Asianet Suvarna News Asianet Suvarna News

India @75: 5ನೇ ದಿನಕ್ಕೆ ಕಾಲಿಟ್ಟ ಎಎಸ್ ಪಾಟೀಲ್ ನಡಹಳ್ಳಿ ಯುವಜನ ಸಂಕಲ್ಪ ನಡಿಗೆ

Azadi Ka Amrit Mahotsav: ವಿಜಯಪುರದ ಮುದ್ದೇಬಿಹಾಳ ಕ್ಷೇತ್ರದ ಬಿಜೆಪಿ ಶಾಸಕ ಎಎಸ್ ಪಾಟೀಲ್ ನಡಹಳ್ಳಿ ಯುವಜನ ಸಂಕಲ್ಪ ನಡಿಗೆ ಹಮ್ಮಿಕೊಂಡಿದ್ದಾರೆ.
 

Aug 9, 2022, 5:38 PM IST

ವಿಜಯಪುರ (ಆ. 09): 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ (Azadi Ka Amrit Mahotsav) ಅಂಗವಾಗಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಕ್ಷೇತ್ರದ ಬಿಜೆಪಿ ಶಾಸಕ ಎಎಸ್ ಪಾಟೀಲ್ ನಡಹಳ್ಳಿ ಯುವಜನ ಸಂಕಲ್ಪ (Yuva Sankalpa Nadige) ನಡಿಗೆ ಹಮ್ಮಿಕೊಂಡಿದ್ದಾರೆ.  ಯುವಜನ ಸಂಕಲ್ಪ ನಡಿಗೆ ಇಂದು (ಮಂಗಳವಾರ) 5 ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಮುದ್ದೆಬೀಹಾಳ ತಾಲೂಕಿನ ಹೀರೆಮೂರಾಳ ಗ್ರಾಮದಿಂದ ನಾಲ್ವತವಾಡಕ್ಕೆ ನಡಿಗೆ ಸಾಗಿದೆ. 

75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಸದೃಢ ಭಾರತಕ್ಕಾಗಿ ಆಲಮಟ್ಟಿಯಿಂದ ತಾಳಿಕೋಟೆವರೆಗೆ  8 ದಿನಗಳ ಕಾಲ 75 ಕಿಮೀ ಉದ್ದದ ಯುವಜನ ಸಂಕಲ್ಪ ನಡಿಗೆ ಆಯೋಜಿಲಾಗಿದೆ.   ಸಾವಿರಾರು ವಿದ್ಯಾರ್ಥಿಗಳು, ಮಾಜಿ ಸೈನಿಕರು, ಶಿಕ್ಷಕರು, ಸರ್ಕಾರಿ ನೌಕರರು, ಯುವಕರು, ಜನಪ್ರತಿನಿಧಿಗಳು ನಡಿಗೆಯಲ್ಲಿ ಭಾಗಿಯಾಗಿದ್ದಾರೆ.

ಪ್ರೇರಣೆ ನೀಡುವ ಸಂಕಲ್ಪದೊಂದಿಗೆ ತಿರಂಗಾ Rallyಯಲ್ಲಿ ಜೋಶಿ ಭಾಗಿ

ಯುವಕರಲ್ಲಿ ದೇಶ ಭಕ್ತಿಯ ಕಿಚ್ಚು ಹೆಚ್ಚಿಸೋದಕ್ಕೆ ಈ ಯುವಜನ ಸಂಕಲ್ಪ‌ ನಡಿಗೆ ಎಂದು ನಡಹಳ್ಳಿ ಪುತ್ರ ಭರತಗೌಡ ಎ ಪಾಟೀಲ್ ಹೇಳಿದ್ದಾರೆ.  ಯುವ ಜನರು ಯುವ ಜನ ಸಂಕಲ್ಪ ನಡಿಗೆಯಲ್ಲಿ ಹೆಚ್ಚೆಚ್ಚು ಭಾಗವಹಿಸಬೇಕು ಎಂದು ಶಾಸಕ ನಡಹಳ್ಳಿ ಕರೆ ನೀಡಿದ್ದಾರೆ.