Janardhana Reddy: ಹನುಮಧ್ವಜ ಹೋರಾಟದಲ್ಲಿ ಭಾಗಿಯಾಗಿ ಘರ್‌ವಾಸ್ಸಿ ಸೂಚನೆ ಕೊಟ್ರಾ ಜನಾರ್ದನ ರೆಡ್ಡಿ ?

ಹನುಮ ಧ್ವಜ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ಈ ಹೋರಾಟದಲ್ಲಿ ಶಾಸಕ ಜನಾರ್ದನ ರೆಡ್ಡಿ ಭಾಗಿಯಾಗಿದ್ದಾರೆ.
 

First Published Jan 29, 2024, 12:32 PM IST | Last Updated Jan 29, 2024, 12:35 PM IST

ಮಂಡ್ಯದ ಕೆರಗೋಡುವಿನಲ್ಲಿ ಹನುಮ ಧ್ವಜ(Hanuman flag) ತೆರವು ಮಾಡಿರುವುದನ್ನು ವಿರೋಧಿಸಿ ಬಿಜೆಪಿ(BJP) ಮತ್ತು ಜೆಡಿಎಸ್‌ (JDS) ಪ್ರತಿಭಟನೆ ನಡೆಸುತ್ತಿವೆ. ಕೆರಗೋಡು ಗ್ರಾಮದಿಂದ ಹಿಂದೂ ಕಾರ್ಯಕರ್ತರು ಪ್ರತಿಭಟನೆ(Protest) ಆರಂಭಿಸಿದ್ರು. ಪಾದಯಾತ್ರೆಯಲ್ಲಿ ಸಾವಿರಾರು ಹಿಂದೂ ಕಾರ್ಯಕರ್ತರು ಭಾಗಿಯಾಗಿದ್ದು, ಹನುಮ ಧ್ವಜ ಹಿಡಿದು ಜೈ ಶ್ರೀರಾಮ್, ಜೈ ಹನುಮಾನ್ ಘೋಷಣೆ ಕೂಗುತ್ತಿದ್ದಾರೆ. ಇನ್ನೂ ಈ ಪಾದಯಾತ್ರೆಯಲ್ಲಿ ಜನಾರ್ದನ ರೆಡ್ಡಿ(Janardhana Reddy) ಸಹ ಭಾಗಿಯಾಗಿದ್ದಾರೆ. ಈ ಮೂಲಕ ಅವರು ಬಿಜೆಪಿ ಸೇರುವ ಮುನ್ಸೂಚನೆ ಕೊಟ್ರಾ ಎಂಬ ಮಾತು ಕೇಳಿಬರುತ್ತಿದೆ. ಕಳೆದ 40 ವರ್ಷದಿಂದ ಇಲ್ಲಿನ ಗ್ರಾಮಸ್ಥರು ಹನುಮ ಧ್ವಜ ಹಾರಿಸುತ್ತಿದ್ದಾರೆ. ಅಂತದ್ರಲ್ಲಿ ರಾಜ್ಯ ಸರ್ಕಾರ ರಾತ್ರೋ ರಾತ್ರಿ ಧ್ವಜವನ್ನು ತೆರವುಗೊಳಿಸಿರುವುದು ಸರಿಯಲ್ಲ ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  ಕೌಸಲ್ಯೆಯ ಪುತ್ರನಿಗೆ ಜಗಮಗ ಅಲಂಕಾರ..ಆಭರಣಗಳ ಬೆಲೆ ಎಷ್ಟು ಕೋಟಿ..?