ಕಲಬುರಗಿ: ರೌಡಿಗಳ ಬೆವರಿಸಿಳಿಸಿದ ಪೊಲೀಸ್ ಕಮಿಷನರ್‌

* ರೌಡಿಗಳಿಗೆ ಬಿಸಿ ಮುಟ್ಟಿಸಿದ ಪೊಲೀಸ್ ಕಮಿಷನರ್
* ಪಾಲಿಕೆ ಚುನಾವಣೆ ಸಂದರ್ಭದಲ್ಲಿ ಬಾಲ ಬಿಚ್ಚದಂತೆ ಎಚ್ಚರಿಕೆ
* ಸೈಲೆಂಟ್ ಆಗಿದ್ರೆ ಒಳ್ಳೆಯದ್ದು, ಸಮಾಜಘಾತುಕ ಕೆಲಸದಲ್ಲಿ ಭಾಗಿಯಾದ್ರೆ ಗಡಿಪಾರು 
 

First Published Aug 28, 2021, 10:23 AM IST | Last Updated Aug 28, 2021, 10:23 AM IST

ಕಲಬುರಗಿ(ಆ.28): ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ ಹಿನ್ನಲೆಯಲ್ಲಿ ನಗರ ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿ ರೌಡಿಗಳ ಪರೇಡ್ ನಡೆಸಲಾಗಿದೆ. 'ಎ' ಡಿವಿಷನ್ ನಾಲ್ಕು ಪೊಲೀಸ್ ಠಾಣೆಗಳ ವ್ಯಾಪ್ತಿಯ 100 ಕ್ಕೂ ಅಧಿಕ ರೌಡಿಗಳು ಪರೇಡ್‌ನಲ್ಲಿ ಹಾಜರಾಗಿದ್ದರು. ತಲೆಗೂದಲು, ದಾಡಿ ಬಿಟ್ಟವರಿಗೆ ಪೊಲೀಸ್ ಕಮಿಷನರ್‌ಎನ್ ರವಿಕುಮಾರ್ ಹಿಗ್ಗಾಮುಗ್ಗಾ ಗೂಸಾ ಕೊಟ್ಟಿದ್ದಾರೆ. ಕೆಲ ರೌಡಿ ಶೀಟರಗಳಿಗೆ ಉಗಿದು, ಬೆನ್ನಿಗೆ ಬಾರಿಸಿ, ರೌಡಿಸಂ ಮಾಡೋದಕ್ಕೆ ಗುತ್ತಿಗೆ ಪಡೆದುಕೊಂಡಿದ್ದಿರಾ? ಅಂತಾ ಪೊಲೀಸ್ ಕಮಿಷನರ್ ತರಾಟೆಗೆ ತೆಗೆದುಕೊಂಡಿದ್ದಾರೆ. 

ಮೈಸೂರು ಪ್ರಕರಣ,.. ನಾಯಕರ  ಅರ್ಥವಿಲ್ಲದ ಹೇಳಿಕೆಗಳು!