
ಕಾರಿಗೆ ಕಾರು ಟಚ್ ಆಗಿದ್ದಕ್ಕೆ ರಂಪಾಟ: ಸಿನಿಮೀಯ ರೀತಿ ಅಪಘಾತಕ್ಕೆ ಬೆಚ್ಚಿಬಿದ್ದ ಸಾರ್ವಜನಿಕರು
ತಪ್ಪು ಮಾಡಿದ್ದಲ್ಲದೇ ಉದ್ಧಟತನ ಮೆರೆದ ಭೂಪ| ಬೆಂಗಳೂರಿನ ಯಲಹಂಕದ ನಾಗೇನಹಳ್ಳಿ ಗೆಟ್ ಬಳಿ ನಡೆದ ಘಟನೆ| ಎದುರು ಬಂದ ಕಾರು ಚಾಲಕನ ಮೇಲೆ ಉದ್ದಟತನ ಮೆರೆದ ದುಷ್ಕರ್ಮಿ|
ಬೆಂಗಳೂರು(ನ.22): ಕಾರಿಗೆ ಕಾರು ಟಚ್ ಆಗಿದ್ದಕ್ಕೆ ನಡುರಸ್ತೆಯಲ್ಲೇ ರಂಪಾಟ ಮಾಡಿಕೊಂಡ ಘಟನೆ ಯಲಹಂಕದ ನಾಗೇನಹಳ್ಳಿ ಗೆಟ್ ಬಳಿ ನಡೆದಿದೆ. ತಪ್ಪು ಮಾಡಿದ್ದಲ್ಲದೇ ಉದ್ಧಟತನವನ್ನ ಮೆರೆದಿದ್ದಾನೆ ಈ ಭೂಪ. ರಸ್ತೆ ಬದಿಯಲ್ಲಿದ್ದ ಮಹಿಳೆಗೆ ಗುದ್ದಿ, ವ್ಯಕ್ತಿಯನ್ನ ಎಳೆದೊಯ್ದಿದ್ದಾನೆ. ಸಿನಿಮೀಯ ರೀತಿ ಅಪಘಾತಕ್ಕೆ ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
14 ಟನ್ ಕಬ್ಬು ತುಂಬಿದ ಗಾಡಿ ಎಳೆದವು ಜೋಡೆತ್ತು, ವಿಡಿಯೋ ವೈರಲ್..!
ಒನ್‌ವೇಯಲ್ಲಿ ಬಂದಿದ್ದಲ್ಲದೆ ಕಿರಿಕ್ ಬೇರೆ ತೆಗೆದಿದ್ದಾನೆ ಈ ದುಷ್ಕರ್ಮಿ. ಎದುರು ಬಂದ ಕಾರು ಚಾಲಕನ ಮೇಲೆ ಉದ್ದಟತನ ಮೆರೆದಿದ್ದಾನೆ. ದುಷ್ಕರ್ಮಿಯ ನಡೆಗೆ ಸಾರ್ವಜನಿಕರು ಹಿಡಿ ಶಾಪ ಹಾಕಿದ್ದಾರೆ.