
ಕೊರೋನಾ ಭೀತಿ: ಕೆಮ್ಮಿದ್ದಕ್ಕೆ ರೈಲಿನಿಂದ ಇಳಿಸಿದ ಕಲಬುರಗಿ ಮಂದಿ!
ಕೆಮ್ಮಿದ್ದಕ್ಕೆ ರೈಲಿನಿಂದ ವ್ಯಕ್ತಿಯೊಬ್ಬನನ್ನ ಕೆಳಗೆ ಇಳಿಸಿದ ಪ್ರಯಾಣಿಕರು| ಲಬುರಗಿ ಜಿಲ್ಲೆಯ ಸೇಡಂ ಪಟ್ಣಣದಲ್ಲಿ ನಡೆದ ಘಟನೆ| ಹುಸೇನ್ ಸಾಗರ್ ರೖಲಿನಲ್ಲಿ ನಡೆದ ಘಟನೆ|
ಕಲಬುರಗಿ[ಮಾ. 21]: ಕೆಮ್ಮಿದ ಎಂಬ ಕಾರಣಕ್ಕೆ ವ್ಯೆಕ್ತಿಯೊಬ್ಬನನ್ನ ರೈಲಿನಿಂದ ಕೆಳಗೆ ಇಳಿಸಿದ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ಪಟ್ಣಣದಲ್ಲಿ ನಡೆದಿದೆ. ಹುಸೇನ್ ಸಾಗರ್ ರೖಲಿನಲ್ಲಿ ಈ ಘಟನೆ ನಡೆದಿದೆ.ಹೈದರಾಬಾದ್ ನಿಂದ ಮುಂಬೈಗೆ ಹೋಗುತ್ತಿದ್ದ ತೆಲಂಗಾಣ ಮೂಲದ ವ್ಯೆಕ್ತಿಯನ್ನ ಸಹ ಪ್ರಯಾಣಿಕರು ರೈಲಿನಿಂದ ಕೆಳಗೆ ಇಳಿಸಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ನೆರೆಯ ದೇಶ ಬಿಟ್ಟು ಚೀನಾದಿಂದ 8000km ದೂರದ ಇಟಲಿಗೆ ಕೊರೋನಾ ಹೋಗಿದ್ಹೇಗೆ?
ಈ ವ್ಯೆಕ್ತಿಗೆ ಮೊದಲೇ ಆರೋಗ್ಯ ಸರಿ ಇರಲಿಲ್ಲ ಎಂದು ತಿಳಿದು ಬಂದಿದೆ. ಹೀಗಾಗಿ ರೈಲಿನಲ್ಲಿ ಕೆಮ್ಮಿದ್ದಾನೆ. ಈತ ಕೆಮ್ಮುತ್ತಿದ್ದಂತೆ ಕೊರೋನಾದಿಂದ ಭಯಭೀತರಾದ ಜನ ವ್ಯೆಕ್ತಿಯನ್ನ ಕೆಳಗೆ ಇಳಿಸಿದ್ದಾರೆ. ಈ ವ್ಯೆಕ್ತಿಯನ್ನ ವೈದ್ಯರು ಪರೀಕ್ಷಿಸಿದ್ದು ಕೊರೋನಾ ಸೋಂಕಿನ ಯಾವುದೇ ಲಕ್ಷಣಗಳು ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
"