Dharwad| ಅನ್ನದಾತನಿಗೆ ಪೆಟ್ಟಿನ ಮೇಲೆ ಪೆಟ್ಟು, ಬತ್ತದ ಕಣ್ಣೀರು..!
* ಕಂಟಕವಾಗಿರುವ ಮಳೆಗೆ ಅನ್ನದಾತನ ಸ್ಥಿತಿ ಕಂಗಾಲು
* ನೆಲ ಕಚ್ಚಿರುವ ಭತ್ತದ ಬೆಳೆ, ಕಟಾವಿಗೆ ಬಂದ ಕಬ್ಬು
* ನೀರಿನಲ್ಲಿ ಕೊಚ್ಚಿಹೋಯ್ತು ಸಾವಿರಾರು ಎಕರೆ ಬೆಳೆ
ಧಾರವಾಡ(ನ.18): ಧಾರವಾಡ ತಾಲೂಕಿನ ಅಂಬ್ಲಿಕೊಪ್ಪ, ನಿಗದಿ,ದೇವಗೇರಿ, ಸರಿದಂತೆ 10 ಕ್ಕೂ ಹೆಚ್ಚು ಗ್ರಾಮಗಳಲ್ಲಿಯ ರೈತರ ಬೆಳೆದ ಬೆಳೆಗಳು ನೀರಿನಲ್ಲಿ ಕೊಚ್ಚಿ ಹೋಗಿದೆ. ಇನ್ನು ಕಳೆದ ಮೂರು ವರ್ಷಗಳಿಂದ ಹಿಂಗಾರು ಬೆಳೆ, ಮುಂಗಾರು ಬೆಳೆಗಳು ನಮ್ಮ ಕೈ ಸೇರ್ತಿಲ್ಲ, ಇನ್ನೇನು ಕಟಾವಿಗೆ ಬಂದ ಬೆಳೆಗಳು ರೈತರ ಕೈಗೆ ಸೇರ್ತಿಲ್ಲ, ನಮ್ಮ ಊರಿನ ಹಳ್ಳ ಹೂಳೆತ್ತದ ಕಾರಣಕ್ಕೆ ಹಳ್ಳದ ಪಕ್ಕ ಇರೋ ಜಮಿನುಗಳಲ್ಲಿ ನೀರು ನುಗ್ಗಿ 1000 ಕ್ಕೂ ಹೆಚ್ಚು ಎಕರೆಯಷ್ಟು ಬೆಳೆ ನೀರಿನಲ್ಲಿ ಕೊಚ್ಚಿಕ್ಕೊಂಡು ಹೋಗಿದೆ. ಹೀಗೆಲ್ಲ ಪದೆ ಪದೆ ರೈತರಿಗೆ ಮಳೆರಾಯ ತೊಂದರೆ ಕೊಟ್ರೆ ನಾವು ನೇಣು ಹಾಕಿಕೊಳ್ಳೋ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
Mysuru : ಮುಂದುವರಿದ ಮಳೆಯಬ್ಬರ : ಅಂಗಡಿ ಮಳಿಗೆಗಳು ನೆಲಸಮ
ಇನ್ನು ಅಂಬ್ಲಿಕೊಪ್ಪ ಗ್ರಾಮಸ್ಥರು ಕಲಘಟಗಿ ಶಾಸಕಸಿಎಂ ನಿಂಬನ್ನವರ ನಮ್ಮ ಗ್ರಾಮಕ್ಕೆ ಬಂದು ಮೂರು ವರ್ಷ ಕಳೆದಿದೆ. ಕೇವಲ ಚುನಾವಣೆ ಇದ್ದಾಗ ಮಾತ್ರ ಬಂದು ಮತ ಹಾಕಿಸಿಕೊಂಡು ಹೋಗ್ತಾರೆ. ಆದರೆ ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ, ಅವರು ನಮ್ಮ ಗ್ರಾಮಕ್ಕೆ ಶಾಸಕರಾದ ಬಳಿಕ ಒಂದೇ ಒಂದು ದಿನ ಬಂದು ರೈತರ ಸಮಸ್ಯೆಗಳ ಬಗ್ಗೆ ಚಕಾರ ಎತ್ತಲ್ಲ ಎಂದು ರೈತರು ಶಾಸಕರ ವಿರುದ್ಧ ಕಿಡಿಕಾರಿದ್ದಾರೆ. ಇನ್ನು 1000 ಕ್ಕೂ ಹೆಚ್ಚು ಎಕರೆಯಷ್ಟು ಬೆಳೆದ ಬೆಳೆಗಳಿಗೆ ಪರಿಹಾರವನ್ನ ಕೊಡಬೇಕು ನಾವು ಬೆಳೆದ ಬೆಳೆ ಎಲ್ಲವೂ ನೀರು ಪಾಲಾಗಿದೆ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಮುಂದೆ ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.