ಬಾಗಿನ ಅರ್ಪಣೆ ಮುನ್ನವೇ ಕಬಿನಿ ಜಲಾಶಯ ಖಾಲಿ..ಖಾಲಿ..!

ಸಿಎಂ ಬಾಗಿನ ಅರ್ಪಿಸುವ ಮುನ್ನವೇ ಕಬಿನಿ ಜಲಾಶಯ ಬರಿದಾಗುತ್ತಿದೆ. ತಮಿಳುನಾಡಿಗೆ ನೀರನ್ನು ಹರಿಸುತ್ತಿರುವುದೇ ಇದಕ್ಕೆ ಕಾರಣ ಎನ್ನಲಾಗ್ತಿದೆ.
 

First Published Aug 20, 2023, 11:58 AM IST | Last Updated Aug 20, 2023, 11:58 AM IST

ಮೈಸೂರು: ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸುವ ಮುನ್ನವೇ ಅದು ಖಾಲಿಯಾಗಿದೆ. 20 ದಿನಗಳ ಹಿಂದೆಯಷ್ಟೇ ಜಲಾಶಯ ಭರ್ತಿಯಾಗಿತ್ತು. ತಮಿಳುನಾಡಿನ ನೀರು ಬಿಡುತ್ತಿರುವ ಹಿನ್ನೆಲೆ ಕಬಿನಿ ಜಲಾಶಯ (Kabini Reservoir) ಖಾಲಿಯಾಗುವ ಹಂತಕ್ಕೆ ಬಂದಿದೆ. 2284 ಅಡಿ ಸಾಮರ್ಥ್ಯದ ಜಲಾಶಯದಲ್ಲಿ 2277.90 ಅಡಿ ನೀರು(Water) ಮಾತ್ರ ಇದೆ. ಜಲಾಶಯದಿಂದ ನದಿಗೆ 7380 ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ. ಬರಿದಾಗುತ್ತಿರುವ ಜಲಾಶಯದಿಂದ ರೈತರಲ್ಲಿ ಆತಂಕ ಹೆಚ್ಚಾಗುತ್ತಿದೆ. ರಾಜ್ಯ ಸರ್ಕಾರ ನಮ್ಮ ರೈತರ ಹಿತವನ್ನು ನೋಡದೇ ತಮಿಳುನಾಡಿಗೆ ನೀರನ್ನು ಬಿಡುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ. 

ಇದನ್ನೂ ವೀಕ್ಷಿಸಿ:  ರಾಜ್ಯ ರಾಜಕೀಯದಲ್ಲಿ ‘ಆಪರೇಷನ್ ಹಸ್ತ’ ಪಾಲಿಟಿಕ್ಸ್: ಕಾಂಗ್ರೆಸ್ ತಂತ್ರಕ್ಕೆ ಪ್ರತಿತಂತ್ರ ಹೆಣೆಯಲು ಕಮಲ ಪ್ಲ್ಯಾನ್‌ !