ಗಬ್ಬೆದ್ದು ನಾರುತ್ತಿದೆ ಇಂದಿರಾ ಕ್ಯಾಂಟೀನ್‌: ಕ್ಯಾಂಟೀನ್‌ ಒಳಗೆ ನುಗ್ಗಿದ ಚರಂಡಿ ನೀರು !

ಬಡವರು ಉಪವಾಸದಿಂದ ಮಲಗಬಾರದು. ಕಡಿಮೆ ದರದಲ್ಲಿ ಮೂರು ಹೊತ್ತು ಹೊಟ್ಟೆ ತುಂಬಾ ಊಟ ಮಾಡ್ಬೇಕು ಅನ್ನೋದು ಸಿಎಂ ಸಿದ್ದರಾಮಯ್ಯನವರು ಕನಸು. ಎರಡನೇ ಸಲ ಸಿಎಂ ಆದಮೇಲಂತೂ ಬಂದ್ ಆಗಿದ್ದ ಇಂದಿರಾ ಕ್ಯಾಂಟೀನ್‌ಗಳು ಮತ್ತೆ ಓಪನ್ ಆಗ್ತಿವೆ. ಆದ್ರೆ, ಆ ಜಿಲ್ಲೆಯಲ್ಲಿರೋ ಏಕೈಕ ಇಂದಿರಾ ಕ್ಯಾಂಟೀನ್ ಗಬ್ಬೆದ್ದು ನಾರುತ್ತಿದೆ. 

Share this Video
  • FB
  • Linkdin
  • Whatsapp

ಸಿಎಂ ಸಿದ್ದರಾಮಯ್ಯ(Siddaramaiah) ನೇತೃತ್ವದ ಸರ್ಕಾರ 2013ರಲ್ಲಿ ಅಧಿಕಾರಕ್ಕೆ ಬಂದ ಮೇಲೆ ಬಡವರು ಉಪವಾಸದಿಂದ ಬಳಲಬಾರದು ಅಂತ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹೆಸರಿನಲ್ಲಿ ಇಂದಿರಾ ಕ್ಯಾಂಟೀನ್(Indira Canteen) ಯೋಜನೆ ಜಾರಿಗೆ ತಂದ್ರು, ಆದ್ರೆ, ನಂತರ ಅಧಿಕಾರಕ್ಕೆ ಬಂದ ಬಿಜೆಪಿ(BJP) ಸರ್ಕಾರ ಕೆಲವು ವರ್ಷ ಬಂದ್ ಮಾಡಿತ್ತು. ಇಂದು ಮತ್ತೆ ಸಿದ್ದರಾಮಯ್ಯ ಅವ್ರು ಸಿಎಂ ಆಗಿದ್ದು, ಮತ್ತೆ ಬಡವರ ಹೊಟ್ಟೆ ತುಂಬಿಸುವ ಯೋಜನೆ ಜಾರಿಯಾಗಿದೆ. ಆದ್ರೆ ಬಡವರು, ಕೂಲಿ ಕಾರ್ಮಿಕರು ಹಾಗೂ ನಿರ್ಗತಿಕರಿಗೆ ಮೂರು ಹೊತ್ತು ಹೊಟ್ಟೆ ತುಂಬಿಸುವ ಮಹತ್ವಾಕಾಂಕ್ಷೆ ಯೋಜನೆಯ ಇಂದಿರಾ ಕ್ಯಾಂಟೀನ್ ಮಾತ್ರ ಯಾದಗಿರಿಯಲ್ಲಿ(Yadagiri) ಹಳ್ಳ ಹಿಡಿದಿದೆ ನೋಡಿ.

ಯಾದಗಿರಿ ನಗರದ ಹೃದಯಭಾಗವಾದ ಗಂಜ್ ಏರಿಯಾದಲ್ಲಿರುವ ಈ ಇಂದಿರಾ ಕ್ಯಾಂಟೀನ್ ದುರ್ವಾಸನೆಯಿಂದ ನಾರುವಂತಾಗಿದೆ. ಕ್ಯಾಂಟೀನ್ ಒಳಗಡೆ ಆವರಿಸಿಕೊಂಡ ಚರಂಡಿ ನೀರು ದುರ್ನಾತದಿಂದ ಸಾರ್ವಜನಿಕರು ಹೈರಾಣಾಗಿದ್ದಾರೆ. ಜನರು ಊಟ ಮಾಡುವಾಗ ಹಾಗೂ ಊಟ ಬಡಿಸುವ ಸಿಬ್ಬಂದಿ, ಮೂಗಿಗೆ ಬಟ್ಟೆ ಕಟ್ಟಿಕೊಂಡು ಊಟ ಮಾಡುವಂತಾಗಿದೆ. 

