ಹಳ್ಳ ಹಿಡಿದ ಪ್ರಧಾನಿ ಮಹತ್ವಾಕಾಂಕ್ಷೆ ಯೋಜನೆ: ನೆಲಕಚ್ಚಿದ ಜಲ್ ಜೀವನ್ ಮಿಷನ್ !
ಅದು ರಾಜ್ಯದ ಕಟ್ಟ ಕಡೆಯ ಊರು, ಅಲ್ಲಿ ಬದುಕೋದೇ ಒಂದು ಚಾಲೆಂಜ್. ಅಲ್ಲಿ ಹನಿ ನೀರಿಗೂ ಪರದಾಡ್ತಾರೆ ಜನ. ದೇಶದ ಪ್ರಧಾನಿಯೇ ಆ ಯೋಜನೆ ಕೊಟ್ರೂ ಅಧಿಕಾರಿಗಳು, ಜನಪ್ರತಿನಿಧಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ.
ಅದು ಹೇಳಿಕೇಳಿ ಬರದ ನಾಡು, ರಾಜ್ಯದ ಕಟ್ಟಕಡೆಯ ಊರು, ಇಲ್ಲಿ ಪ್ರತಿ ಬೇಸಿಗೆಯಲ್ಲೂ ಹನಿ ನೀರಿಗಾಗಿ(Water) ಪರದಾಡಬೇಕಾಗುತ್ತದೆ. ಇಂತಹ ಬರದ ನಾಡಿನ ಜನ ಪರದಾಟ ತಪ್ಪಿಸಲು ಕೇಂದ್ರ ಸರ್ಕಾರ (Central government) ದೆಹಲಿಯಿಂದ ಹಳ್ಳಿವರೆಗೂ ಜಲ್ ಜೀವನ್ ಮಿಷನ್ ಯೋಜನೆ(Jal Jeevan Mission Scheme) ತಂದಿದೆ. ಆದ್ರೆ ಅಧಿಕಾರಿಗಳು, ಗುತ್ತಿಗೆದಾರರ ನೌಟಂಕಿ ಆಟದಿಂದ ಈ ಯೋಜನೆ ಸಂಪೂರ್ಣ ಹಳ್ಳ ಹಿಡಿದಿದೆ.
ಇದು ಬೀದರ್(Bidar) ಜಿಲ್ಲೆ ಔರಾದ್ ತಾಲೂಕಿನ ಬೇಲೂರು ಗ್ರಾಮ, ಇಲ್ಲಿನ ಜನರ ದಾಹ ನೀಗಿಸಲು ಕೇಂದ್ರ ಸರ್ಕಾರ ಜೀವನ ಮಿಷನ್ ಯೋಜನೆಯಡಿ ಪ್ರತಿ ಮನೆಗೂ ಕುಡಿಯುವ ನೀರಿನ ಪೈಪ್ ಅಳವಡಿಸಿಲಾಗಿದೆ. ಆದ್ರೆ ಸರಿಯಾದ ನಿರ್ವಹಣೆ ಇಲ್ಲದೇ ಜೆಜೆಎಂ ಯೋಜನೆ ಸಂಪೂರ್ಣವಾಗಿ ಹಳ್ಳ ಹಿಡಿದಿದೆ.
ಗುತ್ತಿಗೆದಾರನ ಕಳಪೆ ಕಾಮಗಾರಿಯಿಂದ ಎಲ್ಲೆಂದರಲ್ಲಿ ನೀರು ಸೋರಿ, ರಸ್ತೆಯಲ್ಲೇ ನೀರು ಜಲಾವೃತಗೊಂಡು ಜನರು ಓಡಾಡಲು ಪರದಾಡುವಂತಾಗಿದೆ. ಮತ್ತೊಂದು ಕಡೆ ಬಹಳಷ್ಟು ಮನೆಗಳಲ್ಲಿ ಅಳವಡಿಸಲಾದ ನಳ ಮತ್ತು ಮೀಟರ್ ಅವೈಜ್ಞಾನಿಕವಾಗಿದ್ದು, ನೀರು ಮೀಟರ್ನಲ್ಲೇ ಸೋರಿಕೆಯಾಗುತ್ತಿವೆ. ಇನ್ನೂ ಹಲವೆಡೆ ಜಲ್ ಜೀವನ್ ಮಿಷನ್ ಪೈಪ್ ಒಡೆದು ಕುಡಿಯುವ ನೀರು ಕಲುಷಿಗೊಳ್ಳುತ್ತಿದೆ.
ಇದನ್ನೂ ವೀಕ್ಷಿಸಿ: ಗಬ್ಬೆದ್ದು ನಾರುತ್ತಿದೆ ಇಂದಿರಾ ಕ್ಯಾಂಟೀನ್: ಕ್ಯಾಂಟೀನ್ ಒಳಗೆ ನುಗ್ಗಿದ ಚರಂಡಿ ನೀರು !
ಔರಾದ್ ತಾಲೂಕಿನ ಶೆಂಬೆಳ್ಳಿ ಗ್ರಾಮ ಪಂಚಾಯತಿಯ ವ್ಯಾಪ್ತಿಗೆ ಬರುವ ಬೇಲೂರು ಗ್ರಾಮದಲ್ಲಿ, ಸುಮಾರು 53.7 ಲಕ್ಷ ರೂಪಾಯಿ ವೆಚ್ಚದಲ್ಲಿ 260 ಮನೆಗಳಗೆ ನಳಗಳನ್ನು ಅಳವಡಿಕೆ ಮಾಡಲಾಗಿದ್ದು. ಕಂಟೆಪ್ಪ ಎಂಬ ಗುತ್ತಿಗೆದಾರ ತರಾತುರಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿದ್ದಾರೆ. ಗುತ್ತಿಗೆದಾರ ಕಂಟೆಪ್ಪನ ಕಳಪೆ ಕಾಮಗಾರಿಯಿಂದ ಬೇಲೂರು ಗ್ರಾಮವೇ ನಡುಗಿ ಹೋಗಿದೆ.
ಬೇಲೂರು ಗ್ರಾಮದಲ್ಲಿ ಜೆಜೆಎಂ ಕೊಳಾಯಿಗಳು ಒಡೆದು ನೀರು ಪೋಲಾಗುತ್ತಿದ್ದು. ಮತ್ತೊಂದೆಡೆ ರಸ್ತೆಯಲ್ಲಿ ನೀರು ನಿಂತು ಸಾಂಕ್ರಾಮಿಕ ರೋಗದ ಭೀತಿ ಎದುರಿಸುತ್ತಿದ್ದಾರೆ. ಈಗಾಗಲೇ ಕಲುಷಿತ ನೀರು ಸೇವಿಸಿ ರಾಜ್ಯದ ಹಲವೆಡೆ ಅಸ್ವಸ್ಥರಾಗಿ ಪ್ರಾಣವನ್ನೇ ಬಿಡುತ್ತಿದ್ದಾರೆ. ಆದ್ರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಗಡದ್ ನಿದ್ದೆಗೆ ಜಾರಿದ್ದಾರೆ.