Asianet Suvarna News Asianet Suvarna News

ರಸ್ತೆ ಮಧ್ಯೆ ಅಂಗಾತ ಮಲಗಿ ಮಹಿಳೆಯ ಪ್ರತಿಭಟನೆ! ಪೊಲೀಸರು ಸುಸ್ತು

ರಸ್ತೆಯಲ್ಲೇ ಮಲಗಿ ಪ್ರತಿಭಟನೆ ನಡೆಸಿದ ಮಹಿಳೆ| ಕಾರವಾರ ನಗರದಲ್ಲಿ ನಡೆದ ಘಟನೆ| ಯಾವುದೇ ತಡೆಯಾಜ್ಞೆಯಿಲ್ಲದ್ದರಿಂದ ಕಾನೂನಿನಂತೆ ರಸ್ತೆ ಅಭಿವೃದ್ಧಿ ಮಾಡಲಾಗತ್ತಿದೆ| ರಸ್ತೆಯನ್ನು ಅಭಿವೃದ್ಧಿ ಪಡಿಸ್ತಿದ್ದೇವೆ ಹೊರತು ಹೊಸ ರಸ್ತೆ ಮಾಡ್ತಿಲ್ಲ ಎಂದು ಅಧಿಕಾರಿಗಳು| 

ಕಾರವಾರ(ನ.22): ರಸ್ತೆ ಕಾಂಕ್ರಿಟೀಕರಣ ವಿರೋಧಿಸಿ ಮಹಿಳೆಯೊಬ್ಬರು ರಸ್ತೆಯಲ್ಲೇ ಮಲಗಿ ಪ್ರತಿಭಟನೆ ನಡೆಸಿದ ಘಟನೆ ಇಂದು(ಭಾನುವಾರ) ನಗರದ ಕೋಡಿಭಾಗ್ ರಸ್ತೆಯ ಡೌನ್ ಚರ್ಚ್ ಮುಂಭಾಗ ನಡೆದಿದೆ. ರಸ್ತೆಯಿರುವ ಜಾಗ ತಮ್ಮದೆಂದು ಅಭಿವೃದ್ಧಿಗೆ ಅಡ್ಡಿಪಡಿಸಿ ಮಹಿಳೆ ಪ್ರತಿಭಟನೆ ನಡೆಸಿದ್ದಾರೆ.

ಕಾರಿಗೆ ಕಾರು ಟಚ್‌ ಆಗಿದ್ದಕ್ಕೆ ರಂಪಾಟ: ಸಿನಿಮೀಯ ರೀತಿ ಅಪಘಾತಕ್ಕೆ ಬೆಚ್ಚಿಬಿದ್ದ ಸಾರ್ವಜನಿಕರು

ನಗರಸಭೆ ಅನುದಾನದಡಿ 100 ಮೀಟರ್ ರಸ್ತೆಯನ್ನು ಕಾಂಕ್ರಿಟೀಕರಣಗೊಳಿಸಲು ಮುಂದಾದಾಗ ಮಹಿಳೆ ಅಡ್ಡಿ ಪಡಿಸಿದ್ದಾರೆ. ಈ ಹಿಂದೆ ರಸ್ತೆಯಿರುವ ಜಾಗ ತಮ್ಮದೆಂದು ಮಹಿಳೆಯ ಕುಟುಂಬ ಕೋರ್ಟ್ ಮೊರೆ ಹೋಗಿತ್ತು ಕೋರ್ಟ್ ನೀಡಿದ್ದ 15 ದಿನಗಳ ಕಾಲ ನೀಡಿದ್ದ ಅವಧಿ ಪೂರ್ಣಗೊಂಡ‌ ಹಿನ್ನೆಲೆ ನಗರಸಭೆ ಅಧಿಕಾರಿಗಳು ಕಾಂಕ್ರಿಟೀಕರಣಕ್ಕೆ ಮುಂದಾಗಿದ್ದರು. ಈ ವೇಳೆ ಮಹಿಳೆ ಪ್ರತಿಭಟನೆ ನಡೆಸಿದ್ದಾರೆ. 
 

Video Top Stories