ಇಲ್ಲಿ ಪ್ರತಿ ದಿನ ಪ್ರತಿದಿನ ಬೆಳಗ್ಗೆ ಹೊತ್ತು 300ಕ್ಕೂ ಹೆಚ್ಚು ಜನರು ತಿಂಡಿ ಸೇವಿಸ್ತಾರೆ. 400ಕ್ಕೂ ಅಧಿಕ ಜನರು ಮಧ್ಯಾಹ್ನದ ಊಟ ಸೇವಿಸ್ತಾರೆ. ರಾತ್ರಿ ವೇಳೆಯೂ ಹಲವು ಜನರು ಕಡಿಮೆ ದರದಲ್ಲಿ ಊಟ ಮಾಡಿ ಹೊಟ್ಟೆ ತುಂಬಿಸಿಕೊಳ್ತಾರೆ. ಆದ್ರೆ, ಕ್ಯಾಂಟೀನ್ನಲ್ಲಿ ಸರಿಯಾದ ಮೆನ್ಯು ಬೋರ್ಡ್ ಇಲ್ಲ. ಜನರಿಗೆ ಗೊತ್ತಾಗಲು ಇಂದಿರಾ ಕ್ಯಾಂಟೀನ್ ಹೆಸರೇ ಇಲ್ಲ. ಲೈಟ್ ಇಲ್ಲ, ಈ ಯೋಜನೆಯನ್ನ ನಗರಸಭೆ ಹಳ್ಳ ಹಿಡಿಸಿ ಹಾಕಿದೆ.

ಈ ಇಂದಿರಾ ಕ್ಯಾಂಟೀನ್ ಅನ್ನು ವಿಜಯಪುರ ಮೂಲದ ವ್ಯಕ್ತಿಯೊಬ್ಬ ಗುತ್ತಿಗೆ ಪಡೆದಿದ್ದಾನೆ. ಆದ್ರೆ ಸರ್ಕಾರ ಕಳೆದ ಎಂಟು ತಿಂಗಳಿಂದ ಗುತ್ತಿಗೆದಾರರ ಹಣವನ್ನು ಸಹ ಬಿಡುಗಡೆ ಮಾಡಿಲ್ಲ. ಗುತ್ತಿಗೆದಾರ ಕೂಡ ತನ್ನ ಸ್ವಂತ ಹಣದಿಂದ ಇಂದಿರಾ ಕ್ಯಾಂಟೀನ್ ಅನ್ನು ನಿರ್ವಹಣೆ ಮಾಡ್ತಿದ್ದಾರೆ. ಇದು ಗುತ್ತಿಗೆದಾರಿಗೆ ಒಂದು ಕಡೆ ಸಂಕಟವಾಗಿದೆ. ಇದರಿಂದಾಗಿ ಸರಿಯಾಗಿ ಅಂದ್ರೆ ಮೆನ್ಯುಗೆ ತಕ್ಕಂತೆ ಊಟ ಹಾಗೂ ತಿಂಡಿ ಸಿಗ್ತಿಲ್ಲ. ಸರ್ಕಾರ ಸರಿಯಾಗಿ ಹಣವನ್ನು ಸಹ ನೀಡಿದ್ರೆ ಅವ್ರು ಕೂಡ ವ್ಯವಸ್ಥಿತವಾದ ಊಟ ಹಾಗೂ ತಿಂಡಿಯನ್ನು ನೀಡ್ತಿದ್ರು, ಆದ್ರೆ ಸರ್ಕಾರದ ನಿರ್ಲಕ್ಷ್ಯತನದಿಂದ ಜನರ ಹೊಟ್ಟೆಗೆ ಸರಿಯಾದ ಊಟ ಸಿಗ್ತಿಲ್ಲ.

ಇದನ್ನೂ ವೀಕ್ಷಿಸಿ:  ಜಿ-20 ಸಭೆ: ಹೆಲಿಕಾಪ್ಟರ್‌ನಿಂದ ಲಕ್ಸುರಿ ಕಾರ್ ತನಕ..ಹೇಗಿರಲಿದೆ ಭದ್ರತೆ ?

Related Video