Shivamogga Violence: ಮುಸ್ಲಿಮ್ ಹಿರಿಯರೇ, ಗೂಂಡಾಗಳಿಗೆ ಬುದ್ಧಿ ಹೇಳಿ: ಈಶ್ವರಪ್ಪ
Shivamogga Assault Case: ಯಾರು ಗೂಂಡಾಳಿದ್ದಾರೆ ಅವರಿಗೆ ಬುದ್ಧಿ ಹೇಳಿ ಎಂದು ಮಾಜಿ ಸಚಿವ ಈಶ್ವರಪ್ಪ ಹೇಳಿದ್ದಾರೆ
ಬೆಂಗಳೂರು (ಆ. 16): ಮುಸ್ಲಿಮ್ ಹಿರಿಯರೇ, ಗೂಂಡಾಗಳಿಗೆ ಬುದ್ಧಿ ಹೇಳಿ ಎಂದು ಮಾಜಿ ಸಚಿವ ಈಶ್ವರಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿ ನಡೆದ ಗಲಾಟೆ ಬಗ್ಗೆ ಬೆಂಗಳೂರಲ್ಲಿ ಮಾತನಾಡಿರುವ ಈಶ್ವರಪ್ಪ "ಯಾರು ಗೂಂಡಾಳಿದ್ದಾರೆ ಅವರಿಗೆ ಬುದ್ಧಿ ಹೇಳಿ, ಇಲ್ಲದಿದ್ರೆ ಹಿಂದೂ ಸಮಾಜ ನೋಡಿಕೊಳ್ಳುತ್ತೆ, ಈಗಾಗಲೇ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇನೆ" ಎಂದ ಹೇಳಿದ್ದಾರೆ. ನಗರದಲ್ಲಿ ಕಳೆದ ಎರಡು ದಿನಗಳ ಹಿಂದೆ ಶುರುವಾದ ವೀರ ಸಾವರ್ಕರ್ ಪೋಟೋ ವಿವಾದ ಮತ್ತೆ ಭುಗಿಲೆದ್ದಿದೆ.
ಸೋಮವಾರ ಅಮೀರ್ ಅಹಮ್ಮದ್ ವೃತ್ತದಲ್ಲಿ ಹಾಕಲಾಗಿದ್ದ ಸಾವರ್ಕರ್ ಭಾವಚಿತ್ರದ ಫ್ಲೆಕ್ಸನ್ನು ಅನ್ಯ ಕೋಮಿನ ಗುಂಪೊಂದು ತೆಗೆಯಲು ಯತ್ನಿಸಿದ್ದರಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರಿಂದ ಲಘು ಲಾಠಿ ಪ್ರಹಾರ ನಡೆದಿದೆ. ಇದರ ನಡುವೆ ಗಾಂಧಿ ಬಜಾರ್‌ನ ಉಪ್ಪಾರ ಕೇರಿಯಲ್ಲಿ ಯುವಕನೊಬ್ಬನಿಗೆ ಚಾಕು ಇರಿಯಲಾಗಿದೆ. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಮತ್ತು ಭದ್ರಾವತಿ ನಗರ ವ್ಯಾಪ್ತಿಯಲ್ಲಿ ಆಗಸ್ಟ್ 18ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ದೇಶಭಕ್ತರ ಫ್ಲೆಕ್ಸ್ ತೆರವು ಮಾಡಿದ ಕಿಡಿಗೇಡಿಗಳ ಬಂಧಿಸಿ: ನಳಿನ್‌ಕುಮಾರ್ ಕಟೀಲ್