Asianet Suvarna News Asianet Suvarna News

ರಾಜ್ಯ ರಾಜಕೀಯದಲ್ಲಿ ‘ಆಪರೇಷನ್ ಹಸ್ತ’ ಪಾಲಿಟಿಕ್ಸ್: ಕಾಂಗ್ರೆಸ್ ತಂತ್ರಕ್ಕೆ ಪ್ರತಿತಂತ್ರ ಹೆಣೆಯಲು ಕಮಲ ಪ್ಲ್ಯಾನ್‌ !

ಮಾತುಕತೆಯ ಹಂತದಲ್ಲಿ ಶಾಸಕರ ಬೇಡಿಕೆಗಳ ಕುರಿತು ಚರ್ಚೆ
ಶಾಸಕರ ಬೇಸರ ಶಮನ ಮಾಡಲು ರಾಜ್ಯ ನಾಯಕರ ತೀರ್ಮಾನ
ಕೇಂದ್ರ ನಾಯಕರನ್ನು ಭೇಟಿ ಮಾಡಿಸಲು ರಾಜ್ಯ ನಾಯಕರ ಚಿಂತನೆ

ರಾಜ್ಯದಲ್ಲಿ ಆಪರೇಷನ್‌ ಹಸ್ತ ಪಾಲಿಟಿಕ್ಸ್‌ ನಡೆಯುತ್ತಿರುವ ಹಿನ್ನೆಲೆ ಕಾಂಗ್ರೆಸ್‌ (Congress) ತಂತ್ರಕ್ಕೆ ಪ್ರತಿತಂತ್ರ ಹೆಣೆಯಲು ಬಿಜೆಪಿ(BJP) ಪ್ಲ್ಯಾನ್‌ ಮಾಡುತ್ತಿದೆ. ತಮ್ಮ ಶಾಸಕರನ್ನು ಕಟ್ಟಿಹಾಕಿಕೊಳ್ಳಲು ಬಿಜೆಪಿ ರಣತಂತ್ರ ಹೂಡುತ್ತಿದೆ. ಈ ಮೂಲಕ ಶಾಸಕರನ್ನು ತಮ್ಮಲ್ಲೇ ಉಳಿಸಿಕೊಳ್ಳಲು ಬಿಜೆಪಿ ಮುಂದಾಗಿದೆ. ಬಿಎಸ್‌ವೈ(BSY) ನಿವಾಸದಲ್ಲಿ ನಡೆದ ಸಭೆಯಲ್ಲಿ ಶಾಸಕರ ಉಳಿಸಿಕೊಳ್ಳಲು ಪ್ಲ್ಯಾನ್ ಮಾಡಲಾಗಿದ್ದು, ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಪಕ್ಷದಲ್ಲಿ ಸಹಮತ ಮೂಡಿದೆ. 2 ಹಂತಗಳಲ್ಲಿ ‘ಆಪರೇಷನ್ ಹಸ್ತ’ಕ್ಕೆ ಬ್ರೇಕ್ ಹಾಕಲು ತೀರ್ಮಾನ ಮಾಡಲಾಗಿದೆ. ಶಾಸಕರ ರಾಜಕೀಯ, ವೈಯಕ್ತಿಕ ಚಿಂತನೆ ಕುರಿತು ಸಮಾಲೋಚನೆ ನಡೆಸಿ, ಅವರ ಬೇಡಿಕೆಗಳ ಬಗ್ಗೆ ವರಿಷ್ಠರ ಹಂತದಲ್ಲಿ 2ನೇ ಹಂತದ ಚರ್ಚೆ ನಡೆಸಲಾಗುವುದು. ಕೇಂದ್ರ ನಾಯಕರ ಸಮ್ಮುಖದಲ್ಲೇ ಸಮಸ್ಯೆ ಬಗೆಹರಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. 

ಇದನ್ನೂ ವೀಕ್ಷಿಸಿ:  ಜನರಿಗೆ ಶಾಕ್ ಕೊಟ್ಟ ಗೃಹಜ್ಯೋತಿ ಯೋಜನೆ: ಸಿಕ್ಕಿಲ್ಲ ಉಚಿತ ಬಿಲ್.. ಹಣ ಕಟ್ಟಿ ಎಂದ ಬೆಸ್ಕಾಂ..!

Video Top Stories