Asianet Suvarna News Asianet Suvarna News

ಹೆಕಾಪ್ಟರ್‌ನಲ್ಲಿ ಹಾರಾಡಿದ ಉಡುಪಿ ಪೌರ ಕಾರ್ಮಿಕರು, ಪಶ್ಚಿಮ ಘಟ್ಟಗಳ ಹಸಿರಿನ ಸೊಬಗನ್ನು ಕಣ್ತುಂಬಿಕೊಂಡ್ರು

ಉಡುಪಿ ಪೌರ ಕಾರ್ಮಿಕರಿಗೆ ಹೆಲಿಕಾಪ್ಟರ್ ವಿಹಾರ ಭಾಗ್ಯ ದೊರೆತಿದೆ. ಕಾರ್ಕಳ ಪುರಸಭೆಯ ಐದು ಜನ ಪೌರಕಾರ್ಮಿಕರು ಹೆಲಿಕಾಪ್ಟರ್ ನಲ್ಲಿ ಹಾರಾಡಿದ್ದಾರೆ. 

ಉಡುಪಿ, (ಮಾ.11): ಉಡುಪಿ ಪೌರ ಕಾರ್ಮಿಕರಿಗೆ ಹೆಲಿಕಾಪ್ಟರ್ ವಿಹಾರ ಭಾಗ್ಯ ದೊರೆತಿದೆ. ಕಾರ್ಕಳ ಪುರಸಭೆಯ ಐದು ಜನ ಪೌರಕಾರ್ಮಿಕರು ಹೆಲಿಕಾಪ್ಟರ್ ನಲ್ಲಿ ಹಾರಾಡಿದ್ದಾರೆ. 

ಮಲ್ಪೆ ಬಂದರಿನಲ್ಲಿ ನೋಡಲು ಭಯಾನಕವಾಗಿ ಕಾಣುವ ಅಪರೂಪದ ಮೀನು ಪತ್ತೆ

ಇಂಧನ‌ ಮತ್ತು ಕನ್ನಡ ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಸ್ವಕ್ಷೇತ್ರದಲ್ಲಿ ನಡೆಸುತ್ತಿರುವ ಕಾರ್ಕಳ ಉತ್ಸವದಲ್ಲಿ ವಿಹಾರ ನಡೆದಿದ್ದು, ಪೌರಕಾರ್ಮಿಕರೊಂದಿಗೆ  ಸಚಿವ ಸುನಿಲ್ ಕುಮಾರ್ ವಾಯುವಿಹಾರ ನಡೆಸಿದ್ದಾರೆ.  ಈ ಹೆಲಿಕಾಫ್ಟರ್ ಕಾರ್ಕಳದ ರಾಮಸಮುದ್ರ , ಆನೆಕರೆ , ಗೊಮ್ಮಟಬೆಟ್ಟಕ್ಕೆ ಸುತ್ತು ಹಾಕಿದ್ದು, ಪಶ್ಚಿಮ ಘಟ್ಟಗಳ ಹಸಿರಿನ ಸೊಬಗನ್ನು  ಪೌರ ಕಾರ್ಮಿಕರು ಕಣ್ತುಂಬಿಕೊಂಡರು.

Video Top Stories