
ಪಾನ್ ಶಾಪ್ ಮಾಲೀಕನಿಗೆ ಕೊರೋನಾ; ಪಾನ್ ಜಗಿದವರಿಗೆ ಶೋಧ
ಪಾನ್ ಶಾಪ್ ಮಾಲೀಕನಿಗೆ ಒಕ್ಕರಿಸಿದ ಕೋವಿಡ್| ಗದಗ ನಗರದ ಹಳೇ ಬಸ್ ನಿಲ್ದಾಣದ ಹತ್ತಿರ ಶಿಗ್ಲಿಯಲ್ಲಿರುವ ಪಾನ್ ಶಾಪ್| ಸುಮಾರು 150 ಮಂದಿಗೆ ಪಾನ್ ನೀಡಿದ್ದ ಕೊರೋನಾ ಸೋಂಕಿತ|
ಗದಗ(ಜು.18): ಪಾನ್ ಶಾಪ್ ಮಾಲೀಕನೊಬ್ಬನಿಗೆ ಮಹಾಮಾರಿ ಕೊರೋನಾ ವಕ್ಕರಿಸಿದ ಘಟನೆ ನಗರದಲ್ಲಿ ನಡೆದಿದೆ. ಇದೀಗ ಈ ಪಾನ್ ಶಾಪ್‌ನಲ್ಲಿ ಪಾನ್ ತೆಗೆದುಕೊಂಡವರ ಎದೆಯಲ್ಲಿ ಡವ ಡವ ಆರಂಭವಾಗಿದೆ. ನಗರದ ಹಳೇ ಬಸ್ ನಿಲ್ದಾಣದ ಹತ್ತಿರ ಶಿಗ್ಲಿಯಲ್ಲಿರುವ ಪಾನ್ ಶಾಪ್ ಮಾಲೀಕನಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
BBMP ನಿರ್ಲಕ್ಷ್ಯಕ್ಕೆ ಬೆಂಗಳೂರಲ್ಲಿ ಮತ್ತೊಂದು ಬಲಿ..!
ಈ ಪಾನ್ ಶಾಪ್‌ನಲ್ಲಿ ಪಾನ್ ತಿಂದವರಿಗೆಲ್ಲ ಕೊರೋನಾ ಭಯ ಶುರುವಾಗಿದೆ. ಕೊರೋನಾ ಸೋಂಕಿತ ಪಾನ್ ಶಾಪ್ ಮಾಲೀಕ ಸುಮಾರು 150 ಮಂದಿಗೆ ಪಾನ್ ನೀಡಿದ್ದನು ಎಂದ ಮಾಹಿತಿ ಲಭ್ಯವಾಗುತ್ತಿದೆ.