ಬಸವನಗುಡಿ ವಾರ್ಡ್ ಹೆಸರು ಬದಲಾವಣೆ: ಹೋರಾಟದ ಎಚ್ಚರಿಕೆ ನೀಡಿದ ನಿವಾಸಿಗಳು
ಕರ್ನಾಟಕ ಗೆದ್ದ ಕಾಂಗ್ರೆಸ್ ಸರ್ಕಾರ ಈಗ ಬಿಬಿಎಂಪಿ ವಾರ್ಡ್ಗಳ ಹೆಸರು ಬದಲಾವಣೆಗೆ ಮುಂದಾಗಿದೆ. ಅದ್ರಲ್ಲೂ ಬೆಂಗಳೂರಿನ ಒಂದು ಪುರಾತನ ವಾರ್ಡ್ ಹೆಸರು ಬದಲಿಸಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಬೆಂಗಳೂರಿನ ಫೇಮಸ್ ವಾರ್ಡ್‌ಗಳ ಪೈಕಿ ಮೊದಲ ಸ್ಥಾನ ಅಂದ್ರೆ ಅದು ಬಸವನಗುಡಿ(Basavanagudi). ಆದ್ರೆ ಬಿಬಿಎಂಪಿ(BBMP) ಇತ್ತೀಚೆಗೆ ಪ್ರಕಟಿಸಿದ 225 ವಾರ್ಡ್ ಗಳ ಪಟ್ಟಿಯಲ್ಲಿ ಕೆಲವು ವಾರ್ಡ್ ಗಳ ಹೆಸರನ್ನು ಬದಲಾಯಿಸಿದೆ. ಈ ಪೈಕಿ ಬಸವನಗುಡಿ ವಾರ್ಡ್ ಕೂಡ ಒಂದು. ಈ ಮೂಲಕ ಲಕ್ಷಾಂತರ ಜನರ ಭಾವನೆಯ ಪ್ರತೀಕವಾದ ಹೆಸರನ್ನು ಬದಲಾಯಿಸುವ ಮೂಲಕ ಹೊಸ ಸಂಕಷ್ಟವೊಂದನ್ನು ಬಿಬಿಎಂಪಿ ಮೈಮೇಲೆ ಎಳೆದುಕೊಂಡಿದೆ. ಬಸವನಗುಡಿಯಲ್ಲಿ ಒಟ್ಟು 6 ವಾರ್ಡ್‌ಗಳಿವೆ. ಇವುಗಳಲ್ಲಿ ಕೆಲವು ಗಡಿ ಬದಲಿಸಿ ಹೆಸರನ್ನೂ ಬದಲಾವಣೆ ಮಾಡಲಾಗಿದೆ. ಬಸವನಗುಡಿ ಬದಲಿಗೆ ದೊಡ್ಡಗಣಪತಿ ವಾರ್ಡ್(Dodganapati Ward) ಎಂದು ಹೊಸದಾಗಿ ನಾಮಕರಣ ಮಾಡಲಾಗಿದೆ. ಈ ಬಗ್ಗೆ ಯಾವ ಸಾರ್ವಜನಿಕರಿಗೂ ಮಾಹಿತಿ ಕೊಟ್ಟಿಲ್ಲ. ಇದರಿಂದ ಬಿಬಿಎಂಪಿಗೆ ಏನು ಲಾಭ ಇದೆ ಅಂತ ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಅನೇಕರು ಐತಿಹಾಸಿಕ ಹೆಸರನ್ನು ಬದಲಾಯಿಸುವ ಈ ನಿರ್ಧಾರ ಯಾಕೆ ಎಂದು ಪ್ರಶ್ನಿಸುತ್ತಿದ್ದಾರೆ. ಜೊತೆಗೆ ಸ್ಥಳೀಯ ಸಂಘಟನೆಗಳು ಬೃಹತ್ ಹೋರಾಟದ ಎಚ್ಚರಿಕೆ ನೀಡಿದೆ.
ಇದನ್ನೂ ವೀಕ್ಷಿಸಿ: Weekly-Horoscope: ಇಂದಿನಿಂದ ಶರತ್ ಕಾಲ ಆರಂಭ..ನಿಮ್ಮ ರಾಶಿಯ ವಾರದ ಭವಿಷ್ಯ ಹೇಗಿದೆ ?