ಕಲಬುರಗಿ ಪಾಲಿಕೆ: ಬಿಜೆಪಿ ಜೊತೆ ಗುರುತಿಸಿಕೊಳ್ಳದಂತೆ ಜೆಡಿಎಸ್‌ ಎಚ್ಚರಿಕೆ ಹೆಜ್ಜೆ

*  ಮೈತ್ರಿ ವಿಚಾರದಲ್ಲಿ ಜೆಡಿಎಸ್‌ ಎಚ್ಚರಿಕೆ ಹೆಜ್ಜೆ 
*  ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರೆ ರಾಜಕೀಯ ದೃಷ್ಟಿಯಿಂದ ಜೆಡಿಎಸ್‌ಗೆ ಒಳಿತು
*  ನೇರವಾಗಿ ಬಿಜೆಪಿ ಜೊತೆ ಗುರುತಿಸಿಕೊಂಡರೆ ಅಲ್ಪ ಸಂಖ್ಯಾತ ಮತ ಕೈಕತಪ್ಪುವ ಭೀತಿ

First Published Sep 11, 2021, 9:23 AM IST | Last Updated Sep 11, 2021, 9:23 AM IST

ಕಲಬುರಗಿ(ಸೆ.11):  ಕಲಬುರಗಿ ಪಾಲಿಕೆಯ ಮೈತ್ರಿ ವಿಚಾರದಲ್ಲಿ ಜೆಡಿಎಸ್‌ ಎಚ್ಚರಿಕೆಯ ಹೆಜ್ಜೆ ಇಟ್ಟಿದೆ. ಹೌದು, ನೇರವಾಗಿ ಬಿಜೆಪಿ ಜೊತೆ ಗುರುತಿಸಿಕೊಳ್ಳದಂತೆ ಜೆಡಿಎಸ್‌ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ನೇರವಾಗಿ ಗುರುತಿಸಿಕೊಂಡರೆ ಅಲ್ಪ ಸಂಖ್ಯಾತ ಮತಗಳು ಕೈಕತಪ್ಪುವ ಭೀತಿ ಇದೆ. ಯೋಚಿಸಿ ಮುಂದಿನ ಹೆಜ್ಜೆ ಇಡಬೇಕಾದ ಪರಿಸ್ಥಿತಿಯಲ್ಲಿ ಜೆಡಿಎಸ್‌ ಇದೆ. ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರೆ ರಾಜಕೀಯ ದೃಷ್ಟಿಯಿಂದ ಜೆಡಿಎಸ್‌ಗೆ ಒಳಿತು. ಇದು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರ ನಿಲುವು ಆಗಿದೆ ಅಂತ ತಿಳಿದು ಬಂದಿದೆ. ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳಲು ಎಚ್‌ಡಿಕೆ ಒಲುವು ತೋರಿಸಿದ್ದಾರೆ. 

ರಾಜ್ಯಕ್ಕೂ ಬಾವಲಿ ಕಾಟ.. ಗಣೇಶ ಹಬ್ಬದ ನಡುವೆ ಬೇಡ ಹುಚ್ಚಾಟ