
ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣನ್ಯೂಸ್, ತಮ್ಮ ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ರೈತರತ್ನ, ಅಸಮಾನ್ಯ ಕನ್ನಡಿಗರಂತಹ ಯಶಸ್ವಿ ಕಾರ್ಯಕ್ರಮಗಳ ನಂತರ, ಈಗ ಸರಣಿ ವೈಫಲ್ಯಗಳನ್ನು ಮೆಟ್ಟಿ, ಪುಟಿದೆದ್ದ ಸಾಮಾನ್ಯ ಕನ್ನಡಿಗರನ್ನು ಗುರುತಿಸಿ ಗೌರವಿಸುವ ಹೊಸ ಹೆಜ್ಜೆ ಇಟ್ಟಿವೆ.
ಬೆಂಗಳೂರು (ಡಿ.10): ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣನ್ಯೂಸ್ ಕೇವಲ ಸುದ್ದಿ ಮಾಧ್ಯಮಗಳಾಗಿ ಉಳಿಯದೆ, ಸಾಮಾಜಿಕ ಜವಾಬ್ದಾರಿಯ ಮೂಲಕ ಜನರ ಮನಸ್ಸು ಗೆದ್ದಿವೆ. ನೆಲ, ಜಲ, ಭಾಷೆ ವಿಷಯದಲ್ಲಿ ರಾಜಿ ಇಲ್ಲದ ವರದಿಗಾರಿಕೆ ಜೊತೆಗೆ, ಸಮಾಜಕ್ಕೆ ಕಷ್ಟ ಬಂದಾಗ ನೆರವಿಗೆ ಧಾವಿಸಿವೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಮಾಧ್ಯಮಗಳು ಈವರೆಗೆ ರೈತರತ್ನ, ಅಸಮಾನ್ಯ ಕನ್ನಡಿಗ, ಶೌರ್ಯ ಪ್ರಶಸ್ತಿ, ಮಹಿಳಾ ಸಾಧಕಿಯರು ಸೇರಿದಂತೆ ಹಲವು ವಿಭಾಗಗಳಲ್ಲಿ ಸಾಧಕರನ್ನು ಗುರುತಿಸಿ ಗೌರವಿಸಿವೆ. ಇವುಗಳಲ್ಲಿ ಗುರುತಿಸಲ್ಪಟ್ಟ ಅನೇಕರು ನಂತರ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿಗಳಿಗೂ ಆಯ್ಕೆಯಾಗಿದ್ದಾರೆ. 'ಕರ್ನಾಟಕದ 7 ಅದ್ಭುತಗಳು' ಮತ್ತು 'ವನ್ಯಜೀವಿ ಸಂರಕ್ಷಣಾ ಅಭಿಯಾನ'ಗಳಂತಹ ವಿಶಿಷ್ಟ ಕಾರ್ಯಕ್ರಮಗಳು ಯಶಸ್ವಿಯಾಗಿವೆ.
ಈಗ, ಸಂಸ್ಥೆಯು ಮತ್ತೊಂದು ಹೆಜ್ಜೆ ಇಟ್ಟಿದ್ದು, ಸಾಮಾನ್ಯರಲ್ಲಿ ಅಸಾಮಾನ್ಯ ಸಾಧನೆ ಮಾಡಿದವರನ್ನು ಗುರುತಿಸುತ್ತಿದೆ. ಸರಣಿ ವೈಫಲ್ಯಗಳು ಮತ್ತು ಸವಾಲುಗಳ ನಡುವೆಯೂ ಪುಟಿದೆದ್ದ ಕನ್ನಡಿಗರಿಗೆ ಗೌರವ ನೀಡಲಾಗುತ್ತಿದೆ.