Big 3; ವಿದ್ಯುತ್ ಇಲ್ಲದೇ ಭವಿಷ್ಯವೇ ಕತ್ತಲು, ಕಗ್ಗತ್ತಲ ಕೂಪದಲ್ಲಿ ಕಲಬುರಗಿಯ ರಾವೂರ ಗ್ರಾಮ
ಕರ್ನಾಟಕದ ಎರಡನೇ ಅತಿ ದೊಡ್ಡ ಜಿಲ್ಲೆ ಎನಿಸಿರುವ ಕಲಬುರಗಿಯ ರಾವೂರ ಗ್ರಾಮದಲ್ಲಿ ಜನರ ಭವಿಷ್ಯವೇ ಕತ್ತಲಲ್ಲಿದೆ. ಅಲ್ಲಿನ ಜನ ಕತ್ತಲಾದರೆ ಸಾಕು ಮೊಂಬತ್ತಿಯಲ್ಲಿ ಜೀವನ ಕಳೆಯುತ್ತಿದ್ದಾರೆ. ಬಿಗ್ 3 ನ್ಯೂಸ್ ನ ವಿಶೇಷ ಸುದ್ದಿ ಇಲ್ಲಿದೆ.
ಕರ್ನಾಟಕದ ಎರಡನೇ ಅತಿ ದೊಡ್ಡ ಜಿಲ್ಲೆ ಎನಿಸಿರುವ ಕಲಬುರಗಿಯ ರಾವೂರ ಗ್ರಾಮದಲ್ಲಿ ಜನರ ಭವಿಷ್ಯವೇ ಕತ್ತಲಲ್ಲಿದೆ. ಅಲ್ಲಿನ ಜನ ಕತ್ತಲಾದರೆ ಸಾಕು ಮೊಂಬತ್ತಿಯಲ್ಲಿ ಜೀವನ ಕಳೆಯುತ್ತಿದ್ದಾರೆ. ಮಕ್ಕಳು ಕ್ಯಾಂಡಲ್ ಬೆಳಕಿನಲ್ಲಿ ಓದು ಬರಹ ಮಾಡುತ್ತಿದ್ದಾರೆ. ಸ್ವಾತಂತ್ರ್ಯ ಸಿಕ್ಕಿ 75 ವರ್ಷವಾದ್ರೂ ಇಲ್ಲಿ ಮಾತ್ರ ವಿದ್ಯುತ್ ವ್ಯವಸ್ಥೆ ಇಲ್ಲ. ಇಲ್ಲಿನ ಜನ ಕತ್ತಲಲ್ಲೇ ಓಡಾಟ ನಡೆಸಿ ನೀರು ತರುತ್ತಾರೆ ಎಂದರೆ ನಂಬಲೇ ಬೇಕು. ಕತ್ತಲಲ್ಲೇ ಓದು, ಕತ್ತಲಲ್ಲೇ ಊಟ, ಕತ್ತಲಲ್ಲೇ ನಿದ್ರೆ. ಒಟ್ಟು ಇವರ ಬದುಕೇ ಕತ್ತಲು. ಹೀಗಾಗಿ ಸುವರ್ಣನ್ಯೂಸ್ ನ ಬಿಗ್ 3 ನ್ಯೂಸ್ ತಂಡ ಈ ಭಾಗಕ್ಕೆ ಕರೆಂಟ್ ಕೊಡಿಸುವ ಭರವಸೆ ನೀಡಿದೆ. ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆಯಲಿದೆ.