Asianet Suvarna News Asianet Suvarna News

India@75: ಚಿಕ್ಕಬಳ್ಳಾಪುರದಲ್ಲಿ ತ್ರಿವರ್ಣ ನಡಿಗೆಗೆ ಡಾ. ಸುಧಾಕರ್ ಚಾಲನೆ

Azadi Ka Amrit Mahotsav: ಸ್ವಾತಂತ್ರ್ಯೋತ್ಸವ  ತ್ರಿವರ್ಣ ನಡಿಗೆಗೆ  ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಚಾಲನೆ ನೀಡಿದರು

ಚಿಕ್ಕಬಳ್ಳಾಪುರ (ಆ. 12): ಚಿಕ್ಕಬಳ್ಳಾಪುರದಲ್ಲಿ ಸ್ವಾತಂತ್ರ್ಯೋತ್ಸವ  ತ್ರಿವರ್ಣ ನಡಿಗೆಗೆ  ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ (Dr K Sudhakar) ಚಾಲನೆ ನೀಡಿದರು. ಸ್ವಾತಂತ್ರ್ಯೋತ್ಸವ  ತ್ರಿವರ್ಣ ನಡಿಗೆಯಲ್ಲಿ ನೂರಾರು ಮಂದಿ ವಿದ್ಯಾರ್ಥಿಗಳು ಸಾರ್ವಜನಿಕರು ಭಾಗಿಯಾಗಿದ್ದರು. ತ್ರಿವರ್ಣ ನಡಿಗೆಯುದ್ದಕ್ಕೂ ಸ್ವಾತಂತ್ರ್ಯ ಘೋಷಣೆಗಳು ಮೊಳಗಿದವು. ದೇಶಾದ್ಯಂತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ ಮಾಡಲಾಗುತ್ತಿದೆ.  ಚಿಕ್ಕಬಳ್ಳಾಪುರದಲ್ಲಿ ನಡೆದ ತ್ರಿವರ್ಣ ನಡಗೆ  75ನೇ ಸ್ವಾತಂತ್ರ್ಯದ ಸಡಗರವನ್ನು  ಇಮ್ಮಡಿಗೊಳಿಸಿದೆ. ನಡಿಗೆ ವೇಳೆ 2 ಸಾವಿರ ಅಡಿ ಉದ್ದದ ತ್ರಿವರ್ಣ ಧ್ವಜ ಮೆರವಣಿಗೆ ಮೂಲಕ ಹರ್‌ ಘರ್‌ ತಿರಂಗಾ (Har Ghar Tiranga) ಅಭಿಯಾನ್‌ ಬಗ್ಗೆ ಜಾಗೃತಿ  ಮೂಡಿಸಲಾಯಿತು. 

ಚಿತ್ರದುರ್ಗ: ಕೋಟೆನಾಡಲ್ಲಿ ಗಮನ ಸೆಳೆಯುತ್ತಿರುವ ತ್ರಿವರ್ಣ ಧ್ವಜದ ಲೈಟಿಂಗ್ಸ್