Nanna votu nanna matu: ಸರ್ಕಾರ ಪರಿಸರಕ್ಕೆ ಪ್ರಾಮುಖ್ಯತೆ ಕೊಡಬೇಕು: ಮಂಗಳೂರು ವಿದ್ಯಾರ್ಥಿಗಳು ಹೇಳಿದ್ದೇನು?
ಮಂಗಳೂರಿನ ಡಾ.ಪಿ ದಯಾನಂದ ಪೈ ಕಾಲೇಜಿನ ವಿದ್ಯಾರ್ಥಿಗಳು ರಾಜಕೀಯ ಬಗ್ಗೆ, ರಾಜಕಾರಣಿಗಳ ಬಗ್ಗೆ ಹಾಗೂ ಪಕ್ಷಗಳ ಬಗ್ಗೆ ಮಾತನಾಡಿದ್ದಾರೆ.
ಸುವರ್ಣ ನ್ಯೂಸ್'ನ ನನ್ನ ವೋಟು ನನ್ನ ಮಾತು ವಿಶೇಷ ಕಾರ್ಯಕ್ರಮದಡಿ, ಚುನಾವಣೆಯ ಬಗ್ಗೆ ಮಂಗಳೂರಿನ ಡಾ.ಪಿ ದಯಾನಂದ ಅಭಿಪ್ರಾಯ ಸಂಗ್ರಹಿಸಲಾಗಿದೆ .ಯಾರು ಒಳ್ಳೆದಾಗಿ ಕೆಲಸ ಮಾಡುತ್ತಾರೆ ಅವರಿಗೆ ಮಾತ್ರ ನಮ್ಮ ವೋಟು. ನಮ್ಮಲ್ಲಿ ಅಭಿವೃದ್ಧಿಯಾಗುತ್ತಿದೆ ಆದರೆ ಅಭಿವೃದ್ಧಿ ನೆಪದಲ್ಲಿ ಮರಗಿಡಗಳನ್ನು ಕಡಿಯಬಾರದು. ಬರುವಂತ ಸರ್ಕಾರ ಪ್ರಕೃತಿಗೆ ಪರಿಸರಕ್ಕೆ ಪ್ರಾಮುಖ್ಯತೆಯನ್ನು ಕೊಡಬೇಕು. ಪಕ್ಷವನ್ನು ನೋಡಲ್ಲ, ವ್ಯಕ್ತಿಯನ್ನು ನೋಡುತ್ತೇವೆ. ಅಭಿವೃದ್ಧಿಯನ್ನು ನೋಡುತ್ತೇವೆ ಎಂದು ಫಸ್ಟ್ ಟೈಮ್ ವೋಟರ್ಸ್ ತಮ್ಮ ಅಭಿಪ್ರಾಯ ಹೇಳಿದ್ದಾರೆ.