ಕೌಸಲ್ಯೆಯ ಪುತ್ರನಿಗೆ ಜಗಮಗ ಅಲಂಕಾರ..ಆಭರಣಗಳ ಬೆಲೆ ಎಷ್ಟು ಕೋಟಿ..?

ಶ್ರೀರಾಮನಿಗೆ ಹಾಕಲಾದ ಆಭರಣಗಳ ಬೆಲೆ ಎಷ್ಟು ಕೋಟಿ..? 
ದೈವಿಕ ಶಕ್ತಿಯ ಒಡವೆಗಳಿಂದ ರಾಮಲಲ್ಲಾಗೆ ಅಲಂಕಾರ..!
ಮಂದಸ್ಮಿತ ರಾಮನ ಮೂರ್ತಿ ನೋಡಿ ಧನ್ಯರಾದ ಭಕ್ತರು..!

First Published Jan 29, 2024, 8:55 AM IST | Last Updated Jan 29, 2024, 8:56 AM IST

ಕೌಸಲ್ಯೆಯ ಪುತ್ರ ಶ್ರೀರಾಮನ(Lord Rama) ಪಟ್ಟಾಭಿಷೇಕವನ್ನು 500 ವರ್ಷಗಳ ನಂತರ ಅಯೋಧ್ಯೆಯಲ್ಲಿ ಮಾಡಲಾಗಿದೆ. ಇನ್ನೂ ಶ್ರೀರಾಮನಿಗೆ ಆಭರಣಗಳಿಂದ(Jewels) ಅಲಂಕಾರ ಮಾಡಲಾಗಿದ್ದು, ರಾಮನ ಕಣಕಣದಲ್ಲೂ ಚಿನ್ನ, ಮುತ್ತು, ರತ್ನ, ವಜ್ರ, ವೈಢೂರ್ಯ ಹಾಕಲಾಗಿದೆ. ಒಂದೊಂದು ಆಭರಣದ ಬೆಲೆ ಕೋಟಿಗಟ್ಟಲೇ ಇದೆ. ದೈವಿಕ ಶಕ್ತಿಯ ಒಡವೆಗಳಿಂದ ರಾಮಲಲ್ಲಾ ಮೂರ್ತಿಗೆ(Ram Lalla idol) ಅಲಂಕಾರ ಮಾಡಲಾಗಿದೆ. ಇನ್ನೂ ಶ್ರೀರಾಮನ ಕಿರೀಟದ(Crown) ಬೆಲೆ 11 ಕೋಟಿ ರೂಪಾಯಿ ಎನ್ನಲಾಗ್ತಿದೆ. ವಜ್ರ ಮತ್ತು ಮಾಣಿಕ್ಯದಿಂದ ಕಿರೀಟವನ್ನು ವಿನ್ಯಾಸ ಮಾಡಲಾಗಿದೆ. ಅರ್ಧಚಂದ್ರಾಕೃತಿಯ ನೆಕ್ಲೆಸ್‌ನಲ್ಲಿ ಸೂರ್ಯದೇವನ ಚಿತ್ರವಿದೆ. ರಾಮ ವಿಗ್ರಹದ ಹೃದಯ ಭಾಗದಲ್ಲಿ ಕೌಸ್ತುಭ ಮಣಿ ಇದೆ.

ಇದನ್ನೂ ವೀಕ್ಷಿಸಿ:  Mandya: 108 ಅಡಿ ಕೇಸರಿ ಬಣ್ಣದ ಧ್ವಜ ತೆರವು: ಕಾಂಗ್ರೆಸ್‌ ಶಾಸಕ ಗಣಿಗ ರವಿ ವಿರುದ್ಧ ಕಾರ್ಯಕರ್ತರ ಆಕ್ರೋಶ

Video Top Stories