ್ಷಾಂತರ ರೂಪಾಯಿ ಸಾಲ ಮಾಡಿ ಮೆಕ್ಕೆಜೋಳ, ಹತ್ತಿ, ಶೇಂಗಾ, ತೊಗರಿ ಬೆಳೆದ ರೈತರು ಮಳೆಗಾಗಿ ಕಾದು ಕುಳಿತಿದ್ದಾರೆ. ಆದ್ರೆ ಒಂದು ತಿಂಗಳಿಂದ ಮಳೆಯ ದರ್ಶನವಾಗಿಲ್ಲ. ಇಡೀ ಜಿಲ್ಲೆಯಲ್ಲಿ ಬರದ ಕಾರ್ಮೋಡ ಆವರಿಸಿದೆ. ಜೂನ್‌ನಿಂದ ಆಗಸ್ಟ್‌ವರೆಗೂ ಶೇ.25ರಷ್ಟು ಮಳೆ ಕೊರತೆಯಾಗಿದ್ದು, ಬರ(Drought)ಪೀಡಿತ ಜಿಲ್ಲೆ ಎಂದು ಘೋಷಿಸುವಂತೆ ರೈತರು ಆಗ್ರಹಿಸಿದ್ದಾರೆ. ಬೆಳೆ ಮಾತ್ರವಲ್ಲ ಕುಡಿಯೋ ನೀರಿಗೂ ಹಾಹಾಕಾರ ಶುರುವಾಗಿದೆ. ಜಿಲ್ಲೆಯಲ್ಲಿ ಹರಿಯುವ ವರದಾ, ತುಂಗಭದ್ರಾ, ಧರ್ಮಾ, ಕುಮದ್ವತಿ ನದಿಗಳಲ್ಲಿ ನೀರಿನ ಪ್ರಮಾಣ ಇಳಿಕೆಯಾಗಿ ಅಂತರ್ಜಲ ಮಟ್ಟ ಕುಸಿದು ಕೊಳವೆಬಾವಿಗಳು ಬತ್ತಿಹೋಗುತ್ತಿವೆ. ಆರಂಭದಲ್ಲಿ ಬಿದ್ದ ಮಳೆಗೆ ಸಾಲ ಮಾಡಿ ರೈತರು ಬಿತ್ತನೆ ಮಾಡಿದ್ದಾರೆ. ಆದ್ರೀಗ ಬೆಳೆ ಕಳೆದುಕೊಳ್ಳುವ ಭೀತಿಯಲ್ಲಿರುವ ರೈತರಿಗೆ ಬ್ಯಾಂಕ್‌ಗಳು ಸಾಲ ತೀರಿಸುವಂತೆ ನೋಟಿಸ್ ಕೊಡ್ತಿದ್ದಾರೆ. ರೈತರಿಗೆ ಇಷ್ಟೆಲ್ಲಾ ಸಮಸ್ಯೆ ಆದ್ರೂ ಕೃಷಿ ಇಲಾಖೆ ಅಧಿಕಾರಿಗಳು ಮಾತ್ರ ತಲೆಕೆಡಿಸಿಕೊಂಡಿಲ್ಲ..ಜಿಲ್ಲೆಯಲ್ಲಿ ಎಷ್ಟು ಬೆಳೆ ನಷ್ಟವಾಗಿದೆ ಅನ್ನೋ ಅಂದಾಜಿಲ್ಲ.

ಇದನ್ನೂ ವೀಕ್ಷಿಸಿ:  ಸೂರ್ಯನತ್ತ ‘ಆದಿತ್ಯ ಎಲ್-1’ ಉಡಾವಣೆಗೆ ಕ್ಷಣಗಣನೆ: ಶ್ರೀಹರಿಕೋಟಾದಿಂದ ರಾಕೆಟ್ ಉಡ್ಡಯನ

Video Top Stories