Asianet Suvarna News Asianet Suvarna News

Har Ghar Tiranga : ಪ್ರೇರಣೆ ನೀಡುವ ಸಂಕಲ್ಪದೊಂದಿಗೆ ತಿರಂಗಾ Rallyಯಲ್ಲಿ ಜೋಶಿ ಭಾಗಿ 

ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷ ತುಂಬಿದ ಶುಭ ಸಂದರ್ಭದಲ್ಲಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ಪ್ರೇರಣೆ ನೀಡುವ ಸಂಕಲ್ಪದೊಂದಿಗೆ ತಿರಂಗಾ Rallyಯಲ್ಲಿ ಕೇಂದ್ರ ಸಚಿವ ಪ್ರೆಲ್ಹಾದ್ ಜೋಶಿ ಭಾಗಿಯಾದರು.

 

Joshi participates in the Har ghar Tiranga rally with an inspiring resolve rav
Author
Bangalore, First Published Aug 3, 2022, 2:12 PM IST

ದೆಹಲಿ (ಆ.3) : ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷ ತುಂಬಿದ ಶುಭ ಸಂದರ್ಭದಲ್ಲಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ಪ್ರೇರಣೆ ನೀಡುವಲ್ಲಿ ಇಂದು ಸಂಸದರ ತಿರಂಗಾ ಬೈಕ್ ರ‌್ಯಾಲಿ ನಡೆಯಿತು..  ದೆಹಲಿಯ ಕೆಂಪುಕೋಟೆಯಿಂದ ವಿಜಯ್ ಚೌಕ್‌ವರೆಗೆ ಸಂಸದರು ತ್ರಿವರ್ಣ ಧ್ವಜ ಹಿಡಿದು ಬೈಕ್ ರ‌್ಯಾಲಿ ನಡೆಸಿದರು.. ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ತಿರಂಗಾ ಬೈಕ್ ರ‌್ಯಾಲಿಗೆ ಚಾಲನೆ ನೀಡಿದರು..

ಅಮೃತ ಮಹೋತ್ಸವದ(Amrita Mahotsava) ಹಿನ್ನೆಲೆಯಲ್ಲಿ ದೇಶದಲ್ಲಿ ರಾಷ್ಟ್ರೀಯ ಭಾವನೆಯನ್ನ ಇಮ್ಮಡಿಗೊಳಿಸುವಂತ ಹಲವು ಕಾರ್ಯಕ್ರಮಗಳನ್ನ ಕೇಂದ್ರ ಬಿಜೆಪಿ ಸರ್ಕಾರ(BJP Govt) ಹಮ್ಮಿಕೊಂಡಿದೆ.. ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರು ತಮ್ಮ ಮನ್ ಕೀ ಬಾತ್(Mann Ki Baat) ಕಾರ್ಯಕ್ರಮದಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷ ಪೂರ್ಣಗೊಂಡಿರುವ ಕುರಿತು ತಮ್ಮ ಮನದಾಳದ ಮಾತುಗಳನ್ನ ಆಡಿದ್ದರು.. ಅಮೃತ ಮಹೋತ್ಸವ(Azadi Ka Amrit Mahotsav ) ಒಂದು ಅಭಿಯಾನವಾಗಬೇಕು.. ಈ ನಿಟ್ಟಿನಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯೂ ಅಜಾದಿ ಕೀ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ತಮ್ಮ ಪಾಲ್ಗೊಳ್ಳುವಿಕೆಯನ್ನ ತೋರ್ಪಡಿಸುವಂತೆ ಕರೆ ನೀಡಿದ್ದರು..

ಈ ನಡುವೆ ದೇಶದ ಸಂಸದರನ್ನ ಒಟ್ಟುಗೂಡಿಸಿಕೊಂಡು ತಿರಂಗ Rallyಯಲಿ ಕಾರ್ಯಕ್ರಮ ನಡೆಸುವ ಕುರಿತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ(Pralhad Josh) ಕೇಂದ್ರ ಸಂಸ್ಕೃತಿ ಇಲಾಖೆಗೆ ಸೂಚನೆ ನೀಡಿದ್ದರು. ಇದು ಬಿಜೆಪಿಯ ಕಾರ್ಯಕ್ರಮವಲ್ಲ..  ಇದೊಂದು ರಾಷ್ಟ್ರಾಭಿಮಾನ ಹೆಚ್ಚಿಸುವ ಮಹತ್ವದ ಅಭಿಯಾನ..‌ ದೇಶದ ಜನರನ್ನ ಪ್ರತಿನಿಧಿಸುವ ಸಂಸದರು ತ್ರಿವರ್ಣ ಧ್ವಜ ಹಿಡಿದು ದೇಶದ ಜನರಿಗೆ ಸಂದೇಶ ಸಾರುವುದು ಮುಖ್ಯ. ಈ ನಿಟ್ಟಿನಲ್ಲಿ  ಎಲ್ಲ ಸಂಸದರು ಪಾಲ್ಗೊಳ್ಳುವಂತೆ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ಕರೆ ನೀಡಿದ್ದರು..

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ  ಕೇಂದ್ರ ಸಂಸ್ಕೃತಿ ಸಚಿವಾಲಯ  ಕಾರ್ಯಕ್ರಮವನ್ನು ಆಯೋಜಿಸಿತ್ತು. ತಿರಂಗಾ Rallyಗೆ ಚಾಲನೆ ನೀಡಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು(M Venkaiah Naidu) ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದ ಪ್ರಲ್ಹಾದ್ ಜೋಶಿ ಅವರು ಧ್ವಜ ಹಾರಿಸುವ ಮೂಲಕ ಸಂಭ್ರಮಿಸಿದರು. ತಿರಂಗಾ ಬೈಕ್ Rallyಲಿಯಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಸಂಸದರು ಪಾಲ್ಗೊಂಡಿದ್ದರು..

Follow Us:
Download App:
  • android
  • ios