ಮರಾಠ ನೆಲದಲ್ಲಿ "ಕನ್ನಡ ಡಿಂಡಿಮ" ಬಾರಿಸಿದ್ದ ಹೆಮ್ಮೆಯ ಕನ್ನಡಿಗ..!

ಕರ್ನಾಟಕಕ್ಕೆ 50 ವರುಷ..ಸಿದ್ದು ಕನ್ನಡ ಪ್ರೀತಿಗೆ ಅಭಿಮಾನದ ಹರುಷ..!
ವಿಧಾನಸಭೆಯನ್ನೇ ಕನ್ನಡ ಪಾಠಶಾಲೆ ಮಾಡಿದ್ದ ಕನ್ನಡದ ಕಾವಲಿಗ..!
ಕನ್ನಡ ಬದ್ಧತೆಯಲ್ಲಿ ಎಲ್ಲರಿಗಿಂತ ಸಿದ್ದರಾಮಯ್ಯ ಒಂದು ಹೆಜ್ಜೆ ಮುಂದು..!

First Published Nov 2, 2023, 3:42 PM IST | Last Updated Nov 2, 2023, 3:42 PM IST

ಸಿದ್ದರಾಮಯ್ಯನವರ ಕನ್ನಡ ಪ್ರೀತಿಗೆ, ಕನ್ನಡ ಭಾಷೆಯ ಮೇಲಿನ ಅಭಿಮಾನಕ್ಕೆ ಸಾಟಿಯೇ ಇಲ್ಲ. ಸಿದ್ದರಾಮಯ್ಯ(Siddaramaiah) ಅಂದ್ರೆ ಕನ್ನಡ.. ಕನ್ನಡ ಅಂದ್ರೆ ಸಿದ್ದರಾಮಯ್ಯ. ಅದಕ್ಕೇ ಅವರನ್ನು ಕನ್ನಡ ರಾಮಯ್ಯ ಅಂತ ಕರೀತಾರೆ.ನವೆಂಬರ್ 1, 2023. ಅಂದ್ರೆ ಬುಧವಾರ ಇಡೀ ರಾಜ್ಯಕ್ಕೆ ರಾಜ್ಯವೇ ಸಂಭ್ರಮಿಸಿದ ದಿನ. ಕನ್ನಡ ರಾಜ್ಯೋತ್ಸವ(Kannada Rajyotsava) ಪ್ರತೀ ವರ್ಷ ಬರತ್ತೆ. ನಮ್ಮ ರಾಜ್ಯಕ್ಕೆ ಕರ್ನಾಟಕ ಅಂತ ನಾಮಕರಣ ಆಗಿ ಬುಧವಾರಕ್ಕೆ ಭರ್ತಿ 50 ವರ್ಷ ತುಂಬಿದೆ. ಈ ವಿಶೇಷ ಕನ್ನಡ ರಾಜ್ಯೋತ್ಸವದ ದಿನ ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ(Kantheerava Stadium) ಕನ್ನಡ ಧ್ವಜಾರೋಹಣ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಪ್ರತಿಜ್ಞೆಯೊಂದನ್ನು ಮಾಡಿದ್ದಾರೆ. ಇದು ಕನ್ನಡ ರಾಜ್ಯೋತ್ಸವದ ದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಡಿರೋ ಪ್ರತಿಜ್ಞೆ, ಕನ್ನಡ ನಾಡಿನ ಜನರಿಗೆ ನಾಡದೊರೆಯ ಸಂದೇಶವಿದು. ವೀಕ್ಷಕರೇ.. ಮೊದ್ಲು ಕರ್ನಾಟಕವನ್ನು ಮೈಸೂರು ರಾಜ್ಯ ಅಂತ ಕರೆಯಲಾಗ್ತಿತ್ತು. ವಿಶೇಷ ಏನಂದ್ರೆ ಸಿದ್ದರಾಮಯ್ಯನವರ ರೋಲ್ ಮಾಡೆಲ್ ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ಮೈಸೂರು ರಾಜ್ಯಕ್ಕೆ ಕರ್ನಾಟಕ ಅಂತ ನಾಮಕರಣವಾಗತ್ತೆ. ಈಗ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರೋವಾಗ ಕರ್ನಾಟಕ ನಾಮಕರಣಕ್ಕೆ 50 ವರ್ಷ ತುಂಬಿದೆ. ಇದನ್ನು ಅರ್ಥಪೂರ್ಣವಾಗಿ ಆಚರಿಸಲು ಮುಂದಾಗಿರುವ ಸರ್ಕಾರ, ಇಡೀ ವರ್ಷದಲ್ಲಿ ರಾಜ್ಯದಲ್ಲಿ "ಕರ್ನಾಟಕ ಸಂಭ್ರಮ" ಆಚರಿಸಲು ನಿರ್ಧರಿಸಿದೆ.

ಇದನ್ನೂ ವೀಕ್ಷಿಸಿ:  ಇಸ್ರೇಲ್ ಪರ ಕದನಕಣಕ್ಕೆ ಧುಮುಕಿದೆ ಅಮೆರಿಕಾ: ವಿಶ್ವಯುದ್ಧ ಸೃಷ್ಟಿಸುತ್ತಾ ಮಧ್ಯಪ್ರಾಚ್ಯದ ಶೀತಲಸಮರ..?

Video Top Stories