ಮುಸ್ಲಿಂ ಹೆಂಗಸರಿಗೆ ಪರ್ಮೆನೆಂಟ್ ಗಂಡ ಕೊಟ್ಟಿದ್ದು ಮೋದಿ ಸರ್ಕಾರ: ಕಲ್ಲಡ್ಕ ಪ್ರಭಾಕರ ಭಟ್

ವಿವಾದದ ಕಿಡಿ ಹೊತ್ತಿಸಿದ ಆರೆಸ್ಸೆಸ್ ಮುಖಂಡ  ಕಲ್ಲಡ್ಕ ಪ್ರಭಾಕರ ಭಟ್ ಭಾಷಣ
ಮಂಡ್ಯದ ಹನುಮ ಸಂಕೀರ್ತನಾ ಯಾತ್ರೆಯಲ್ಲಿ  ಕಲ್ಲಡ್ಕ ಪ್ರಭಾಕರ ಭಟ್ ಭಾಷಣ
ಅಲ್ಲಾಹ್ ಅಕ್ಬರ್ ಎಂದು ಘೋಷಣೆ ಕೂಗಿದ್ದ ಮುಸ್ಕಾನ್ ವಿರುದ್ಧ ಭಟ್‌ ವಾಗ್ದಾಳಿ

Share this Video
  • FB
  • Linkdin
  • Whatsapp

ಮಂಡ್ಯದಲ್ಲಿ ನಡೆಯುತ್ತಿರುವ ಹನುಮ ಸಂಕೀರ್ತನಾ ಯಾತ್ರೆಯಲ್ಲಿ ಕಲ್ಲಡ್ಕ ಪ್ರಭಾಕರ ಭಟ್(Kalladka Prabhakar Bhat) ಭಾಷಣ ಮಾಡಿದ್ದು, ಅಲೆಕ್ಸಾಂಡರ್ ದೇಶದ ಮೇಲೆ ಆಕ್ರಮಣ ಮಾಡಲು ಬಂದವನು. ನಾಚಿಕೆ ಇಲ್ಲದವರು ಅಲೆಕ್ಸಾಂಡರ್ ಗ್ರೇಟ್ ಅಂತಾರೆ. ಅಲೆಕ್ಸಾಂಡರ್ ಸೋಲಿಸಿದ ಪರಾಕ್ರಮಿಶಾಲಿ ದೇಶ ಭಾರತ. ಪಠ್ಯ ಪುಸ್ತಕಗಳಲ್ಲಿ ನಮಗೆ 90% ಸುಳ್ಳು ಹೇಳಿದ್ದಾರೆ. ಇಸ್ಲಾಮಿಕರಣ, ಕ್ರಿಶ್ಚಿಯನಿಕರಣ ಮಾಡಲು ಯತ್ನಗಳಾಗಿದೆ. ಮಂಡ್ಯದ ಯುವತಿ ಮುಸ್ಕಾನ್‌ಗೆ(Muskan) ಆಲ್ಖೈದಾ ಜತೆ ಸಂಪರ್ಕ ಇದೆ ಎಂದು ಆರ್‌ಎಸ್‌ಎಸ್‌(RSS) ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಸ್ಫೋಟಕ ಆರೋಪ ಮಾಡಿದ್ದಾರೆ. ಮುಸ್ಕಾನ್ ಗೆ ಹಣ, ಶಹಬ್ಬಾಶ್‌ಗಿರಿ ಕೊಟ್ಟದ್ದು ಅಲ್‌ಖೈದಾ ಸಂಘಟನೆ. ಮುಸ್ಕಾನ್ ಆಲ್ಖೈದಾ ಉಗ್ರ ಸಂಘಟನೆ ಜತೆ ಸಂಪರ್ಕದಲ್ಲಿದ್ದಾಳೆ. ಮಂಡ್ಯದ ಜನರು ಮುಸ್ಕಾನ್ ಬಗ್ಗೆ ಹುಷಾರಾಗಿರಬೇಕು. ನಾಳೆಯಿಂದ ಕಾಲೇಜಿಗೆ ಹೋಗುವುದಾಗಿ ಆಕೆ ಹೇಳಿದ್ದಾಳೆ. ತಾಕತ್ ಇದ್ರೆ ಅವಳು ಕಾಲೇಜಿಗೆ ಹೋಗಲಿ, ಮುಸ್ಕಾನ್‌ಗೆ ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಸವಾಲು ಹಾಕಿದ್ದಾರೆ. ನಾಳೆಯಿಂದ ಕಾಲೇಜಿಗೆ ಹೋಗುವುದಾಗಿ ಆಕೆ ಹೇಳಿದ್ದಾಳೆ. ತಾಕತ್ ಇದ್ರೆ ಅವಳು ಕಾಲೇಜಿಗೆ ಹೋಗಲಿ ಎಂದು ಕಿಡಿಕಾರಿದ್ದಾರೆ.

ಇದನ್ನೂ ವೀಕ್ಷಿಸಿ: ಪದೇ ಪದೇ ಅಂದರ್ ಆಗ್ತಿದ್ದವ ಮರ್ಡರ್..! ಅವನ ಕೊಲೆಗೆ ಕಾರಣ ಆತ ಕದ್ದ ಮಾಲು..!

Related Video